ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup: 19ನೇ ಓವರ್ ಶಾಪದ ಬಗ್ಗೆ ಭುವನೇಶ್ವರ್ ಕುಮಾರ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ?

Bhuvneshwar Kumar Reaction About His Slog Over Bowling At Asia Cup, T20 Series

ಅಫ್ಘಾನಿಸ್ತಾನ ವಿರುದ್ಧದ ಕೊನೆಯ ಸೂಪರ್ 4 ಹಂತದ ಪಂದ್ಯವನ್ನು ಹೊರತುಪಡಿಸಿ, ಭುವನೇಶ್ವರ್ ಕುಮಾರ್ ಏಷ್ಯಾಕಪ್‌ನಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದರು. ಆದರೆ, ಅಫ್ಘಾನಿಸ್ತಾನದ ವಿರುದ್ಧ ಕೇವಲ 4 ರನ್‌ ನೀಡಿ 5 ವಿಕೆಟ್ ಪಡೆದಿದ್ದರು.

ಭಾರತದ ಅನುಭವಿ ಬೌಲರ್ ಆಗಿರುವ ಭುವನೇಶ್ವರ್ ಕುಮಾರ್ ಬುಮ್ರಾ ಅನುಪಸ್ಥಿತಿಯಲ್ಲಿ ಹೆಚ್ಚಿನ ಜವಾಬ್ದಾರಿ ನಿಭಾಯಿಸಬೇಕಾಗಿತ್ತು. ಆದರೆ, ತಮ್ಮ ಕಳಪೆ ಬೌಲಿಂಗ್ ಪ್ರದರ್ಶನದಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. 19ನೇ ಓವರ್ ಶಾಪವೂ ಇದೇ ಸಮಯದಲ್ಲಿ ಆರಂಭವಾಯಿತು.

ಆತನ ನಿವೃತ್ತಿಗೂ ಮುನ್ನ ಒಂದು ಬಾರಿಯಾದ್ರೂ IPLನಲ್ಲಿ ಅವಕಾಶ ನೀಡಿ: ಸಿಕಂದರ್ ರಾಜಾ ಫ್ಯಾನ್ಸ್ ಒತ್ತಾಯಆತನ ನಿವೃತ್ತಿಗೂ ಮುನ್ನ ಒಂದು ಬಾರಿಯಾದ್ರೂ IPLನಲ್ಲಿ ಅವಕಾಶ ನೀಡಿ: ಸಿಕಂದರ್ ರಾಜಾ ಫ್ಯಾನ್ಸ್ ಒತ್ತಾಯ

ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭುವನೇಶ್ವರ್ 19ನೇ ಓವರ್ ಬೌಲ್ ಮಾಡುವಂತೆ ಕೇಳಿದಾಗ ಪಾಕಿಸ್ತಾನದದ ಗೆಲುವಿಗೆ 12 ಎಸೆತಗಳಲ್ಲಿ 26 ರನ್ ಬೇಕಿತ್ತು, ಅನುಭವಿ ಬೌಲರ್ ಮೇಲೆ ಇಟ್ಟಿದ್ದ ನಂಬಿಕೆ ಸುಳ್ಳಾಗಿತ್ತು, 19ನೇ ಓವರ್ ನಲ್ಲಿ 19 ರನ್ ಬಿಟ್ಟುಕೊಟ್ಟರು, ಪಾಕಿಸ್ತಾನದ ಗೆಲುವಿಗೆ ಸನಿಹವಾಯಿತು. ಆ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಸೋಲನುಭವಿಸಿತ್ತು. ಶ್ರೀಲಂಕಾ ವಿರುದ್ಧ ಕೂಡ 19ನೇ ಓವರ್ ನಲ್ಲಿ 14 ರನ್ ನೀಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲನೇ ಪಂದ್ಯದಲ್ಲೂ ಇದೇ ಮರುಕಳಿಸಿತ್ತು.

ವಿಶ್ವಕಪ್‌ನಲ್ಲಿ ಆಡಿಸದಂತೆ ಒತ್ತಾಯ

ವಿಶ್ವಕಪ್‌ನಲ್ಲಿ ಆಡಿಸದಂತೆ ಒತ್ತಾಯ

ಸತತ ಕಳಪೆ ಪ್ರದರ್ಶನದ ಕಾರಣ ಭುವನೇಶ್ವರ್ ಕುಮಾರ್ ಅವರನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡದಂತೆ ಸಾಕಷ್ಟು ಒತ್ತಾಯ ಕೇಳಿಬಂದಿತ್ತು. ಭುವಿ ಬದಲಿಗೆ ಬೇರೆ ಯಾರಿಗಾದರೂ ಅವಕಾಶ ನೀಡುವಂತೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಆದರೆ, ಬಿಸಿಸಿಐ, ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಭುವನೇಶ್ವರ್ ಮೇಲೆ ನಂಬಿಕೆ ಇಟ್ಟಿದ್ದರು. ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ಅವರು ಉತ್ತಮ ಬೌಲಿಂಗ್ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದರು. ಅದರಂತೆ ಟಿ20 ವಿಶ್ವಕಪ್‌ನಲ್ಲಿ ಭುವನೇಶ್ವರ್ ಕುಮಾರ್ ಮಿಂಚು ಹರಿಸಿದ್ದಾರೆ.

ಟಿ20 ವಿಶ್ವಕಪ್: ಟೀಂ ಇಂಡಿಯಾ ಫಾರ್ಮ್ ಬಗ್ಗೆ ಅಚ್ಚರಿ ಹೇಳಿಕೆ ಇಂಜಮಾಮ್-ಉಲ್-ಹಕ್

ಟಿ20 ವಿಶ್ವಕಪ್‌ನಲ್ಲಿ ಭುವಿ ಮಿಂಚು

ಟಿ20 ವಿಶ್ವಕಪ್‌ನಲ್ಲಿ ಭುವಿ ಮಿಂಚು

ಟಿ20 ವಿಶ್ವಕಪ್‌ನಲ್ಲಿ ಭುವನೇಶ್ವರ್ ಕುಮಾರ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಎರಡು ಪಂದ್ಯಗಳಿಂದ 7 ಓವರ್ ಬೌಲ್ ಮಾಡಿರವ ಭುವನೇಶ್ವರ್ ಕುಮಾರ್ 30 ಡಾಟ್ ಬಾಲ್ ಎಸೆದಿದ್ದಾರೆ. ಏಳು ಓವರ್ ಗಳಲ್ಲಿ 3 ಮೇಡನ್ ಓವರ್ ಮಾಡುವ ಮೂಲಕ ಟಿ20 ಮಾದರಿಯಲ್ಲಿ ಭಾರತದ ಪರವಾಗಿ ಹೆಚ್ಚು ಮೇಡನ್ ಓವರ್ ಮಾಡಿದ ಆಟಗಾರ ಎನಿಸಿಕೊಂಡಿದ್ದಾರೆ.

ಏಷ್ಯಾಕಪ್ ಸ್ಲಾಗ್ ಓವರ್ ಬೌಲಿಂಗ್ ಬಗ್ಗೆ ಟೀಕೆಗಳು ಬಂದಾಗ ನಿಮಗೆ ನೋವುಂಟಾಯಿತೇ ಎನ್ನುವ ಪ್ರಶ್ನೆಗೆ ಭುವನೇಶ್ವರ್ ಕುಮಾರ್ ಉತ್ತರಿಸಿದ್ದಾರೆ.

ಸಾಮಾಜಿಕ ಜಾಲತಾಣದಿಂದ ದೂರ

ಸಾಮಾಜಿಕ ಜಾಲತಾಣದಿಂದ ದೂರ

ತಮ್ಮ ವಿರುದ್ಧದ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, "ಇಷ್ಟು ವರ್ಷಗಳಲ್ಲಿ ಅದು ಕೆಟ್ಟ ದಿನಗಳಾಗಿದ್ದವು, ಮತ್ತು ಆ ದಿನಗಳು ಕಳೆದುಹೋಗಿವೆ. ಎಲ್ಲಾ ಮುಗಿದಿದೆ" ಎಂದು ಹೇಳಿದ್ದಾರೆ.

"ಮಾಧ್ಯಮಗಳು ಮತ್ತು ವ್ಯಾಖ್ಯಾನಕಾರರು (ಅಂತಿಮ ಓವರ್ ಬೌಲಿಂಗ್ ಬಗ್ಗೆ) ಬಹಳಷ್ಟು ವಿಷಯಗಳನ್ನು ಹೇಳಬಹುದು, ಆದರೆ ತಂಡವಾಗಿ ನಾವು ನಮ್ಮ ಏರಿಳಿತಗಳ ಪಾಲನ್ನು ಹೊಂದಿದ್ದೇವೆ ಎಂದು ನಮಗೆ ತಿಳಿದಿತ್ತು. ಟಿ20 ಒಂದು ಸ್ವರೂಪವಾಗಿದ್ದು ಟ್ರ್ಯಾಕ್ ಕಷ್ಟಕರವಾಗಿದ್ದರೆ ಅದು ಬೌಲರ್‌ಗಳಿಗೆ ಮತ್ತು ಬ್ಯಾಟರ್‌ಗಳಿಗೆ ಸಹ ಕಠಿಣವಾಗಬಹುದು. ಏಷ್ಯಾ ಕಪ್ ದೊಡ್ಡ ಪಂದ್ಯಾವಳಿ ಆಗಿದ್ದರಿಂದ ಜನರು ನಿಮ್ಮನ್ನು ಹೆಚ್ಚು ಮೌಲ್ಯಮಾಪನ ಮಾಡುತ್ತಾರೆ. ಆದ್ದರಿಂದಲೇ, ಸಾಮಾಜಿಕ ಜಾಲತಾಣಗಳಿಂದ ದೂರ ಇರುತ್ತೇನೆ" ಎಂದು ಭುವನೇಶ್ವರ್ ಹೇಳಿದ್ದಾರೆ.

ಪರ್ತ್‌ ಪಂದ್ಯದಲ್ಲಿ ಭಾರತಕ್ಕೆ ಲಾಭ

ಪರ್ತ್‌ ಪಂದ್ಯದಲ್ಲಿ ಭಾರತಕ್ಕೆ ಲಾಭ

"ವಿಶ್ವಕಪ್ ಸಮಯದಲ್ಲಿ, ನಾನು ಸಾಮಾಜಿಕ ಮಾಧ್ಯಮದಿಂದ ಸಂಪೂರ್ಣವಾಗಿ ದೂರವಿದ್ದೇನೆ ಮತ್ತು ಎಲ್ಲವನ್ನೂ ಏನು ಬರೆಯಲಾಗಿದೆ ಎಂದು ತಿಳಿದಿರುವುದಿಲ್ಲ. ಏಕೆಂದರೆ ನೀವು ಈ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳುವ ಸಾಮಾಜಿಕ ಮಾಧ್ಯಮವಾಗಿದೆ."

ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನ ಭಾರತ ತಂಡವು ಪರ್ತ್‌ನಲ್ಲಿ ಏಳು ದಿನಗಳ ಶಿಬಿರವನ್ನು ಹೊಂದಿತ್ತು ಭಾನುವಾರ ಇದೇ ಅಂಗಳದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ ನಡೆಯಲಿದ್ದು, ನಮಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

Story first published: Saturday, October 29, 2022, 15:51 [IST]
Other articles published on Oct 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X