ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸೀಸ್‌ ವಿರುದ್ಧದ ಸೋಲಿಗೆ ಕಾರಣ ಕೊಟ್ಟ ಕೇನ್‌ ವಿಲಿಯಮ್ಸನ್‌!

Careys knock took the game away from us: Williamson

ಲಂಡನ್‌, ಜೂನ್‌ 30: ಆಸ್ಟ್ರೇಲಿಯಾ ವಿರುದ್ಧ 86 ರನ್‌ಗಳ ಸೋಲುಂಡ ನ್ಯೂಜಿಲೆಂಡ್‌ ತಂಡ ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಸತತ ಎರಡನೇ ಪಂದ್ಯವನ್ನು ಸೋತು ಸಂಕಷ್ಟಕ್ಕೆ ಸಿಲುಕಿದೆ. ಆಡಿದ 8 ಪಂದ್ಯಗಳಿಂದ 11 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ಗೆ ಇದೀಗ ಸೆಮಿಫೈನಲ್ಸ್‌ ಹಂತಕ್ಕೇರಲು ತನ್ನ ಪಾಲಿನ ಕೊನೆಯ ಲೀಗ್‌ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಕೇನ್‌ ವಿಲಿಯಮ್ಸನ್‌ ಮುಂದಾಳತ್ವದ ಕಿವೀಸ್‌ ಪಡೆ ಇದೇ ವೇಳೆ ಇಂಗ್ಲೆಂಡ್‌ ಮತ್ತು ಪಾಕಿಸ್ತಾನ ತಂಡಗಳು ಸೋಲುವಂತೆಯೂ ಪ್ರಾರ್ಥಿಸುವಂತಾಗಿದೆ. ಇದೇ ವೇಳೆ ಆಸ್ಟ್ರೇಲಿಯಾ ತಂಡವನ್ನು 243 ರನ್‌ಗಳಿಗೆ ನಿಯಂತ್ರಿಸಿದ ಕಿವೀಸ್‌ ಅಚ್ಚರಿಯ ಸೋಲುಂಡಿದೆ.

ನ್ಯೂಜಿಲೆಂಡ್‌ ತಂಡದ ಈ ಹೀನಾಯ ಸೋಲಿನ ಕುರಿತಾಗಿ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಯಾಪ್ಟನ್‌ ಕೇನ್‌ ವಿಲಿಯಮ್ಸನ್‌, "ಖವಾಜ ಮತ್ತು ಕ್ಯಾರಿ ನಡುವಣ ಜೊತೆಯಾಟ ಮುರಿಯಲು ವಿಫಲರಾದೆವು. ಅದರಲ್ಲೂ ಅಲೆಕ್ಸ್‌ ಕ್ಯಾರಿ ಬಂದು ಅದ್ಭುತ ಇನಿಂಗ್ಸ್‌ ಆಡುವ ಮೂಲಕ ನಮ್ಮ ಕೈಲಿದ್ದ ಪಂದ್ಯವನ್ನು ಕಿತ್ತುಕೊಂಡರು. ಆಸ್ಟ್ರೇಲಿಯಾ ತಂಡ ನಮಗಿಂತಲೂ ಸ್ಥಿತಿಗತಿಗಳಿಗೆ ಉತ್ತಮ ರೀತಿಯಲ್ಲಿ ಹೊಂದಿಕೊಂಡಿತು,'' ಎಂದು ಹೇಳಿದ್ದಾರೆ.

ದ. ಆಫ್ರಿಕಾ vs ಲಂಕಾ ನಡುವಣ ಪಂದ್ಯಕ್ಕೆ ಅಡ್ಡಿ ಪಡಿಸಿದ್ದು ಮಳೆಯಲ್ಲ!ದ. ಆಫ್ರಿಕಾ vs ಲಂಕಾ ನಡುವಣ ಪಂದ್ಯಕ್ಕೆ ಅಡ್ಡಿ ಪಡಿಸಿದ್ದು ಮಳೆಯಲ್ಲ!

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 243 ರನ್‌ಗಳನ್ನು ಮಾತ್ರವೇ ದಾಖಲಿಸಿತು. ಒಂದು ಹಂತದಲ್ಲಿ 92ಕ್ಕೆ 5 ವಿಕೆಟ್‌ ಕಳೆದುಕೊಂಡಿದ್ದ ಆಸೀಸ್‌, ಉಸ್ಮಾನ್‌ ಝವಾಜ (88 ರನ್‌) ಮತ್ತು ಅಲೆಕ್ಸ್‌ ಕ್ಯಾರಿ (71) ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಚೇತರಿಸಿತು.

ಬಳಿಕ ಗುರಿ ಬೆನ್ನತ್ತಿದ ಕಿವೀಸ್‌ ಪಡೆ ಮಿಚೆಲ್‌ ಸ್ಟಾರ್ಕ್‌ ಅವರ ವೇಗದ ಅಬ್ಬರಕ್ಕೆ ನಲುಗಿ 157 ರನ್‌ಗಳಿಗೆ ಆಲ್‌ಔಟ್‌ ಆಗುವ ಮೂಲಕ 86 ರನ್‌ಗಳ ಹೀನಾಯ ಸೋಲನುಭವಿಸಿತು.

ಇಂಗ್ಲೆಂಡ್ ವಿರುದ್ಧ ಭಾರತ ಬೆಂಬಲಿಸಲು ಪಾಕ್ ಅಭಿಮಾನಿಗಳಿಗೆ ಅಖ್ತರ್ ಕರೆ!ಇಂಗ್ಲೆಂಡ್ ವಿರುದ್ಧ ಭಾರತ ಬೆಂಬಲಿಸಲು ಪಾಕ್ ಅಭಿಮಾನಿಗಳಿಗೆ ಅಖ್ತರ್ ಕರೆ!

"ಲಾರ್ಡ್ಸ್‌ನ ಪಿಚ್‌ ನಿಜವಾಗಿಯೂ ಕಠಿಣವಾಗಿತ್ತು. ಚೆಂಡು ಅಸಹಜ ರೀತಿಯಲ್ಲಿ ಪುಟಿದೇಳುತ್ತಿತ್ತು. ಪಂದ್ಯದ ಮೊದಲ ಇನಿಂಗ್ಸ್‌ನ ಅರ್ಧದ ಹೊತ್ತಿಗೆ 92ಕ್ಕೆ 5 ವಿಕೆಟ್‌ ಪಡೆದು ಉತ್ತಮ ಸ್ಥಿತಿಯಲ್ಲಿದ್ದೆವು. ಆದರೆ ಬಳಿಕ ಆಸ್ಟ್ರೇಲಿಯಾ ತಂಡದ ಪ್ರತಿ ಹೋರಾಟವನ್ನು ಪ್ರಶಂಸಿಸಲೇ ಬೇಕು. ಪಂದ್ಯಂದ ಪಾಠ ಕಲಿತು ಮುಂದಿನದ್ದನ್ನು ಎದುರು ನೋಡಬೇಕಿದೆ. '' ಎಂದು ವಿಲಿಯಮ್ಸನ್‌ ಹೇಳಿದ್ದಾರೆ.

ನ್ಯೂಜಿಲೆಂಡ್‌ ತಂಡ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜುಲೈ 6ರಂದು ಮ್ಯಾಂಚೆಸ್ಟರ್‌ನಲ್ಲಿ ಪೈಪೋಟಿ ನಡೆಸಲಿದೆ.

Story first published: Sunday, June 30, 2019, 16:19 [IST]
Other articles published on Jun 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X