ಈಡನ್ ಗಾರ್ಡನ್ಸ್ ನಲ್ಲಿ ಪೂಜಾರಾ ವಿಶಿಷ್ಟ ದಾಖಲೆ

Posted By:

ಕೋಲ್ಕತಾ, ನವೆಂಬರ್ 20: ಈಡನ್ ಗಾರ್ಡನ್ಸ್ ಮೈದಾನದಲ್ಲಿ ಪ್ರವಾಸಿ ಶ್ರೀಲಂಕಾ ಹಾಗೂ ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೂ, ಉಭಯ ತಂಡಗಳಿಂದ ಉತ್ತಮ ಪ್ರದರ್ಶನ ಕಂಡು ಬಂದಿತು.

ಭಾರತದ ಬ್ಯಾಟ್ಸ್ ಮನ್ ಚೇತೇಶ್ವರ್ ಪೂಜಾರಾ ಅವರು ಸೋಮವಾರದಂದು ಮೈದಾನಕ್ಕಿಳಿಯುತ್ತಿದ್ದಂತೆ ವಿಶಿಷ್ಟ ದಾಖಲೆ ಬರೆದರು.

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರಾ ಅವರು ಐದು ದಿನಗಳು ಕೂಡಾ ಮೈದಾನಕ್ಕಿಳಿದು ಬ್ಯಾಟ್ ಬೀಸಿದ ಸಾಧನೆ ಮಾಡಿದ್ದಾರೆ. ಈ ಸಾಧನೆಯನ್ನು ಪೂಜಾರಾ ಅವರಿಗೂ ಮುನ್ನ ಎಂಎಲ್ ಜೈಸಿಂಹ ಹಾಗೂ ಹಾಲಿ ಕೋಚ್ ರವಿಶಾಸ್ತ್ರಿ ಅವರು ಈ ಸಾಧನೆ ಮಾಡಿದ್ದರು.

Cheteswar Pujaracheteshwar pujara,test cricket, cricket, india, ಚೇತೇಶ್ವರ್ ಪೂಜಾರಾ, ಟೆಸ್ಟ್ ಕ್ರಿಕೆಟ್, ಕ್ರಿಕೆಟ್, ಭಾರತ

1960ರಲ್ಲಿ ಜೈಸಿಂಹ ಅವರು ಆಸ್ಟ್ರೇಲಿಯಾ ವಿರುದ್ಧ ಅಜೇಯ 20 ರನ್ ಮತ್ತು 74ರನ್ ಗಳಿಸುವ ಮೂಲಕ ಸಾಧನೆ ಮಾಡಿದ್ದರು. 1984ರಲ್ಲಿ ರವಿಶಾಸ್ತ್ರಿ ಅವರು ಇಂಗ್ಲೆಂಡ್ ವಿರುದ್ಧ 111 ಮತ್ತು ಅಜೇಯ 7ರನ್‌ ಗಳಿಸಿ ಐದು ದಿನ ಆಟವಾಡಿದ್ದರು.

ವಿಶೇಷವೆಂದರೆ ಈ ಮೂರು ವಿಶಿಷ್ಟ ಸಾಧನೆಗೆ ಕೋಲ್ಕತಾದ ಈಡನ್ ಗಾರ್ಡನ್ಸ್ ಸಾಕ್ಷಿಯಾಗಿದೆ.

ಈ ಪಂದ್ಯದ ಮೊದಲ ದಿನದಂದು ಕೆಎಲ್ ರಾಹುಲ್ ಅವರು ಶೂನ್ಯ ಸುತ್ತಿದ ಬಳಿಕ ಆಡಲು ಬಂದ ಪೂಜಾರಾ ಮೂರು ದಿನಗಳ ಕಾಲ ಆಡಿ 117 ಎಸೆತಗಳಳ್ಲಿ 52ರನ್ ಗಳಿಸಿದರು. ನಂತರ ನಾಲ್ಕನೇ ದಿನ ಆಡಲು ಬಂದ ಪೂಜಾರಾ ಅವರು ದಿನದ ಅಂತ್ಯಕ್ಕೆ 2 ರನ್ ಗಳಿಸಿ ಅಜೇಯರಾಗಿ ಉಳಿದರು. ನಂತರ 22ರನ್ ಗಳಿಸಿ ಔಟಾದರು.

Story first published: Monday, November 20, 2017, 23:38 [IST]
Other articles published on Nov 20, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ