ಟಿ20 ವಿಶ್ವಕಪ್‌ ಮಿಸ್ ಮಾಡಿಕೊಳ್ಳಲಿದ್ದಾರಾ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್?!

ಲಂಡನ್‌: ಇಂಗ್ಲೆಂಡ್‌ನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಮುಂಬರಲಿರುವ ಟಿ20 ವಿಶ್ವಕಪ್‌ ಟೂರ್ನಿ ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ. ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಸ್ಟೋಕ್ಸ್ ಆಡುವ ನಿರೀಕ್ಷೆ ಕಡಿಮೆಯಿದೆ. ವಿಶ್ವಕಪ್‌ ಟ್ರೋಫಿಗಿಂತ ನಮಗೆ ಆಟಗಾರರ ವೈಯಕ್ತಿಕ ಬದುಕು, ಆರೋಗ್ಯ ಚೆನ್ನಾಗಿರೋದೇ ಮುಖ್ಯ ಎಂದು ಆಂಗ್ಲ ಕೋಚ್ ಕ್ರಿಸ್ ಸಿಲ್ವರ್‌ವುಡ್ ಹೇಳಿರುವುದರಿಂದ ಇಂಥದ್ದೊಂದು ಅನುಮಾನ ಮೂಡಿದೆ.

ICC World Test Championship: ಮತ್ತೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ ಭಾರತICC World Test Championship: ಮತ್ತೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ ಭಾರತ

30ರ ಹರೆಯದ ಬೆನ್ ಸ್ಟೋಕ್ಸ್ ಸದ್ಯ ಅನಿರ್ಧಿಷ್ಟಾವಧಿ ಬಿಡುವಿನಲ್ಲಿದ್ದಾರೆ. ಮಾನಸಿಕ ಆರೋಗ್ಯ ಮತ್ತು ಕೈ ಬೆರಳಿನ ಗಾಯದ ಚೇತರಿಕೆಯ ಸಂಗತಿಗಳೆಲ್ಲವೂ ಸೇರಿ ತಾನು ಕೊಂಚ ಕಾಲ ವಿಶ್ರಾಂತಿ ಪಡೆಯುವುದಾಗಿ ಸ್ಟೋಕ್ಸ್ ಹೇಳಿದ್ದರಿಂದ ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ವಿಶ್ರಾಂತಿ ನೀಡಿದೆ. ಕಳೆದ ಜುಲೈನಿಂದಲೂ ಸ್ಟೋಕ್ಸ್ ಇಂಗ್ಲೆಂಡ್ ತಂಡದಿಂದ ಹೊರಗಿದ್ದಾರೆ.

ಇಂಗ್ಲೆಂಡ್ ಮೀಸಲು ಆಟಗಾರರ ಪಟ್ಟಿಯಲ್ಲೂ ಸ್ಟೋಕ್ಸ್‌ಗೆ ಸ್ಥಾನವಿಲ್ಲ?

ಇಂಗ್ಲೆಂಡ್ ಮೀಸಲು ಆಟಗಾರರ ಪಟ್ಟಿಯಲ್ಲೂ ಸ್ಟೋಕ್ಸ್‌ಗೆ ಸ್ಥಾನವಿಲ್ಲ?

ಇದೇ ಶುಕ್ರವಾರ ಅಂದರೆ ಸೆಪ್ಟೆಂಬರ್‌ 10ರೊಳಗೆ ಟಿ20ಐ ವಿಶ್ವಕಪ್‌ನಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ತಮ್ಮ 15 ಮಂದಿ ಆಟಗಾರರ ಅಂತಿಮ ಪಟ್ಟಿ ನೀಡಬೇಕೆಂದು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹೇಳಿದೆ. ಇಂಗ್ಲೆಂಡ್ ಕ್ರಿಕೆಟ್‌ ತಂಡದಲ್ಲಿ ಬೆನ್ ಸ್ಟೋಕ್ಸ್ 15 ಜನರ ತಂಡದಲ್ಲೂ ಕಾಣಿಸಿಕೊಳ್ಳೋದು ಅನುಮಾನವಾಗಿದೆ. ಇಂಗ್ಲೆಂಡ್ ತಂಡ ಟಿ20ಐ ವಿಶ್ವಕಪ್‌ಗೆ 15 ಜನರ ತಂಡ ಮತ್ತು 3 ಸ್ಟ್ಯಾಂಡ್‌ಬೈ ಆಟಗಾರರನ್ನು ಹೆಸರಿಸಲು ಯೋಚನೆ ಮಾಡುತ್ತಿದೆ. ಆದರೆ ಮೀಸಲು ಆಟಗಾರರ ಪಟ್ಟಿಯಲ್ಲೂ ಸ್ಟೋಕ್ಸ್ ಹೆಸರು ಸೇರಿಸದಿರಲು ಇಂಗ್ಲೆಂಡ್ ಯೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ. ಸದ್ಯ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲೂ ಸ್ಟೋಕ್ಸ್ ಆಡುತ್ತಿಲ್ಲ.

ಸ್ಟೋಕ್ಸ್ ದೈಹಿಕ, ಮಾನಸಿಕ ಆರೋಗ್ಯವೇ ನಮಗೆ ಮುಖ್ಯ

ಸ್ಟೋಕ್ಸ್ ದೈಹಿಕ, ಮಾನಸಿಕ ಆರೋಗ್ಯವೇ ನಮಗೆ ಮುಖ್ಯ

"ನಾವು ಇನ್ನೂ ಬೆನ್ ಸ್ಟೋಕ್ಸ್ ಜೊತೆ ಮಾತನಾಡಿಲ್ಲ, ಕಾರಣ ಅವರನ್ನು ಸಾಧ್ಯವಾದಷ್ಟು ಅವರ ಪಾಡಿಗೆ ಬಿಡಬೇಕು, ಅವರಿಗೆ ಚೇತರಿಸಿಕೊಳ್ಳಲು ಹೆಚ್ಚು ಕಾಲಾವಕಾಶ ಕೊಡಬೇಕೆನ್ನುವ ಕಾರಣಕ್ಕೆ. ಆದರೆ ನಮ್ಮ ಹೊರಗಡೆ ಜನ ಸ್ಟೋಕ್ಸ್ ಬಗ್ಗೆ ಬೇರೆ ಬೇರೆ ಮಾತನಾಡುತ್ತಿದ್ದಾರೆ. ಆ ಕಾರಣಕ್ಕಾದರೂ ನಾವು ಶೀಘ್ರ ಸ್ಟೋಕ್ಸ್ ಜೊತೆ ವಿಶ್ವಕಪ್‌ ಬಗ್ಗೆ ಮಾತನಾಡಬೇಕೆಂದಿದ್ದೇವೆ. ಆದರೆ ನಾವು ಅವರ ಮೇಲೆ ಯಾವುದೇ ರೀತಿಯ ಒತ್ತಡ ಹೇರಲು ಹೋಗುವುದಿಲ್ಲ. ಅವರಿಗೆ ನಾವು ಅವಸರ ಮಾಡುವುದಿಲ್ಲ. ಬದಲಾಗಿ ನಮ್ಮಿಂದ ಅವರಿಗೆ ಏನು ಸಹಾಯ ಬೇಕೋ ಅದನ್ನು ಮಾಡುತ್ತೇವೆ. ಎಲ್ಲದಕ್ಕೂ ಮಿಗಿಲಾಗಿ ನನ್ನ ಮೊದಲ ಆದ್ಯತೆಯೇನಂದರೆ ಆತ ಎಲ್ಲಾ ರೀತಿಯಲ್ಲಿ ಒಕೆ ಅನ್ನಿಸಬೇಕು. ಆತ ತಾನು ಕಂಫರ್ಟ್‌ನಲ್ಲಿದ್ದೇನೆ ಅನ್ನಿಸಬೇಕು. ಸ್ಟೋಕ್ಸ್ ದೈಹಿಕ, ಮಾನಸಿಕ ಆರೋಗ್ಯವೇ ನಮಗೆ ಮುಖ್ಯ," ಎಂದು ಸಿಲ್ವರ್‌ವುಡ್ ಹೇಳಿದ್ದಾರೆ.

ಮೋದಿ ಫೋಟೋ ಶೇರ್ ಮಾಡಿ ಇಂಗ್ಲೆಂಡ್ ಕಾಲೆಳೆದ ವೀರೇಂದ್ರ ಸೆಹ್ವಾಗ್ | Oneindia Kannada
ಟಿ20 ವಿಶ್ವಕಪ್‌ ಪ್ರಮುಖ ಮಾಹಿತಿ

ಟಿ20 ವಿಶ್ವಕಪ್‌ ಪ್ರಮುಖ ಮಾಹಿತಿ

ಟಿ20 ವಿಶ್ವಕಪ್ 2021ರಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಜೊತೆಗೆ ಪಪುವಾ ನ್ಯೂಗಿನಿ, ನಮೀಬಿಯಾ, ನೆದರ್ಲೆಂಡ್, ಓಮನ್ ಮತ್ತು ಸ್ಕಾಟ್ಲೆಂಡ್ ತಂಡಗಳು ಕೂಡ ಪಾಲ್ಗೊಳ್ಳಲಿವೆ. 16 ತಂಡಗಳು ಪಾಲ್ಗೊಳ್ಳುವ ಟಿ20 ವಿಶ್ವಕಪ್‌, ಅಕ್ಟೋಬರ್‌ 17ರಂದು ಆರಂಭಗೊಂಡು ನವೆಂಬರ್ 14ರಂದು ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ. 2016ರ ಟಿ20 ವಿಶ್ವಕಪ್‌ ಬಳಿಕ ನಡೆಯುತ್ತಿರುವ ಮೊದಲ ಈ ವಿಶ್ವಕಪ್‌ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ನ ದುಬೈ ಅಬುದಾಬಿ ಮತ್ತು ಶಾರ್ಜಾ ಸ್ಟೇಡಿಯಂಗಳಲ್ಲಿ ನಡೆಯಲಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಐರ್ಲೆಂಡ್‌ ತಂಡಗಳನ್ನು ಸೇರಿಸಿ 8 ರಾಷ್ಟ್ರಗಳ ಕ್ವಾಲಿಫೈಯಿಂಗ್ ಟೂರ್ನಮೆಂಟ್ ಸೆಪ್ಟೆಂಬರ್ 23ರಿಂದ ಓಮನ್ ಮತ್ತು ಯುಎಇಯ ಒಂದು ತಾಣದಲ್ಲಿ ನಡೆಯಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, September 7, 2021, 20:47 [IST]
Other articles published on Sep 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X