ಭುವನೇಶ್ವರ್ ಕುಮಾರ್ ಡೆತ್ ಓವರ್ ಬೌಲಿಂಗ್ ನಿಜಕ್ಕೂ ಆತಂಕಕಾರಿಯಾಗಿದೆ: ಸುನಿಲ್ ಗವಾಸ್ಕರ್‌

ಡೆತ್‌ ಓವರ್‌ಗಳಲ್ಲಿ ಭಾರತದ ನಿರಂತರ ವೈಫಲ್ಯ ಕುರಿತಾಗಿ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದು, ನಿಜಕ್ಕೂ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಈ ಕುರಿತು ಹೆಚ್ಚಿನ ಗಮನ ಹರಿಸಬೇಕಿದೆ ಎಂದಿದ್ದಾರೆ.

ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 208 ರನ್ ಗಳಿಸಿದ್ದರೂ, ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ದೊಡ್ಡ ಮೊತ್ತವನ್ನ ಡಿಫೆಂಡ್ ಮಾಡಿಕೊಳ್ಳುವಲ್ಲಿ ಎಡವಿದೆ. ಹೀಗಾಗಿ ಭಾರತದ ಬೌಲಿಂಗ್ ಕುರಿತಾಗಿ ಸಾಕಷ್ಟು ಚರ್ಚೆ ಶುರುವಾಗಿದ್ದು, ಅದ್ರಲ್ಲೂ ಡೆತ್ ಓವರ್‌ಗಳಲ್ಲಿ ಭಾರತದ ವೈಫಲ್ಯವು ಎದ್ದು ಕಾಣುತ್ತಿದೆ.

ಅಬ್ಬರಿಸಿದ ಮ್ಯಾಥ್ಯೂ ವೇಡ್, ಕ್ಯಾಮರೂನ್ ಗ್ರೀನ್ ಅರ್ಧಶತಕ

ಅಬ್ಬರಿಸಿದ ಮ್ಯಾಥ್ಯೂ ವೇಡ್, ಕ್ಯಾಮರೂನ್ ಗ್ರೀನ್ ಅರ್ಧಶತಕ

ಓಪನರ್ ಆಗಿ ಬಡ್ತಿ ಪಡೆದ ಕ್ಯಾಮರೂನ್ ಗ್ರೀನ್ ಸಿಕ್ಕ ಅವಕಾಶವನ್ನ ಎರಡೂ ಕೈನಲ್ಲಿ ಬಾಚಿಕೊಂಡರು. 30 ಎಸೆತಗಳಲ್ಲಿ 61 ರನ್ ಚಚ್ಚಿದ ಗ್ರೀನ್ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್‌ ಒಳಗೊಂಡಿದ್ದವು. ಸ್ಟೀವ್ ಸ್ಮಿತ್ 35ರನ್‌ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಟಿಮ್ ಡೇವಿಡ್ ಕೂಡ ಪೆವಿಲಿಯನ್ ಸೇರಿಕೊಂಡರು.

ಈ ವೇಳೆಯಲ್ಲಿ ಟೀಂ ಇಂಡಿಯಾ ಯೋಜನೆಯನ್ನ ಬುಡಮೇಲು ಮಾಡಿದ್ದು ಆಸಿಸ್ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್. ಕೊನೆಯ ಡೆತ್‌ ಓವರ್‌ಗಳಲ್ಲಿ ಹರ್ಷಲ್ ಪಟೇಲ್ ಮತ್ತು ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ಹಿಗ್ಗಾಮುಗ್ಗ ತಳಿಸಿದ ವೇಡ್‌ ಕೇವಲ 21 ಎಸೆತಗಳಲ್ಲಿ 45 ರನ್ ಸಿಡಿಸುವ ಮೂಲಕ ತಂಡವನ್ನ ಗೆಲುವಿನ ದಡ ತಲುಪಿಸಿದ್ರು.

ಆಸ್ಟ್ರೇಲಿಯಾ 209ರನ್‌ಗಳನ್ನ ಚೇಸ್ ಮಾಡುವ ಮೂಲಕ ಭಾರತದ ವಿರುದ್ಧ ಗರಿಷ್ಠ ರನ್‌ಗಳ ದಾಟಿ ಗುರಿ ಮುಟ್ಟಿದೆ. ಜೊತೆಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಲೀಡ್ ಸಹ ಪಡೆದಿದೆ.

19ನೇ ಓವರ್‌ನಲ್ಲಿ ಪದೇ ಪದೇ ವೈಫಲ್ಯ ಕಾಣುತ್ತಿರುವ ಭಾರತ

19ನೇ ಓವರ್‌ನಲ್ಲಿ ಪದೇ ಪದೇ ವೈಫಲ್ಯ ಕಾಣುತ್ತಿರುವ ಭಾರತ

ಟಿ20 ಕ್ರಿಕೆಟ್‌ನಲ್ಲಿ 19ನೇ ಓವರ್ ಅತ್ಯಂತ ಪ್ರಮುಖ ಓವರ್ ಎಂದು ಪರಿಗಣಿಸಲಾಗಿದೆ. ಆ ಓವರ್‌ನಲ್ಲಿ, ಭುವನೇಶ್ವರ್ ಮಂಗಳವಾರ ಆಸ್ಟ್ರೇಲಿಯಾ ವಿರುದ್ಧ ತಮ್ಮ ಬೌಲಿಂಗ್ ಸ್ಪೆಲ್‌ನ ಅಂತಿಮ ಓವರ್ ಅನ್ನು ಬೌಲ್ ಮಾಡಿದರು. ಭುವಿ 16 ರನ್‌ಗಳನ್ನು ರನ್‌ಗಳನ್ನು ಬಿಟ್ಟುಕೊಟ್ಟರು ಮತ್ತು ಅವರ ಸ್ಪೆಲ್‌ನ ಅಂತ್ಯದ ವೇಳೆಗೆ ಅವರು 4-0-52-0 ಅನ್ನು ಹೊಂದಿದ್ದರು, ಇದು ಈ ಪಂದ್ಯದಲ್ಲಿ ಬೌಲಿಂಗ್ ಮಾಡಿದ ಯಾವುದೇ ಬೌಲರ್‌ಗಳಿಗಿಂತ ಕೆಟ್ಟದಾಗಿದೆ.

ಇದಕ್ಕೂ ಮುನ್ನ ಹರ್ಷಲ್ ಪಟೇಲ್ 18ನೇ ಓವರ್‌ನಲ್ಲಿ ಆಸೀಸ್ 22 ರನ್ ನೀಡಿದ್ರು. ಭುವಿ ನಾಲ್ಕು ಓವರ್‌ಗಳಲ್ಲಿ ವಿಕೆಟ್ ರಹಿತ 52 ರನ್ ಮತ್ತು ಹರ್ಷಲ್ ನಾಲ್ಕು ಓವರ್‌ಗಳಲ್ಲಿ ವಿಕೆಟ್ ಇಲ್ಲದೆ 49 ರನ್ ಗಳಿಸಿದರು. ಹೀಗಾಗಿ ಅವರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ದಾಳಿ ನಡೆಸಿದರು.

ಔಟ್‌ ಎಂದು ಗೊತ್ತಿದ್ರೂ ಕ್ರೀಸ್‌ನಲ್ಲೇ ನಿಂತಿದ್ದ ಸ್ಟೀವನ್ ಸ್ಮಿತ್: ರೋಹಿತ್ ಶರ್ಮಾ ಅಸಮಾಧಾನ

ಭಾರತದ ಬೌಲಿಂಗ್ ಕುರಿತು ಸುನಿಲ್ ಗವಾಸ್ಕರ್ ತೀವ್ರ ಟೀಕೆ

ಭಾರತದ ಬೌಲಿಂಗ್ ಕುರಿತು ಸುನಿಲ್ ಗವಾಸ್ಕರ್ ತೀವ್ರ ಟೀಕೆ

ಭಾರತದ ಸೋಲಿನ ನಂತರ, ಸುನಿಲ್ ಗವಾಸ್ಕರ್ ಇಂಡಿಯಾ ಟುಡೇಗೆ ಮಾತನಾಡುತ್ತಾ, "ನಾನು ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡಲಿಲ್ಲ. ಇದು ನಿಜವಾಗಿಯೂ ಆತಂಕಕಾರಿಯಾಗಿದೆ. ಭುವನೇಶ್ವರ್ ಕುಮಾರ್ ಅವರಂತಹ ಬೌಲರ್ ಪ್ರತಿ ಬಾರಿಯೂ ಹೆಚ್ಚು ರನ್ ಗಳಿಸುತ್ತಿರುವಾಗ, ಇದು ನಿಜವಾಗಿಯೂ ಆತಂಕಕಾರಿಯಾಗಿದೆ." ಎಂದಿದ್ದಾರೆ.

ಭುವನೇಶ್ವರ್ ಅವರಂತೆಯೇ ಗಾಯದಿಂದ ಕಮ್ ಬ್ಯಾಕ್ ಮಾಡಿರುವ ಹರ್ಷಲ್ ಪಟೇಲ್ ಆತಂಕದಲ್ಲಿದ್ದಾರೆ. ಗಾಯದಿಂದ ಚೇತರಿಸಿಕೊಂಡ ನಂತರ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಹರ್ಷಲ್ ಅವರ ಮೊದಲ ಪಂದ್ಯವಾಗಿದ್ದು, ಅಲ್ಲಿ ಅವರು 4 ಓವರ್‌ಗಳಲ್ಲಿ 49 ರನ್ ನೀಡಿದ್ರು. ಆದಾಗ್ಯೂ, ಇದು ಗಾಯದಿಂದ ಮರಳಿದ ಅವರ ಮೊದಲ ಪಂದ್ಯವಾದ್ದರಿಂದ ಗವಾಸ್ಕರ್‌, ಹರ್ಷಲ್ ಅವರನ್ನು ಸಮರ್ಥಿಸಿಕೊಂಡರು.

"ಹರ್ಷಲ್ ಸುದೀರ್ಘ ವಿರಾಮದ ನಂತರ ಮರಳಿದ್ದಾರೆ. ಅದಕ್ಕಾಗಿಯೇ ವಿಶ್ವಕಪ್‌ಗೆ ಹೋಗುವ ಮೊದಲು ಬೌಲರ್‌ಗಳು ಸಾಕಷ್ಟು ಓವರ್‌ಗಳನ್ನು ಬೌಲ್ ಮಾಡುವುದು ಬಹಳ ಮುಖ್ಯ. ಅದಕ್ಕಾಗಿಯೇ ಭಾರತವು ಕೆಲವು ಏಕದಿನ ಪಂದ್ಯಗಳಲ್ಲಿ ಬುಮ್ರಾ ಅಥವಾ ಹರ್ಷಲ್ ಅವರನ್ನು ಆಡಿಸಬಹುದಿತ್ತು. ಇದ್ರಿಂದ ಸ್ಥಿರತೆಯನ್ನು ಮರಳಿ ಪಡೆಯಬಹುದು. ಹೀಗಾಗಿ ಈ ಕುರಿತಾಗಿ ಟೀಂ ಮ್ಯಾನೇಜ್‌ಮೆಂಟ್ ಗಮನಹರಿಸಬೇಕಿದೆ ಎಂದು ಹರ್ಷಲ್ ಪಟೇಲ್ ಹೇಳಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, September 21, 2022, 19:29 [IST]
Other articles published on Sep 21, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X