ಕಪಿಲ್ ಸಾಧನೆ ಸಮಕ್ಕೆ ನಿಂತ ಭುವನೇಶ್ವರ್ ಕುಮಾರ್!

Posted By:
Bhuvaneshwar Kumar

ಕೇಪ್ ಟೌನ್, ಜನವರಿ 05: ಇಲ್ಲಿನ ನ್ಯೂಲ್ಯಾಂಡ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂದಿನಿಂದ ಮೂರು ಟೆಸ್ಟ್‌‌‌ ಪಂದ್ಯಗಳ ಸರಣಿ ಆರಂಭಗೊಂಡಿದೆ. ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಮೊದಲ ಓವರ್ ನಲ್ಲೇ ಭಾರತದ ವೇಗಿ ಭುವನೇಶ್ವರ್ ಕುಮಾರ್ ಸಾಧನೆ ಮಾಡಿದ್ದಾರೆ.

ಟೀಂ ಇಂಡಿಯಾದ ಮಧ್ಯಮ ವೇಗದ ಬೌಲರ್‌‌ ಭುವನೇಶ್ವರ್‌‌ ಕುಮಾರ್‌‌ ಅವರು ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರ ಸಾಧನೆ ನೆನಪಿಸಿದ್ದಾರೆ.

1992-93ರ ಸರಣಿಯಲ್ಲಿ ವಿದೇಶದಲ್ಲಿ ನಡೆದ ಟೆಸ್ಟ್‌‌ ಪಂದ್ಯಗಳಲ್ಲಿ ಮೊದಲ ಓವರ್‌‌ನಲ್ಲಿ ಕಪಿಲ್ ದೇವ್ ವಿಕೆಟ್ ಗಳಿಸಿದ್ದರು. ಆನಂತರ ಈ ಸಾಧನೆ ಯಾರು ಮಾಡಿರಲಿಲ್ಲ. ಈಗ ಭುವನೇಶ್ವರ್ ಅವರು ಮಾಡಿದ್ದಾರೆ. ಇಬ್ಬರೂ ಕೂಡಾ ದಕ್ಷಿಣ ಆಫ್ರಿಕಾ ವಿರುದ್ಧವೇ ಈ ಸಾಧನೆ ಮಾಡಿರುವುದು ವಿಶೇಷ.

1992-93ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾಗ ಟೀಂ ಇಂಡಿಯಾದ ವೇಗಿ ಕಪಿಲ್‌ ದೇವ್‌ ಅವರು,ಮೊದಲ ಓವರ್‌ನಲ್ಲಿ ಜಿಮ್ಮಿ ಕುಕ್‌‌ ವಿಕೆಟ್‌‌ ಪಡೆದುಕೊಂಡಿದ್ದರು.

ಈಗ ಶುಕ್ರವಾರ(ಜನವರಿ 05)ದಂದು ಆರಂಭವಾದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಮೊದಲ ಓವರ್‌ ನಲ್ಲಿ ಭುವನೇಶ್ವರ್‌‌ ಕುಮಾರ್‌ ಅವರು, ಡೀಲ್ ಎಲ್ಗರ್(0) ವಿಕೆಟ್‌‌ ಪಡೆದುಕೊಂಡರು. ನಂತರ ಮಾರ್ಕ್ ರಾಮ್ (5), ಹಶಿಮ್ ಆಮ್ಲಾ (3), ಕ್ವಿಂಟಾನ್ ಡಿಕಾಕ್ (43) ವಿಕೆಟ್ ಗಳಿಸಿದರು.

ಮೊದಲ ಟೆಸ್ಟ್ ಚಹಾ ವಿರಾಮದ ವೇಳೆಗೆ ದಕ್ಷಿಣ ಆಫ್ರಿಕಾ 230/7 ಗಳಿಸಿತ್ತು. ಎಬಿ ಡಿ ವಿಲಿಯರ್ಸ್ 65 ಹಾಗೂ ಫಾಫ್ ಡು ಪ್ಲೇಸಿಸ್ 62 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, January 5, 2018, 20:09 [IST]
Other articles published on Jan 5, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ