ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಔಟ್‌ ಎಂದು ಗೊತ್ತಿದ್ರೂ ಕ್ರೀಸ್‌ನಲ್ಲೇ ನಿಂತಿದ್ದ ಸ್ಟೀವನ್ ಸ್ಮಿತ್: ರೋಹಿತ್ ಶರ್ಮಾ ಅಸಮಾಧಾನ

Rohit sharma

ಮೊಹಾಲಿ ಅಂಗಳದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನ್ನ ಕಾಣುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 0-1ರಿಂದ ಹಿನ್ನಡೆ ಅನುಭವಿಸಿದೆ. 208ರನ್ ದಾಖಲಿಸಿದ್ರೂ ಸಹ ಪ್ರವಾಸಿಗರ ವಿರುದ್ಧ ಮೊತ್ತವನ್ನ ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗದೇ ಕೊನೆಯ ಓವರ್‌ನಲ್ಲಿ ಸೋಲನ್ನ ಒಪ್ಪಿಕೊಂಡಿತು.

ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ನೆರವು ಹಾಗೂ ಕೆ.ಎಲ್ ರಾಹುಲ್ ಬೊಂಬಾಟ್ ಅರ್ಧಶತಕದ ನೆರವಿನಿಂದ ಭಾರತ 6 ವಿಕೆಟ್ ನಷ್ಟಕ್ಕೆ 208ರನ್ ಕಲೆಹಾಕಿತು. ಆದ್ರೆ ಅಕ್ಷರ್ ಪಟೇಲ್ ಹೊರತುಪಡಿಸಿ ಭಾರತದ ಉಳಿದ ಬೌಲರ್‌ಗಳು ದುಬಾರಿಯಾಗಿ ರನ್‌ಗಳನ್ನ ಬಿಟ್ಟುಕೊಟ್ಟ ಪರಿಣಾಮ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಆಸಿಸ್ ಪಂದ್ಯ ಗೆದ್ದು ಬೀಗಿತು.

ಚೇಸಿಂಗ್ ವೇಳೆಯಲ್ಲಿ ಸಾಕಷ್ಟು ಬಾರಿ ಬೌಲಿಂಗ್ ಬದಲಾವಣೆ ಮಾಡಿದ್ರೂ ನಾಯಕ ರೋಹಿತ್ ಶರ್ಮಾ ಕೈ ಹಿಡಿಯುವಲ್ಲಿ ಬೌಲರ್ಸ್ ವಿಫಲಗೊಂಡರು. ಇದೇ ವೇಳೆಯಲ್ಲಿ ಸ್ಟೀವನ್ ಸ್ಮಿತ್‌ ಔಟಾದ್ರೂ ಕೂಡ ಕ್ರೀಸ್‌ ತೊರೆಯದ ಕುರಿತಾಗಿ ರೋಹಿತ್ ಶರ್ಮಾ ಲೇವಡಿ ಮಾಡಿರುವುದು ಸಹ ವೈರಲ್ ಆಗಿದೆ.

ಸ್ಟೀವನ್ ಸ್ಮಿತ್ ನಡೆಗೆ ಅಸಮಾಧಾನಗೊಂಡ ರೋಹಿತ್ ಶರ್ಮಾ

ಸ್ಟೀವನ್ ಸ್ಮಿತ್ ನಡೆಗೆ ಅಸಮಾಧಾನಗೊಂಡ ರೋಹಿತ್ ಶರ್ಮಾ

ಆಸ್ಟ್ರೇಲಿಯಾದ ಮುಖ್ಯ ಬ್ಯಾಟರ್ ಸ್ಟೀವನ್ ಸ್ಮಿತ್ ಪಂದ್ಯದ ಅರ್ಧದಲ್ಲಿ ಚೆಂಡು ಬ್ಯಾಟ್‌ ತಾಗಿ ವಿಕೆಟ್ ಕೀಪರ್ ಕೈ ಸೇರಿದ್ದರೂ ಸಹ ಕ್ರೀಸ್‌ನಲ್ಲಿಯೇ ಉಳಿದು ಕ್ರೀಡಾಸ್ಪೂರ್ತಿ ಮರೆತರು. ಇದರಿಂದ ಅಸಮಾಧಾನಗೊಂಡ ನಾಯಕ ರೋಹಿತ್ ಶರ್ಮಾ ಸ್ಟೀವನ್ ಸ್ಮಿತ್‌ನತ್ತ ಕೈ ತೋರಿಸುತ್ತಾ ಎಂತಹ ನಡೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ಆಸ್ಟ್ರೇಲಿಯಾದ 12 ಓವರ್‌ನ ಬ್ಯಾಟಿಂಗ್ ವೇಳೆಯಲ್ಲಿ ಈ ಘಟನೆ ನಡೆದಿದ್ದು ಉಮೇಶ್ ಯಾದವ್ ಬೌಲಿಂಗ್‌ನಲ್ಲಿ ಔಟ್‌ ಆಗಿದ್ದರೂ ಒಪ್ಪಿಕೊಳ್ಳದ ಸ್ಮಿತ್ ಥರ್ಡ್ ಅಂಪೈರ್ ತೀರ್ಪಿನತ್ತ ಮುಖಮಾಡಿದ್ರು.

Ind vs Aus: 48 ಎಸೆತ 101 ರನ್, ಭುವಿ ಮತ್ತು ಹರ್ಷಲ್ ಪಟೇಲ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ!

ಔಟ್‌ ಇದ್ರೂ ನಾಟೌಟ್ ಎಂದಿದ್ದ ಅಂಪೈರ್

ಇನ್ನು ಉಮೇಶ್ ಯಾದವ್ ಬೌಲಿಂಗ್‌ನಲ್ಲಿ ಸ್ಮಿತ್ ಪ್ಯಾಡಲ್ ಸ್ಕೂಪ್ ಮಾಡಲು ಕ್ರೀಸ್‌ನಲ್ಲಿ ಮುಂದೆ ಸಾಗಿದ್ರು. ಥರ್ಡ್ ಮ್ಯಾನ್ ಕಡೆಗೆ ಶಾಟ್ ಹೊಡೆಯಲು ಸ್ಮಿತ್ ಪ್ರಯತ್ನಿಸಿದ್ರೂ ಸಹ ಆದ್ರೆ ಬ್ಯಾಟ್‌ಗೆ ಚೆಂಡು ತಗುಲಿ ನೇರವಾಗಿ ಕೀಪರ್ ದಿನೇಶ್ ಕಾರ್ತಿಕ್ ಕೈ ಸೇರಿತು.

ಈ ವೇಳೆಯಲ್ಲಿ ಟೀಂ ಇಂಡಿಯಾ ಆಟಗಾರರು ಔಟ್ ಎಂದು ಅಪೀಲ್ ಮಾಡಿದ್ರೂ ಸಹ ಆನ್‌ಫೀಲ್ಡ್ ಅಂಪೈರ್‌ ಔಟ್ ನೀಡಲು ನಿರಾಕರಿಸಿದ್ರು. ಹೀಗಾಗಿ ರೋಹಿತ್ ನೇರವಾಗಿ ರಿವೀವ್‌ ತೆಗೆದುಕೊಂಡರು. ರೋಹಿತ್ ಡಿಆರ್‌ಎಸ್ ತೆಗೆದುಕೊಂಡರು ಸಹ ಸ್ಮಿತ್ ಕ್ರೀಸ್‌ನಲ್ಲೇ ಇರುವುದನ್ನ ಕಂಡು ಬೇಸರಗೊಂಡಿದ್ದಲ್ಲದೆ, ಆಸ್ಟ್ರೇಲಿಯಾದ ಸೂಪರ್‌ಸ್ಟಾರ್‌ನತ್ತ ಕೈ ತೋರಿಸಿ ಏನು ನಿನ್ನ ಈ ನಡೆ ಎಂದು ಪ್ರಶ್ನಿಸುವಂತೆ ಮುಖಭಾವದಲ್ಲಿ ವ್ಯಕ್ತಪಡಿಸಿದ್ರು.

ಥರ್ಡ್‌ ಅಂಪೈರ್‌ ವೀಡಿಯೋವನ್ನ ಪರಿಶೀಲಿಸಿ, ಸ್ಟೀವನ್ ಸ್ಮಿತ್‌ಗೆ ಬ್ಯಾಟ್‌ಗೆ ಚೆಂಡು ತಗುಲಿದ್ರ ಜೊತೆಗೆ ಕೀಪರ್ ಕೈ ಸೇರಿದ್ದು ಖಚಿತವಾಗುತ್ತಿದಂತೆ ಔಟ್ ನೀಡಿದರು.

ವಿವೋ ಪ್ರೊ ಕಬಡ್ಡಿ 9ನೇ ಋತುವಿನ ವೇಳಾಪಟ್ಟಿ ಪ್ರಕಟ: ಅ.7ರಿಂದ ಟೂರ್ನಿ ಆರಂಭ

ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಮ್ಯಾಥ್ಯೂ ವೇಡ್‌

ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಮ್ಯಾಥ್ಯೂ ವೇಡ್‌

ಇನ್ನು ಸ್ಮಿತ್ ಔಟಾದ ಬಳಿಕ ಟೀಂ ಇಂಡಿಯಾ ಯೋಜನೆಯನ್ನ ಬುಡಮೇಲು ಮಾಡಿದ್ದು ಆಸಿಸ್ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್. ಕೊನೆಯ ಡೆತ್‌ ಓವರ್‌ಗಳಲ್ಲಿ ಹರ್ಷಲ್ ಪಟೇಲ್ ಮತ್ತು ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ಹಿಗ್ಗಾಮುಗ್ಗ ತಳಿಸಿದ ವೇಡ್‌ ಕೇವಲ 21 ಎಸೆತಗಳಲ್ಲಿ 45 ರನ್ ಸಿಡಿಸುವ ಮೂಲಕ ತಂಡವನ್ನ ಗೆಲುವಿನ ದಡ ತಲುಪಿಸಿದ್ರು.

ಆಸ್ಟ್ರೇಲಿಯಾ 209ರನ್‌ಗಳನ್ನ ಚೇಸ್ ಮಾಡುವ ಮೂಲಕ ಭಾರತದ ವಿರುದ್ಧ ಗರಿಷ್ಠ ರನ್‌ಗಳ ದಾಟಿ ಗುರಿ ಮುಟ್ಟಿದೆ. ಜೊತೆಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಲೀಡ್ ಸಹ ಪಡೆದಿದೆ.

Story first published: Wednesday, September 21, 2022, 17:55 [IST]
Other articles published on Sep 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X