ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಯೋಸೆಕ್ಯೂರ್ ಬಬಲ್ ಎಂಬುದು ಐಶಾರಾಮಿ ಜೈಲು: ಕಗಿಸೋ ರಬಡಾ

Bio-Secure Bubbles Are Like Luxury Prisons, Says Rabada

ಕೊರೊನಾ ವೈಸರ್‌ನ ಕಾರಣದಿಂದಾಗಿ ಸಂಪೂರ್ಣವಾಗಿ ಸ್ಥಬ್ಧವಾಗಿದ್ದ ಕ್ರೀಡಾಲೋಕ ಮತ್ತೆ ಎಂದಿನಂತೆ ಮರಳಿದೆ. ಆದರೆ ಕ್ರೀಡಾ ಟೂರ್ನಿಗಳು ನಡೆಯಲು ಸಾಕಷ್ಟು ಮುನ್ನಚ್ಚರಿಕೆಯನ್ನು ತೆಗೆದುಕೊಳ್ಳಲಾಗುತ್ತಿದೆ. ಅದರಲ್ಲಿ ಮುಖ್ಯಾವಾದದ್ದು ಬಯೋ ಸೆಕ್ಯೂರ್ ಬಬಲ್. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಆದರೆ ಇದು ಆಟಗಾರರ ಪಾಲಿಗೆ ಸುಲಭವಾಗಿಲ್ಲ. ಈ ಬಗ್ಗೆ ದಕ್ಷಿಣ ಆಫ್ರಿಕಾದ ವೇಗಿ ಕಗಿಸೋ ರಬಡಾ ಪ್ರತಿಕ್ರಿಯಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಕಗಿಸೋ ರಬಡಾ ತಮ್ಮ ಬಯೋಸೆಕ್ಯೂರ್ ಬಬಲ್‌ನ ಅನುಭವವನ್ನು ಹಂಚಿಕೊಂಡಿದ್ದಾರೆ. ಬಯೋಸೆಕ್ಯೂರ್ ಬಬಲ್ ಎಂಬುದು ಅತ್ಯಂತ ಐಶಾರಾಮಿಯಾಗಿರುವ ಜೈಲಿನಂತೆ ಎಂದು ರಬಡಾ ಹೋಲಿಕೆ ಮಾಡಿದ್ದಾರೆ.

ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೀಮಿತ ಓವರ್‌ಗಳ ಸರಣಿಗಾಗಿ ಮುಖಾಮುಖಿಯಾಗಲಿದೆ. ಈ ಸರಣಿಯಲ್ಲಿ 3 ಟಿ20 ಹಾಗೂ 3 ಏಕದಿನ ಪಂದ್ಯಗಳಿ ನಡೆಯಲಿದೆ. ಇದಕ್ಕಾಗಿ ಕೇಪ್‌ಟೌನ್‌ನಲ್ಲಿ ಬಯೋಸೆಕ್ಯೂರ್ ಬಬಲ್‌ನಲ್ಲಿ ಆಟಗಾರರು ಉಳಿದುಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಕಗಿಸೋ ರಬಡಾ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಯೋಸೆಕ್ಯೂರ್ ಬಬಲ್‌ನಲ್ಲಿ ದುಬೈನಲ್ಲಿ ಮೂರು ತಿಂಗಳು ಉಳಿದುಕೊಂಡಿದ್ದರು.

ತಂದೆಯ ಕನಸನ್ನು ಪೂರೈಸಲು ತಂಡದ ಜೊತೆಗೆ ಉಳಿದುಕೋ: ತಾಯಿಯ ಮಾತು ನೆನಪಿಸಿದ ಸಿರಾಜ್ತಂದೆಯ ಕನಸನ್ನು ಪೂರೈಸಲು ತಂಡದ ಜೊತೆಗೆ ಉಳಿದುಕೋ: ತಾಯಿಯ ಮಾತು ನೆನಪಿಸಿದ ಸಿರಾಜ್

ಇದು ಖಂಡಿತಾ ಕಠಿಣ. ನೀವು ಸಂವಹನ ನಡೆಸುವಂತಿಲ್ಲ. ನಿಜ ಹೇಳಬೇಕೆಂದರೆ ನೀವು ನಿಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೀರಿ. ಇದೊಂತರಾ ಐಶಾರಾಮಿ ಜೈಲಿನಲ್ಲಿ ಇದ್ದಂತೆ. ಹಾಗಿದ್ದರೂ ನಾವು ಅದೃಷ್ಠಶಾಲಿಗಳು ಎಂಬುದನ್ನು ನೆನಪಿಸಿಕೊಳ್ಳಬೇಕು. ಯಾಕೆಂದರೆ ಸಾಕಷ್ಟು ಜನರು ಕೆಲಸ ಕಳೆದುಕೊಂಡಿದ್ದಾರೆ. ಜೀವನ ನಿರ್ವಹಿಸಲು ಕಷ್ಟಪಡುತ್ತಿದ್ದಾರೆ. ಆದರೆ ನಮಗೆ ಇಷ್ಟವಾದ ಆಟವನ್ನು ಆಡಿ ಸಂಬಾವನೆ ಪಡೆಯುವ ಅವಕಶ ದೊರೆತಿದೆ ಎಂದು ಕಗಿಸೋ ರಬಡಾ ಹೇಳಿದ್ದಾರೆ.

ಭಾರತ 'ಎ' ವಿರುದ್ಧದ ಪಂದ್ಯಕ್ಕೆ ಮಿಚೆಲ್ ಮಾರ್ಷ್ ಕಮ್‌ಬ್ಯಾಕ್‌ ಸಾಧ್ಯತೆಭಾರತ 'ಎ' ವಿರುದ್ಧದ ಪಂದ್ಯಕ್ಕೆ ಮಿಚೆಲ್ ಮಾರ್ಷ್ ಕಮ್‌ಬ್ಯಾಕ್‌ ಸಾಧ್ಯತೆ

"ನಾವು ಇಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲ್ಪಡುತ್ತಿಲ್ಲ. ಯಾಕೆಂದರೆ ನಾವು ಉತ್ತಮವಾದ ಹೋಟೆಲ್‌ಗಳಲ್ಲಿ ಇರುತ್ತೇವೆ. ಉತ್ತಮವಾದ ಆಹಾರವನ್ನು ಪಡೆಯುತ್ತೇವೆ. ಆದರೆ ಕ್ಯಾಂಡಿ ಅಂಗಡಿಯಲ್ಲಿ ಬೇಕಾದದ್ದನ್ನು ಪಡೆಯಲಾಗದ ಮಕ್ಕಳಂತಾಗಿದ್ದೇವೆ. ಯಾಕೆಂದರೆ ನಾಲ್ಕು ಗೋಡೆಗಳ ಮಧ್ಯೆಯೇ ನಾವಿರಬೇಕು. ಇದು ಮಾನಸಿಕವಾಗಿ ಕಠಿಣ ಸಂದರ್ಭವಾಗಿರುತ್ತದೆ. ಆದರೆ ಒಂದು ವಿಚಾರ ಏನೆಂದರೆ ನಾವು ಆಡಲು ಅಂಗಳಕ್ಕಿಳಿದಾಗ ಇದೆಲ್ಲಾ ಕಷ್ಟಗಳು ನಮ್ಮಿಂದ ದೂರವಾಗುತ್ತದೆ. ನಮ್ಮನ್ನು ಮರೆಸುತ್ತದೆ" ಎಂದು ಕಗಿಸೋ ರಬಡಾ ಹೇಳಿದ್ದಾರೆ.

Story first published: Tuesday, November 24, 2020, 9:51 [IST]
Other articles published on Nov 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X