ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ವಿರುದ್ಧ ಜೋಧಪುರ್ ನಲ್ಲಿ ಕೇಸ್


ಜೋಧಪುರ್, ಫೆಬ್ರವರಿ 06: ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್ರಾಹುಲ್ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ರಾಜಸ್ಥಾನದ ಜೋಧಪುರದಲ್ಲಿ ಇಬ್ಬರು ಕ್ರಿಕೆಟರ್ ಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಜೊತೆಗೆ ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್ವಿರುದ್ಧ ಆರೋಪ ಮಾಡಲಾಗಿದೆ.
ಮಹಿಳೆಯರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ್ದ ಹಾರ್ದಿಕ್ಮತ್ತು ರಾಹುಲ್ವಿರುದ್ಧ ಕ್ರಮ ಕೈಗೊಂಡಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನ ಆಡಳಿತ ಸಮಿತಿಯು ಜನವರಿ 11ರಂದು ಇಬ್ಬರನ್ನು ಅಮಾನತು ಮಾಡಿತ್ತು. ಹೀಗಾಗಿ, ಇಬ್ಬರು ಆಟಗಾರರು ಆಸ್ಟ್ರೇಲಿಯಾ ವಿರುದ್ಧದ 3 ಏಕದಿನ ಹಾಗೂ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದರು. ಆದರೆ, ಇಬ್ಬರಿಗೂ ನೀಡಿರುವ ಶಿಕ್ಷೆ ಕಠಿಣವಾಗಿದ್ದು, ಇಬ್ಬರಿಗೂ ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡಬೇಕು ಎಂದು ಕ್ರಿಕೆಟ್ ದಿಗ್ಗಜರು ಅಭಿಪ್ರಾಯಪಟ್ಟ ಹಿನ್ನಲೆಯಲ್ಲಿ ಇಬ್ಬರ ಮೇಲಿನ ನಿಷೇಧ ಹಿಂಪಡೆದು ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಜನವರಿ 24ರಂದು ಆದೇಶ ಹೊರಡಿಸಿತ್ತು.
ತಂಡಕ್ಕೆ ಮರಳಿದ ಆಲ್ ರೌಂಡರ್ ಹಾರ್ದಿಕ್ಪಾಂಡ್ಯ ಅವರು ನ್ಯೂಜಿಲೆಂಡ್ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಕೆ.ಎಲ್ರಾಹುಲ್ಅವರು ಇಂಡಿಯಾ ಎ ತಂಡದ ಪರ ಆಡಿದ್ದರು. ಈ ನಡುವೆ ಕರಣ್ ಜೋಹರ್ ಕೂಡಾ ನನ್ನ ಕಾರ್ಯಕ್ರಮದಲ್ಲಿ ಆದ ಪ್ರಮಾದಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಪ್ರಶ್ನೆಗಳಿಂದ ಅವರು ಆ ರೀತಿ ಉತ್ತರಿಸುವಂತಾಯಿತು ಎಂದು ಬಹಿರಂಗವಾಗಿ ಕ್ಷಮೆಯಾಚನೆ ಮಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications