ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ ದಕ್ಷಿಣ ಆಫ್ರಿಕಾ ವೇಗಿ ಕಾಗಿಸೋ ರಬಾಡ

Challenge of Virat Kohli- Kagiso Rabada speaks ahead of series

ನವದೆಹಲಿ, ಸೆಪ್ಟೆಂಬರ್ 9: ಮುಂಬರಲಿರುವ ಟಿ20 ಸರಣಿಯಲ್ಲಿ ಬಲಿಷ್ಠ ಭಾರತದೆದುರು ಹೋರಾಡಲು ತನಗಿರುವ ಅಪೂರ್ವ ಅವಕಾಶ ಎಂದು ದಕ್ಷಿಣ ಆಫ್ರಿಕಾ ತಂಡದ ಮಾರಕ ವೇಗಿ ಕಾಗಿಸೋ ರಬಾಡ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದೂ ರಬಾಡ ಹೇಳಿದ್ದಾರೆ.

ಸ್ಮಿತ್‌ ಆಟ ನೋಡಿ ಹಳೆ ವಿವಾದ ಕೆದಕಿದ ಇಂಗ್ಲೆಂಡ್ ಕ್ರಿಕೆಟರ್ಸ್ಮಿತ್‌ ಆಟ ನೋಡಿ ಹಳೆ ವಿವಾದ ಕೆದಕಿದ ಇಂಗ್ಲೆಂಡ್ ಕ್ರಿಕೆಟರ್

ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ರಬಾಡ, 'ನಾನು ಮುಂದಿನ ಕೆಲವು ವರ್ಷಗಳತ್ತ ದೃಷ್ಟಿ ಹರಿಸುತ್ತಿದ್ದೇನೆ. ಅದೊಂದು ಸವಾಲಿನ ಪಯಣ ನಮಗೆ. ನಮ್ಮ ತಂಡಕ್ಕೆ ನಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆಯಿದೆ. ಆದರೆ ಭಾರತದ ಪ್ರವಾಸದಲ್ಲಿ ನಾವದನ್ನು ಹೇಗೆ ಬಳಸಿಕೊಳ್ಳುತ್ತೇವೆ ಅನ್ನೋದನ್ನು ನಾವು ಕಾದು ನೋಡಬೇಕಿದೆ,' ಎಂದರು.

ನಿಯಮಿತ ಓವರ್‌ಗಳ ವಿಂಡೀಸ್ ತಂಡಕ್ಕೆ ಕೀರನ್ ಪೊಲಾರ್ಡ್ ನಾಯಕ?!ನಿಯಮಿತ ಓವರ್‌ಗಳ ವಿಂಡೀಸ್ ತಂಡಕ್ಕೆ ಕೀರನ್ ಪೊಲಾರ್ಡ್ ನಾಯಕ?!

ಜಸ್‌ಪ್ರೀತ್‌ ಬೂಮ್ರಾ ಮತ್ತು ಜೋಫ್ರಾ ಆರ್ಚರ್ ಬಗ್ಗೆಯೂ ಉಲ್ಲೇಖಿಸಿ ಮಾತನಾಡಿದ ರಬಾಡ, 'ಇತರ ಬೌಲರ್‌ಗಳನ್ನು ಗಮನಿಸುವುದು ನನಗೆ ಮೆಚ್ಚೆನಿಸುತ್ತದೆ. ಅದು ಆರೋಗ್ಯಪೂರ್ಣ ಸ್ಪರ್ಧೆಯೂ ಹೌದು,' ಎಂದಿದ್ದಾರೆ.

ಭಾರತ ಪ್ರವಾಸ ಸರಣಿ

ಭಾರತ ಪ್ರವಾಸ ಸರಣಿ

ವಿಶ್ವಕಪ್ ಮುಗಿದ ಬಳಿಕ ದಕ್ಷಿಣ ಆಫ್ರಿಕಾ ತಂಡ ಪಾಲ್ಗೊಳ್ಳುತ್ತಿರುವ ಮೊದಲ ಪ್ರವಾಸ ಸರಣಿಯಿದು. ಸೆಪ್ಟೆಂಬರ್ 15ರಿಂದ 3 ಪಂದ್ಯಗಳ ಟಿ20 ಸರಣಿ ನಡೆದರೆ, ಅನಂತರ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ದಕ್ಷಿಣ ಆಫ್ರಿಕಾ ತಂಡವನ್ನು ಕ್ವಿಂಟನ್ ಡಿ ಕಾಕ್ ನಾಯಕನಾಗಿ ಮುನ್ನಡೆಸುತ್ತಿದ್ದಾರೆ.

ಆತ ಶ್ರೇಷ್ಠ ಕ್ರಿಕೆಟಿಗ

ಆತ ಶ್ರೇಷ್ಠ ಕ್ರಿಕೆಟಿಗ

'ವೈಟ್‌ ಬಾಲ್ ಕ್ರಿಕೆಟ್ ಮಾದರಿಯಲ್ಲಿ ತಾನು ಅತ್ಯುತ್ತಮ ಆಟಗಾರ ಅನ್ನೋದನ್ನು ಕೊಹ್ಲಿ ಸಾಬೀತು ಮಾಡಿದ್ದಾರೆ. ಕ್ರಿಕೆಟ್‌ನಲ್ಲಿ ಆತ ಶ್ರೇಷ್ಠ ಎಂದೂ ಗುರುತಿಸಿಕೊಂಡವರು. ಆತನೊಂದಿಗೆ ಆಡುವುದು ಒಬ್ಬ ಆಟಗಾರನಾಗಿ ನನ್ನನ್ನು ನಾನು ಪರೀಕ್ಷಿಸಿಕೊಳ್ಳಲು ಇರುವ ಅವಕಾಶ,' ಎಂದು ರಬಾಡ ಪ್ರತಿಕ್ರಿಯಿಸಿದ್ದಾರೆ.

ಯಾವುದಕ್ಕೂ ಹೆದರಬಾರದು

ಯಾವುದಕ್ಕೂ ಹೆದರಬಾರದು

ಮಾತು ಮುಂದುವರೆಸಿದ ರಬಾಡ, 'ಕೊಹ್ಲಿ ಒಬ್ಬ ಹೋರಾಟಗಾರನಂತೆ. ಆದರೆ ನಾವು ಏನನ್ನೋದನ್ನು ಅಲ್ಲಿ ತೋರಿಸಿಕೊಳ್ಳಬೇಕಿದೆ. ಯಾವುದಕ್ಕೂ ಹೆದರಿಕೊಳ್ಳಬಾರದು. ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಜೊತೆ ಸಂಭ್ರಮಿಸುತ್ತ ಆಡಬೇಕಿದೆ,' ಎಂದು ರಬಾಡ ತಂಡಕ್ಕೆ ಸರಳ ಸಲಹೆ ನೀಡಿದ್ದಾರೆ.

ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು

ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು

ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್, ಜೋ ರೂಟ್ ಈ ನಾಲ್ವರು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾಗಿ ಕಾಣಿಸಿಕೊಂಡಿದ್ದರೆ, ಕಾಗಿಸೋ ರಬಾಡ, ಜಸ್‌ಪ್ರೀತ್‌ ಬೂಮ್ರಾ (ಭಾರತ), ಜೋಫ್ರಾ ಆರ್ಚರ್ (ಇಂಗ್ಲೆಂಡ್) ವಿಶ್ವದ ಮಾರಕ ಬೌಲರ್‌ಗಳಾಗಿ ಗುರುತಿಸಿಕೊಂಡಿದ್ದಾರೆ.

Story first published: Monday, September 9, 2019, 17:32 [IST]
Other articles published on Sep 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X