ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಪಿಎಲ್ 2020 ತಂಡ ವಿಮರ್ಶೆ: ಜಮೈಕಾ ತಲ್ಲವಾಸ್ ತಂಡದ ಬಲ, ದೌರ್ಬಲ್ಯ

Cpl 2020: Strength Weakness Of Jamaica Tallawahs

ಸಿಪಿಎಲ್ 2020 ರ ಆರಂಭದ ಮುಂಚೆಯೇ ಜಮೈಕಾ ತಲ್ಲಾವಾಸ್ ಬೇಡದ ಕಾರಣಕ್ಕೆ ಸಾಕಷ್ಟು ಸುದ್ದಿಯಾಗಿತ್ತು. ಅದಕ್ಕೆ ಕಾರಣ ಕ್ರಿಸ್ ಗೇಲ್ ತಂಡದ ನಿರ್ದೇಶಕ ರಾಮ್‌ ನರೇಶ್ ಸರ್ವಾನ್ ಕೆಲ ಆರೋಪಗಳನ್ನು ಮಾಡಿದ್ದರು. ಆದರೆ ಕೌಟುಂಬಿಕ ಕಾರಣಗಳಿಂದಾಗಿ ಈ ಬಾರಿಯ ಸಿಪಿಎಲ್ ಟೂರ್ನಿಯಿಂದ ಗೇಲ್ ಹೊರಗುಳಿದಿದ್ದಾರೆ. ಇದು ತಂಡಕ್ಕೆ ಸಹಜವಾಗಿಯೇ ಹಿನ್ನಡೆಯಾಗಲಿದೆ.

ಸಿಪಿಎಲ್ 2020: ಕೆರಿಬಿಯನ್ ನಾಡಿನ ಟಿ20 ದಿಗ್ಗಜ ಈ ಬಾರಿಯ ಟೂರ್ನಿಗೆ ಅಲಭ್ಯಸಿಪಿಎಲ್ 2020: ಕೆರಿಬಿಯನ್ ನಾಡಿನ ಟಿ20 ದಿಗ್ಗಜ ಈ ಬಾರಿಯ ಟೂರ್ನಿಗೆ ಅಲಭ್ಯ

ಇನ್ನು 2013 ಮತ್ತು 2016ರಲ್ಲಿ ಜಮೈಕಾ ತಲ್ಲವಾಸ್ ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು ಎಂಬುದು ಈ ತಂಡದ ಹೆಗ್ಗಳಿಕೆ. ಆದರೆ ಕಳೆದ ಆವೃತ್ತಿಯಲ್ಲಿ ನೀರಸ ಪ್ರದರ್ಶನವನ್ನು ನೀಡಿದ್ದ ತಂಡ ಲೀಗ್ ಹಂತದ ಅಂತ್ಯದ ವೇಳೆಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಆಡಿದ 10 ಪಂದ್ಯಗಳಲ್ಲಿ ಕೇವಲ 2 ಗೆಲುವು ಮಾತ್ರವೇ ತಂಡಕ್ಕೆ ಸಾಧ್ಯವಾಗಿತ್ತು. ಈ ಬಾರಿಯ ಕಣದಲ್ಲಿ ತಂಡ ಯಾವ ರೀತಿಯಿದೆ ಎಂಬುದನ್ನು ಮುಂದೆ ಓದಿ..

ತಂಡದ ಸಾಮರ್ಥ್ಯ:

ತಂಡದ ಸಾಮರ್ಥ್ಯ:

ತಲ್ಲಾವಾಸ್ ಒಂದು ಪಂದ್ಯದಲ್ಲಿ 11 ಸ್ಥಳೀಯ ಆಟಗಾರರನ್ನು ಕಣಕ್ಕಿಳಿಸಿದ ಏಕೈಕ ಫ್ರ್ಯಾಂಚೈಸಿಯಾಗಿ ಉಳಿದುಕೊಂಡಿದೆ. ಆದರೆ ಬಳಿಕ ಇದರಲ್ಲಿ ಬದಲಾವಣೆ ಮಾಡಿಕೊಂಡು ವಿದೇಶಿ ಯುವ ಆಟಗಾರರನ್ನು ಸೇರಿಸಿಕೊಂಡು ತಂಡದ ಬಲವನ್ನು ಹೆಚ್ಚಿಸಿದೆ. ದಕ್ಷಿಣ ಆಫ್ರಿಕಾದ ಲೆಗ್ ಸ್ಪಿನ್ನರ್ ತಬ್ರೆಜ್ ಶಮ್ಸಿ, ನೇಪಾಳದ ಲೆಗ್ ಸ್ಪಿನ್ನರ್ ಸಂದೀಪ್ ಲಮಿಚಾನೆ ಅವರ ಬೌಲಿಂಗ್ ತಂಡದ ಅಸ್ತ್ರಗಳಾಗಿದೆ. ಆಂಡ್ರೆ ರಸ್ಸೆಲ್, ಕಾರ್ಲೋಸ್ ಬ್ರಾಥ್‌ವೈಟ್, ಜೆರ್ಮೈನ್ ಬ್ಲ್ಯಾಕ್‌ವುಡ್, ರೋವ್ಮನ್ ಪೊವೆಲ್, ಋತುವಿನ ನಾಯಕ, ಚಾಡ್ವಿಕ್ ವಾಲ್ಟನ್ ವೇಗಿ ಓಶೇನ್ ಥಾಮಸ್ ಕೆರೆಬಿಯನ್ ನಾಡಿನ ಆಟಗಾರರಾಗಿದ್ದಾರೆ.

ತಂಡದ ದೌರ್ಬಲ್ಯ

ತಂಡದ ದೌರ್ಬಲ್ಯ

ತಂಡ ಕೆಲವೇ ಆಟಗಾರರನ್ನು ನೆಚ್ಚಿಕೊಂಡಿದೆ. ಬ್ಯಾಟಿಂಗ್‌ನಲ್ಲಿ ಆಂಡ್ರೆ ರಸೆಲ್ ಹಾಗೂ ಬ್ರಾಥ್‌ವೇಟ್ ಹಾಗೂ ಬೌಲಿಂಗ್‌ನಲ್ಲಿ ಶಮ್ಸಿ ಹಾಗೂ ಲಮಿಚಾನೆ ಪ್ರಮುಖ ಅಸ್ತ್ರಗಳಾಗಿದ್ದಾರೆ. ಆದರೆ ಇವರು ಉತ್ತಮ ಪ್ರದರ್ಶನ ನೀಡಲು ಎಡವಿದರೆ ತಂಡಕ್ಕೆ ಕಠಿಣ ಸಂದರ್ಭಗಳು ಎದುರಾಗುವುದರಲ್ಲಿ ಅನುಮಾನವಿಲ್ಲ

ಜಮೈಕಾ ತಲ್ಲವಾಸ್ ತಂಡ ಹೀಗಿದೆ

ಜಮೈಕಾ ತಲ್ಲವಾಸ್ ತಂಡ ಹೀಗಿದೆ

ಆಂಡ್ರೆ ರಸ್ಸೆಲ್, ಸಂದೀಪ್ ಲಮಿಚೇನ್, ಕಾರ್ಲೋಸ್ ಬ್ರಾಥ್‌ವೈಟ್, ರೋವ್ಮನ್ ಪೊವೆಲ್, ಗ್ಲೆನ್ ಫಿಲಿಪ್ಸ್, ಚಾಡ್ವಿಕ್ ವಾಲ್ಟನ್, ಓಶೇನ್ ಥಾಮಸ್, ಆಸಿಫ್ ಅಲಿ, ಫಿಡೆಲ್ ಎಡ್ವರ್ಡ್ಸ್, ಪ್ರೆಸ್ಟನ್ ಮೆಕ್‌ಸ್ವೀನ್, ಆಂಡ್ರೆ ಮೆಕಾರ್ಥಿ, ನಿಕೋಲಸ್ ಕಿರ್ಟನ್, ಜೆವರ್ ರಾಯಲ್, ಎನ್‌ಕ್ರುಮಾ ಬೊನ್ನರ್, ವೀರಸಮ್ಮಿ ಪರ್ಮಾಲ್ ಶಮ್ಸಿ.

Story first published: Friday, August 7, 2020, 16:26 [IST]
Other articles published on Aug 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X