ಎಂಎಸ್ ಧೋನಿ ಶ್ಲಾಘಿಸಿದ ಮಾಜಿ ಮಾರಕ ವೇಗಿ ಡೇಲ್ ಸ್ಟೇನ್

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಆವೃತ್ತಿಯಲ್ಲಿ ಯಾರು ಚಾಂಪಿಯನ್ಸ್ ಪಟ್ಟ ಗೆಲ್ಲಲಿದ್ದಾರೆ ಅನ್ನೋದು ಶುಕ್ರವಾರ (ಅಕ್ಟೋಬರ್‌ 15) ರಾತ್ರಿ ಗೊತ್ತಾಗಲಿದೆ. ಫೈನಲ್‌ ಪಂದ್ಯಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಡ್ ರೈಡರ್ಸ್ ತಂಡಗಳು ಸಿದ್ಧವಾಗಿವೆ.

ಮುಂದಿನ ಐಪಿಎಲ್‌ನಲ್ಲಿ ಧೋನಿ ಸಿಎಸ್‌ಕೆ ಆಟಗಾರನಾಗಿರುವುದು ಅನುಮಾನ ಎಂದ ಮಾಜಿ ಕ್ರಿಕೆಟಿಗಮುಂದಿನ ಐಪಿಎಲ್‌ನಲ್ಲಿ ಧೋನಿ ಸಿಎಸ್‌ಕೆ ಆಟಗಾರನಾಗಿರುವುದು ಅನುಮಾನ ಎಂದ ಮಾಜಿ ಕ್ರಿಕೆಟಿಗ

ಕಳೆದ ಸೀಸನ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಎಲ್ಲಾ ತಂಡಗಳಿಗಿಂತಲೂ ಮೊದಲೇ ಪ್ಲೇ ಆಫ್ಸ್‌ ಅವಕಾಶದಿಂದ ಹೊರ ಬಿದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಭರ್ಜರಿ ಕಮ್‌ಬ್ಯಾಕ್‌ ಮಾಡಿದೆ. ಎಂಎಸ್ ಧೋನಿ ನಾಯಕತ್ವದ ಬಲವೂ ಸಿಎಸ್‌ಕೆಗೆ ಇದೆ. ಎಂಎಸ್‌ಡಿ, ಸಿಎಸ್‌ಕೆ ಪ್ರದರ್ಶನ ಬೆಂಬಲಿಸಿ ದಕ್ಷಿಣ ಆಫ್ರಿಕಾ ಮಾಜಿ ವೇಗಿ ಡೇಲ್ ಸ್ಟೇನ್ ಮಾತನಾಡಿದ್ದಾರೆ.

ಐಪಿಎಲ್‌ ಫೈನಲ್‌ಗೆ ಪ್ರವೇಶ ಪಡೆದುಕೊಂಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್ ಈಗಲೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿದ್ದಾರೆ. ಐಪಿಎಲ್‌ನಲ್ಲಿ ಈ ಬಾರಿ ಮಾರ್ಗನ್ ಏನೂ ಉತ್ತಮ ಪ್ರದರ್ಶನ ನೀಡಿಲ್ಲ. ಆದರೆ ಧೋನಿ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದರೂ ಐಪಿಎಲ್‌ನಲ್ಲಿ ಮಾರ್ಗನ್‌ಗಿಂತ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಟಿ20 ವಿಶ್ವಕಪ್‌: ಭಾರತ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಆ್ಯರನ್ ಫಿಂಚ್ ಲಭ್ಯಟಿ20 ವಿಶ್ವಕಪ್‌: ಭಾರತ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಆ್ಯರನ್ ಫಿಂಚ್ ಲಭ್ಯ

IPL ಚಾಂಪಿಯನ್ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು? RCBಗೆ ಎಷ್ಟು ಸಿಕ್ತು? | Oneindia Kannada

ಧೋನಿ ಮತ್ತು ಮಾರ್ಗನ್ ಫಾರ್ಮ್ ಬಗ್ಗೆ ಡೇಲ್ ಸ್ಟೇನ್ ಕೂಡ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ಧೋನಿಯಂಥವರಿಗೆ ಕ್ಲಾಸ್ ಶಾಶ್ವತವಾಗಿರುತ್ತದೆ. ಕ್ವಾಲಿಫೈಯರ್ 1ರಲ್ಲಿ ಧೋನಿ ತನ್ನ ತಂಡವನ್ನು ಪಾರು ಮಾಡಿದ್ದಾರೆ. ಸಿಎಸ್‌ಕೆಯನ್ನು ಗೆರೆ ದಾಟಿಸಿದ್ದಾರೆ. ಆದರೆ ಇಯಾನ್ ಮಾರ್ನ್ ಬ್ಯಾಟಿಂಗ್‌ನಲ್ಲಿ ಸ್ವಲ್ಪ ಪರದಾಡುತ್ತಿದ್ದಾರೆ," ಎಂದು ಸ್ಟೇನ್ ಹೇಳಿದ್ದಾರೆ. ಕ್ವಾಲಿಫೈಯರ್-1ರಲ್ಲಿ ಡೆಲ್ಲಿ ಮತ್ತು ಚೆನ್ನೈ ತಂಡಗಳು ಕಾದಾಡಿದ್ದವು. ಪಂದ್ಯದ ಕೊನೇ ಓವರ್‌ನಲ್ಲಿ ಸಿಎಸ್‌ಕೆ ಸೋಲುವ ಸಾಧ್ಯತೆ ಇತ್ತಾದರೂ ಧೋನಿ ಸಿಕ್ಸ್ ಬಾರಿಸಿ ಹಳೆಯ ಧೋನಿಯಂತೆ ಪಂದ್ಯವನ್ನು ಫಿನಿಶ್ ಮಾಡಿದ್ದರು.

For Quick Alerts
ALLOW NOTIFICATIONS
For Daily Alerts
Story first published: Friday, October 15, 2021, 15:41 [IST]
Other articles published on Oct 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X