
ಮುಂಜಾನೆಯಿಂದಲೇ ಹುಷಾರಿರಲಿಲ್ಲ
'ನೆನ್ನೆ (ನವೆಂಬರ್ 9) ನನಗೆ ಹುಷಾರಿರಲಿಲ್ಲ. ಸ್ವಲ್ಪ ಬೆನ್ನುನೋವು, ಹೊಟ್ಟೆನೋವಿನ ಸಮಸ್ಯೆಯಿತ್ತು. ಬೆಳಗ್ಗೆಯಿಂದಲೇ ಆರೋಗ್ಯದ ಸಮಸ್ಯೆಯಿತ್ತು. ಮೈದಾನಕ್ಕೆ ಇಳಿಯುವಾಗಲೂ ಅನಾರೋಗ್ಯದಿಂದಿಂದ ನಾನು ಚೇತರಿಸಿಕೊಂಡಿರಲಿಲ್ಲ. ಹೊಟ್ಟೆ ಸೆಳೆತ (ನೋವು) ಪ್ರಾರಂಭಗೊಂಡಿತ್ತು' ಎಂದು ಪಂದ್ಯದ ಬಳಿಕ ಮಾತನಾಡಿದ ಕೌರ್ ಹೇಳಿದರು.

ಮೊದಲ ಶತಕದ ಮೈಲಿಗಲ್ಲು
ಅಂತಾರಾಷ್ಟ್ರೀಯ ಟಿ20ಯಲ್ಲಿ ಶತಕ ಬಾರಿಸೋದು ಸುಲಭದ ಮಾತಲ್ಲ. ಆದರೆ ಹರ್ಮನ್‌ಪ್ರೀತ್ ನ್ಯೂಜಿಲ್ಯಾಂಡ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ್ದರು. 51 ಎಸೆತಗಳಿಗೆ 103 ರನ್ ಬಾರಿಸಿದ್ದ ಕೌರ್, ಟಿ20 ಕ್ರಿಕೆಟ್ ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯೆ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಓಡೋದಕ್ಕೆ ಬದಲಿ ಐಡಿಯಾ
ರನ್ ಗಾಗಿ ಓಡುವಾಗ ಕೌರ್ ಗೆ ನೋವಿನ ಅನುಭವ ಹೆಚ್ಚಾಗುತ್ತಿತ್ತು. ಓಡೋದು ಕಷ್ಟ, ತಂಡಕ್ಕೆ ರನ್ ಅಗತ್ಯವಿದೆ; ಈಗೇನು ಮಾಡೋದು ಅಂತ ಯೋಚಿಸುವಾಗ ಕೌರ್‌ಗೆ ಹೊಳೆದಿದ್ದು ಸಿಕ್ಸ್, ಫೋರ್ ಐಡಿಯಾ. ಹೀಗಾಗಿ ನಿಂತಲ್ಲಿಂದಲೇ ಬ್ಯಾಟ್ ಬೀಸಲಾರಂಭಿಸಿದರು. ಪರಿಣಾಮ 8 ಸಿಕ್ಸ, 7 ಬೌಂಡರಿಗಳು ಕೌರ್ ಬ್ಯಾಟ್‌ನಿಂದ ಸಿಡಿದವು!

ದೊಡ್ಡ ಹೊಡೆತಗಳನ್ನು ಬಾರಿಸುತ್ತೇನೆ
'ಓಡಿದರೆ ನೋವು ಹೆಚ್ಚಾಗುತ್ತಿತ್ತು. ಹೀಗಾಗಿ ದೊಡ್ಡ ಹೊಡೆತಗಳತ್ತ ನಾನು ಯೋಚಿಸಿದೆ. 'ನೀನು ನನಗೆ ಸ್ಟ್ರೈಕ್‌ಗೆ ಅವಕಾಶ ಮಾಡಿಕೊಟ್ಟರೆ ನಾನು ದೊಡ್ಡ ಹೊಡೆತಗಳನ್ನು ಬಾರಿಸುತ್ತೇನೆ' ಎಂದು ನಾನು ಜೆಮಿ(ಜೆಮಿಮಾ ರೋಡ್ರಿಗಸ್)ಗೆ ತಿಳಿಸಿದೆ' ಎಂದು ಹರ್ಮನ್‌ಪ್ರೀತ್ ಪಂದ್ಯದ ವೇಳೆಯ ವಾಸ್ತವ ಬಿಚ್ಚಿಟ್ಟರು.


Click it and Unblock the Notifications












