ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಷ್ಣು ಅವತಾರ: ಸುಪ್ರೀಂ ಮೆಟ್ಟಿಲೇರಿದ ಎಂಎಸ್ ಧೋನಿ

ನವದೆಹಲಿ, ಸೆಪ್ಟೆಂಬರ್. 11: ಭಾರತ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ ಇದೀಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ನಿಯತಕಾಲಿಕವೊಂದರಲ್ಲಿ ತಮ್ಮನ್ನು 'ವಿಷ್ಣು'ವಿನಂತೆ ಬಿಂಬಿಸಿರುವ ಬಗ್ಗೆ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಧೋನಿ ಮನವಿ ಮಾಡಿಕೊಂಡಿದ್ದಾರೆ.

2013ರ ಏಪ್ರಿಲ್‌ನಲ್ಲಿ ಪತ್ರಿಕೆಯೊಂದು ಧೋನಿ ಅವರನ್ನು 'ವಿಷ್ಣು'ವಿನಂತೆ ಚಿತ್ರಿಸಿತ್ತು. ಅದರ ಜತೆಗೆ ಕೆಲ ವಸ್ತುಗಳನ್ನು ಧೋನಿ ಕೈಯಲ್ಲಿ ಹಿಡಿಸಲಾಗಿತ್ತು. ಇದು ಧಾರ್ಮಿಕ ಭಾವನೆಗೆ ಧಕ್ಕೆ ತರುವಂತ ವಿಚಾರವಾಗಿದೆ ಎಂದು ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದೂರು ದಾಖಲಿಸಲಾಗಿತ್ತು.[ಎಂಎಸ್ ಧೋನಿ- ಅಫ್ರಿದಿ ಒಂದೇ ತಂಡದಲ್ಲಿ ಆಡ್ತಾರಂತೆ!]

Captain Cool MS Dhoni Approaches Supreme Court

ವಿಚಾರಣಾ ನ್ಯಾಯಾಲಯದಲ್ಲಿನ ಕಾನೂನು ಪ್ರಕ್ರಿಯೆಗೆ ತಡೆ ನೀಡುವಂತೆ ಕೋರಿ ಧೋನಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಮಾನ್ಯಗೊಳಿಸಿರಲಿಲ್ಲ. ಸೆಷನ್ಸ್‌ ನ್ಯಾಯಾಲಯಕ್ಕೆ ಹೋಗುವಂತೆ ಸೂಚಿಸಿತ್ತು. ಇದೀಗ ಧೋನಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದು ಸೆಪ್ಟೆಂಬರ್ 14ರಂದು ವಿಚಾರಣೆಗೆ ಬರಲಿದೆ.[ಎಂಎಸ್ ಧೋನಿ ಟೆಸ್ಟ್ ನಿವೃತ್ತಿ ಗುಟ್ಟು ಬಿಚ್ಚಿಟ್ಟ ರವಿ ಶಾಸ್ತ್ರಿ!]

ಮುಖಪುಟದಲ್ಲಿ ಎಂಎಸ್ ಧೋನಿ ಅವರನ್ನು ವಿಷ್ಣುವಿನ ರೀತಿ ಚಿತ್ರಿಸಿದ್ದ ಪ್ರತ್ರಿಕೆ ಅವರ ಕೈ ನಲ್ಲಿ ಪಾದರಕ್ಷೆ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಹಿಡಿಸಿತ್ತು. ಇದು ಸಂವಿಧಾನ ವಿರೋಧಿ ರೀತಿಯ ಪ್ರಚಾರ ಎಂದು ಬೆಂಗಳೂರು ನ್ಯಾಯಾಲಯಕ್ಕೆ ದೂರು ದಾಖಲಾಗಿತ್ತು. ಬೆಂಗಳೂರು ನ್ಯಾಯಾಲಯದ ವಿಚಾರಣೆಗೆ ಎಂಎಸ್ ಧೋನಿ ಹಾಜರಾಗಿರಲಿಲ್ಲ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X