ಆತ ವಿರಾಟ್ ಕೊಹ್ಲಿ ಕ್ರಿಕೆಟ್ ಭವಿಷ್ಯವನ್ನೇ ಹಾಳು ಮಾಡಲು ಯತ್ನಿಸಿದ್ದ! ಪಾಕ್ ಮಾಜಿ ಆಟಗಾರ ಗಂಭೀರ ಆರೋಪ

ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಅಧಿಕಾರದಲ್ಲಿದ್ದಾಗ ವಿರಾಟ್ ಕೊಹ್ಲಿ ಬಗ್ಗೆ ಗೊಂದಲಮಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಅವರ ಕ್ರಿಕೆಟ್ ವೃತ್ತಿಜೀವನವನ್ನು ಹಾಳುಮಾಡಲು ಯತ್ನಿಸಿತ್ತು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಆರೋಪಿಸಿದ್ದಾರೆ.

ಟೀಂ ಇಂಡಿಯಾ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸುವಲ್ಲಿ ಆಯ್ಕೆ ಸಮಿತಿ ಯಾವ ರೀತಿ ಪ್ರಮುಖ ಪಾತ್ರ ವಹಿಸಿದೆ ಎನ್ನುವುದನ್ನು ಡ್ಯಾನಿಶ್ ಕನೇರಿಯಾ ವಿವರಿಸಿದ್ದಾರೆ. ಫಾರ್ಮ್ ಕಳೆದುಕೊಂಡಿದ್ದಾಗ ಕೂಡ ಕೊಹ್ಲಿಯನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ, ಅವರಿಗೆ ನಿರಂತರವಾಗಿ ಅವಕಾಶ ನೀಡಲಿಲ್ಲ ಎಂದು ಹೇಳಿದ್ದಾರೆ.

"ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ವಿರಾಟ್ ಕೊಹ್ಲಿ ಕ್ರಿಕೆಟ್ ವೃತ್ತಿಜೀವನವನ್ನು ಹಾಳುಮಾಡಲು ಪ್ರಯತ್ನಿಸಿತು. ಫಾರ್ಮ್‌ ಕಂಡುಕೊಳ್ಳಲು ಹೋರಾಡುತ್ತಿದ್ದಾಗ ಅವರಿಗೆ ನಿರಂತರವಾಗಿ ಅವಕಾಶ ನೀಡಲಿಲ್ಲ. ಆಯ್ದ ಸರಣಿಗಳಲ್ಲಿ ಮಾತ್ರ ಆಡಲು ಅವಕಾಶ ನೀಡಲಾಯಿತು. ನಿರ್ದಾಕ್ಷಿಣ್ಯವಾಗಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಯಿತು" ಎಂದು ಕನೇರಿಯಾ ಹೇಳಿದ್ದಾರೆ.

IND vs NZ : ಸೂರ್ಯನ ಅಬ್ಬರಕ್ಕೆ ನ್ಯೂಜಿಲೆಂಡ್ ತತ್ತರ, ಭಾರತಕ್ಕೆ 65 ರನ್‌ಗಳ ಭರ್ಜರಿ ಜಯIND vs NZ : ಸೂರ್ಯನ ಅಬ್ಬರಕ್ಕೆ ನ್ಯೂಜಿಲೆಂಡ್ ತತ್ತರ, ಭಾರತಕ್ಕೆ 65 ರನ್‌ಗಳ ಭರ್ಜರಿ ಜಯ

"ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ ಬಗ್ಗೆ ಸಾಕಷ್ಟು ಸುಳ್ಳುಗಳನ್ನು ಹೇಳಲಾಗಿದೆ. ಅವರನ್ನು ನಾಯಕತ್ವದಿಂದ ತೆಗೆದುಹಾಕುವ ಸಂದರ್ಭದಲ್ಲಿ ಕೊಹ್ಲಿ ಜೊತೆ ಬಿಸಿಸಿಐ, ಆಯ್ಕೆ ಸಮಿತಿ ಚರ್ಚೆ ನಡೆಸಿಲ್ಲ ಎಂದು ಕೊಹ್ಲಿ ಅವರೇ ಹೇಳಿದ್ದಾರೆ." ಎಂದು ಕನೇರಿಯಾ ಹೇಳಿದ್ದಾರೆ.

ಆತ ಉತ್ತಮ ಆಯ್ಕೆಗಾರ ಆಗಿರಲಿಲ್ಲ

ಆತ ಉತ್ತಮ ಆಯ್ಕೆಗಾರ ಆಗಿರಲಿಲ್ಲ

ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯ ಕಾಯಕ್ಷಮತೆಯ ಬಗ್ಗೆ ಡ್ಯಾನಿಶ್ ಕನೇರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚೇತನ್ ಶರ್ಮಾ ತಾವು ಮಾಡುವ ಕೆಲಸದಲ್ಲಿ ವಿಫಲವಾಗಿದ್ದರು, ಉತ್ತಮ ತಂಡವನ್ನು ಆಯ್ಕೆ ಮಾಡಲಿಲ್ಲ ಎಂದು ಹೇಳಿದರು.

ಹಲವು ಸರಣಿಗಳಿಗೆ ಬೇರೆ ಬೇರೆ ನಾಯಕರನ್ನು ನೇಮಿಸಿದರು, ಹಲವು ಬೇಡದ ಪ್ರಯೋಗಗಳನ್ನು ಮಾಡಿದರು. ಅವರ ಪ್ರಯೋಗಗಳ ಕಾರಣದಿಂದ ಟೀಂ ಇಂಡಿಯಾ ಒಂದು ನಿಶ್ಚಿತ ತಂಡವಾಗಲೇ ಇಲ್ಲ, ಹಲವು ಬದಲಾವಣೆಗಳನ್ನು ಮಾಡುತ್ತಲೇ ಇದ್ದರು ಎಂದು ಹೇಳಿದರು.

FIFA World cup 2022: ಫ್ರಾನ್ಸ್‌ಗೆ ಆಘಾತ, ಸ್ಟ್ರೈಕರ್ ಕರೀಮ್ ಬೆಂಜೆಮಾ ಟೂರ್ನಿಯಿಂದ ಔಟ್

ಪ್ರತಿಭಾವಂತರಿಗೆ ಅವಕಾಶ ಸಿಗಲಿಲ್ಲ

ಪ್ರತಿಭಾವಂತರಿಗೆ ಅವಕಾಶ ಸಿಗಲಿಲ್ಲ

ಅವರು ಆಯ್ಕೆಗಳು ಪ್ರಶ್ನಾರ್ಹವಾಗಿದ್ದವು. ಕಡಿಮೆ ಸಮಯದಲ್ಲಿ ಹಲವರನ್ನು ನಾಯಕರನ್ನಾಗಿ ನೇಮಿಸಿದರು. ತಂಡದಲ್ಲಿ ಇರಲು ಅರ್ಹತೆ ಇರುವ ಹಲವು ಪ್ರತಿಭಾವಂತ ಆಟಗಾರರಿಗೆ ಅವಕಾಶ ಸಿಗಲಿಲ್ಲ. ಕಳೆದ ವರ್ಷದಲ್ಲಿ ಭಾರತ ತಂಡವನ್ನು ಎಂಟು ವಿಭಿನ್ನ ನಾಯಕರು ಮುನ್ನಡೆಸಿದ್ದಾರೆ. ಕೆಲವರಿಗೆ ಮೂರು ನಾಲ್ಕು ಪಂದ್ಯಗಳಲ್ಲಿ ಅವಕಾಶ ನೀಡಿ ನಂತರ ಕೈಬಿಡಲಾಯಿತು ಎಂದು ಹೇಳಿದರು.

ಮಾಜಿ ಕ್ರಿಕೆಟಿಗರು ಈ ಸಮಿತಿಯಲ್ಲಿ ಇರಬೇಕು ಎನ್ನುವುದು ನಿಜ, ಆದರೆ ಹೆಚ್ಚಿನ ಅನುಭವ ಇರುವ ಮಾಜಿ ಆಟಗಾರರು ಸಮಿತಿಯಲ್ಲಿ ಇರಬೇಕು. ಚೇತನ್ ಶರ್ಮಾ ಉತ್ತಮ ಕ್ರಿಕೆಟಿಗನಾಗಿರಲಿಲ್ಲ, ಈ ಬಾರಿ ಉತ್ತಮ ಅಭ್ಯರ್ಥಿಯನ್ನು ಬಿಸಿಸಿಐ ಆಯ್ಕೆ ಮಾಡಬೇಕು ಎಂದು ಕನೇರಿಯಾ ಹೇಳಿದ್ದಾರೆ.

 ಆಯ್ಕೆ ಸಮಿತಿಯನ್ನು ವಜಾಗೊಳಿಸಿದ ಬಿಸಿಸಿಐ

ಆಯ್ಕೆ ಸಮಿತಿಯನ್ನು ವಜಾಗೊಳಿಸಿದ ಬಿಸಿಸಿಐ

2022ರ ಟಿ20 ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಸೋಲುವ ಮೂಲಕ ಟೀಂ ಇಂಡಿಯಾ ವಿಶ್ವಕಪ್‌ನಿಂದ ನಿರ್ಗಮಿಸಿತ್ತು. ಅದರ ಪರಿಣಾಮವಾಗಿ ಬಿಸಿಸಿಐ ಆಯ್ಕೆ ಸಮಿತಿಯನ್ನು ವಜಾ ಮಾಡಿದೆ. ಹೊಸ ಆಯ್ಕೆಗಾರರ ನೇಮಕ ಮಾಡಿಕೊಳ್ಳಲು ಮುಂದಾಗಿದೆ.

ಕಳೆದ ಟಿ20 ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್ ತಲುಪುವಲ್ಲಿ ಕೂಡ ವಿಫಲವಾಗಿತ್ತು. ನಂತರ ಏಷ್ಯಾಕಪ್‌ನಲ್ಲಿ ಸೋತು ನಿರ್ಗಮಿಸಿತು. ಈಗ 2022ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಸೋತು ನಿರ್ಗಮಿಸಿತು. ಸಂದರ್ಭಗಳಿಗೆ ತಕ್ಕಂತೆ ತಂಡವನ್ನು ಆಯ್ಕೆ ಮಾಡುವಲ್ಲಿ ಬಿಸಿಸಿಐ ವಿಫಲವಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೂ, ಬಿಸಿಸಿಐ ಹಲವು ಬದಲಾವಣೆಗೆ ಮುಂದಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Sunday, November 20, 2022, 17:57 [IST]
Other articles published on Nov 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X