ದ್ವಿಶತಕ ಸಿಡಿಸಿ 70 ವರ್ಷ ಹಳೆಯ ದಾಖಲೆ ಮುರಿದ ಪೂಜಾರಾ

Posted By:

ರಾಜ್ ಕೋಟ್, ನವೆಂಬರ್ 03: ಚೇತೇಶ್ವರ್‌ ಪೂಜಾರಾ ಅವರು ರಣಜಿ ಟ್ರೋಫಿ ಟೂರ್ನಿಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಸೌರಾಷ್ಟ್ರ ಪರ ಆಡುತ್ತಾ ದ್ವಿಶತಕ ಸಿಡಿಸಿ 70 ವರ್ಷ ಹಳೆಯ ದಾಖಲೆ ಮುರಿದಿದ್ದಾರೆ.

ಚೊಚ್ಚಲ ತ್ರಿಶತಕ ಸಿಡಿಸಿ, ಕರ್ನಾಟಕಕ್ಕೆ ಬಲ ತಂದ ಮಾಯಾಂಕ್

ಪೂಜಾರಾ ಅವರು ಉತ್ತಮ ಲಯದಲ್ಲಿರುವುದು ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ವಿಚಾರವಾಗಲಿದೆ. ಶ್ರೀಲಂಕಾ ತಂಡದ ವಿರುದ್ಧದ ಮೂರು ಟೆಸ್ಟ್‌ ಪಂದ್ಯಗಳ ಕ್ರಿಕೆಟ್‌ ಸರಣಿಗೆ ಪೂಜಾರಾ ಸಜ್ಜಾಗಿದ್ದು, ಲಂಕನ್ನರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

Cheteshwar Pujara breaks 70-year-old record with 12th first-class double century

ಜಾರ್ಖಂಡ್‌ ವಿರುದ್ಧ ಇಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಸೌರಾಷ್ಟ್ರದ ಪರ ಆಡುವ ಪೂಜಾರಾ ಅವರು ದ್ವಿಶತಕ ಸಿಡಿಸಿದ್ದಾರೆ. ಇದು ಅವರ ವೈಯಕ್ತಿಕ 12ನೇ ದ್ವಿಶತಕವಾಗಿದೆ. ಈ ಮೂಲಕ ದೇಶಿ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ದ್ವಿಶತಕ ಬಾರಿಸಿದ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ.

11 ದ್ವಿಶತಕ ಗಳಿಸಿ ವಿಜಯ್‌ ಮರ್ಚಂಟ್ಸ್‌ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿರುವ ಪೂಜಾರಾ ಅವರು ಇಂದಿನ ಪಂದ್ಯದಲ್ಲಿ ಸುಮಾರು 566 ನಿಮಿಷಗಳ ಕಾಲ ಕ್ರೀಸ್ ನಲ್ಲಿದ್ದು, 355 ಎಸೆತಗಳಲ್ಲಿ 204ರನ್ (28 ಬೌಂಡರಿ) ಗಳಿಸಿದರು.

ದ್ವಿಶತಕ ಗಳಿಕೆ ಪಟ್ಟಿಯಲ್ಲಿ ಉಳಿದಂತೆ ವಿಜಯ್‌ ಹಜಾರೆ, ಸುನಿಲ್‌ ಗವಾಸ್ಕರ್‌ ಮತ್ತು ರಾಹುಲ್‌ ದ್ರಾವಿಡ್‌ 10 ಬಾರಿ ದೇಶಿ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ್ದಾರೆ.

Story first published: Friday, November 3, 2017, 15:34 [IST]
Other articles published on Nov 3, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ