ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಆಯ್ತು, ಈಗ ಮುಂಬೈ ರಣಜಿ ತಂಡದಲ್ಲೂ ತೆಂಡೂಲ್ಕರ್ ಪುತ್ರನಿಗೆ ಅವಕಾಶವಿಲ್ಲ

Arjun tendulkar

ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತೊಮ್ಮೆ ಹತಾಶೆಯಲ್ಲಿದ್ದಾರೆ. ಐಪಿಎಲ್ 2022 ಸೀಸನ್‌ನಲ್ಲಿ ಚೊಚ್ಚಲ ಪಂದ್ಯಕ್ಕಾಗಿ ಕಾಯುತ್ತಿರುವಾಗ, ಅರ್ಜುನ್ ಅವರ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಒಂದೂ ಅವಕಾಶ ನೀಡದೆ ಮೊಂಡುತನ ತೋರಿತು.

ಆದ್ರೆ ಇದರ ಬೆನ್ನಲ್ಲೇ ಜೂನ್‌ನಲ್ಲಿ ನಡೆಯಲಿರುವ ರಣಜಿ ಟ್ರೋಫಿ ನಾಕೌಟ್ ಪಂದ್ಯಗಳಲ್ಲಿ ಅರ್ಜುನ್ ತೆಂಡೂಲ್ಕರ್ ರನ್ನು ಮುಂಬೈ ತಂಡಕ್ಕೆ ಸೇರಿಸಿಕೊಂಡಿಲ್ಲ. ಪೃಥ್ವಿ ಶಾ ಮುಂಬೈ ತಂಡವನ್ನು ಮುನ್ನಡೆಸಲಿದ್ದು, ಯಶಸ್ವಿ ಜೈಸ್ವಾಲ್, ಧವಳ್ ಕುಲಕರ್ಣಿ ಮತ್ತು ತುಷಾರ್ ದೇಶಪಾಂಡೆ ಅವಕಾಶ ಪಡೆದಿದ್ದಾರೆ.

ರಣಜಿ ಟ್ರೋಫಿಗೆ ಅರ್ಜುನ್ ತೆಂಡೂಲ್ಕರ್ ಜೊತೆಗೆ ಅಜಿಂಕ್ಯ ರಹಾನೆ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಮುಂಬೈ ಪರ ಟ್ವೆಂಟಿ-20 ಪಂದ್ಯಗಳನ್ನಾಡಿರುವ ಅರ್ಜುನ್ ತೆಂಡೂಲ್ಕರ್ ಇನ್ನೂ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿಲ್ಲ. ಐಪಿಎಲ್‌ನಲ್ಲಿ ರಹಾನೆ ಭುಜದ ನೋವಿನಿಂದಾಗಿ ನಾಕೌಟ್ ಪಂದ್ಯಗಳಿಂದ ಹೊರಗುಳಿದಿದ್ದರು.

ಐಪಿಎಲ್ 2022 ಸೀಸನ್‌ನಲ್ಲಿ ಅರ್ಜುನ್‌ಗೆ ಸಿಗಲಿಲ್ಲ ಅವಕಾಶ

ಐಪಿಎಲ್ 2022 ಸೀಸನ್‌ನಲ್ಲಿ ಅರ್ಜುನ್‌ಗೆ ಸಿಗಲಿಲ್ಲ ಅವಕಾಶ

ಈ ಋತುವಿನಲ್ಲಿ ಮುಂಬೈ ತಂಡವು ದಯನೀಯವಾಗಿ ಸೋತಿದ್ದು, ಸತತ ಎಂಟು ಪಂದ್ಯಗಳಲ್ಲಿ ಸೋಲನುಭವಿಸಿತು. ಈ ಸಂದರ್ಭದಲ್ಲಿ ಅರ್ಜುನ್‌ಗೆ ಅವಕಾಶ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಮುಂಬೈ ಮ್ಯಾನೇಜ್‌ಮೆಂಟ್ ಒಂದೇ ಒಂದು ಪಂದ್ಯದಲ್ಲಿ ಅವರನ್ನು ಖುಷಿಪಡಿಸಲಿಲ್ಲ. ಇದರ ಬಳಿಕ ಮುಂಬೈ ರಣಜಿ ತಂಡದಲ್ಲಿ ಸರ್ಫರಾಜ್ ಖಾನ್ ಮತ್ತು ಅವರ ಸಹೋದರ ಮುಶೀರ್ ಸ್ಥಾನ ಪಡೆದರು. ಕೂಚ್ ಬೆಹರ್ ಟ್ರೋಫಿಯಲ್ಲಿ ಮುಶೀರ್ ಮಿಂಚಿದ್ದರು. ವಾಸಿಂ ಜಾಫರ್ ಅವರ ಅಳಿಯ ಅರ್ಮಾನ್ ಜಾಫರ್ ಅವರಿಗೂ ಅವಕಾಶ ಸಿಕ್ಕಿತು. ಆದ್ರೆ ಅರ್ಜುನ್‌ಗೆ ಅವಕಾಶ ನೀಡದ ಮುಂಬೈ ವಿರುದ್ಧ ಅಭಿಮಾನಿಗಳು ಕೋಪಗೊಂಡಿದ್ದಾರೆ.

RCB vs LSG: ರಜತ್ ಪಾಟೀದಾರ್ ಅಬ್ಬರದ ಶತಕ, ಪ್ಲೇ ಆಫ್‌ನಲ್ಲಿ ವೇಗದ ಶತಕದ ದಾಖಲೆ

30 ಲಕ್ಷ ಬೆಲೆಗೆ ಹರಾಜಾಗಿದ್ದ ಅರ್ಜುನ್ ತೆಂಡೂಲ್ಕರ್‌

30 ಲಕ್ಷ ಬೆಲೆಗೆ ಹರಾಜಾಗಿದ್ದ ಅರ್ಜುನ್ ತೆಂಡೂಲ್ಕರ್‌

ಐಪಿಎಲ್‌ 2022 ರ ಮೆಗಾ ಹರಾಜಿನಲ್ಲಿ ಅರ್ಜುನ್ ತೆಂಡೂಲ್ಕರ್ ಮುಂಬೈ ಫ್ರಾಂಚೈಸಿಯು ಮೂಲ ಬೆಲೆಗಿಂತ 10 ಲಕ್ಷ ರೂಪಾಯಿ ಹೆಚ್ಚು ಮೊತ್ತಕ್ಕೆ (30 ಲಕ್ಷ) ಖರೀದಿಸುವ ಮೂಲಕ ತಂಡವನ್ನ ಎರಡನೇ ಬಾರಿಗೆ ಸೇರಿಸಿಕೊಂಡ್ರು. ಆದ್ರೆ ಕಳೆದ ಸೀಸನ್‌ನಂತೆ ಐಪಿಎಲ್ 15ನೇ ಸೀಸನ್‌ನಲ್ಲೂ ಅರ್ಜುನ್ ತೆಂಡೂಲ್ಕರ್‌ಗೆ ಅವಕಾಶ ನೀಡದೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು.

ಯಾಸಿನ್ ಮಲಿಕ್ ಬೆಂಬಲಿಸಿ ಟ್ವೀಟ್ ಮಾಡಿದ್ದ ಅಫ್ರಿದಿಗೆ, ಸಖತ್ ಆಗಿ ಉತ್ತರ ನೀಡಿದ ಅಮಿತ್ ಮಿಶ್ರಾ

Hasaranga LSG ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದು ಹೀಗೆ | Oneindia Kannada
ಮುಂಬೈ ರಣಜಿ ಸ್ಕ್ವಾಡ್‌

ಮುಂಬೈ ರಣಜಿ ಸ್ಕ್ವಾಡ್‌

ಮುಂಬೈ ತಂಡ: ಪೃಥ್ವಿ ಶಾ (ನಾಯಕ), ಯಶಸ್ವಿ ಜೈಸ್ವಾಲ್, ಭೂಪೇನ್ ಲಾಲ್ವಾನಿ, ಅರ್ಮಾನ್ ಜಾಫರ್, ಸರ್ಫರಾಜ್ ಖಾರ್, ಸುವೇದ್ ಪರ್ಕರ್, ಆಕರ್ಷಿತ್ ಗೊಮೆಲ್, ಆದಿತ್ಯ ತಾರೆ, ಹಾರ್ದಿಕ್ ತಮೋರ್, ಅಮನ್ ಖಾನ್, ಸಾಯಿರಾಜ್ ಪಾಟೀಲ್, ಶಮ್ಸ್ ಮುಲಾನಿ, ದ್ರುಮಿಲ್ ಮಟ್ಕರ್, ತನುಷ್ ಕೊಟ್ಟಿ, ಕುಲಕರ್ಣಿ, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ, ರಾಯ್ಸ್ಟನ್ ಡಯಾಸ್, ಸಿದ್ಧಾರ್ಥ್ ರೌತ್, ಮುಶೀರ್ ಖಾನ್

Story first published: Thursday, May 26, 2022, 10:34 [IST]
Other articles published on May 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X