ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ಆಸ್ಟ್ರೇಲಿಯಾ ಏಕದಿನ ಸರಣಿಗೆ ಸೇರಿದ್ದ ಪ್ರೇಕ್ಷಕರನ್ನು ಕಂಡು ದಂಗಾದ ಕ್ರಿಕೆಟ್ ಆಸ್ಟ್ರೇಲಿಯಾ!

Cricket Australia CEO Nick Hockley reaction on massive dip in crowd numbers

ಟಿ20 ವಿಶ್ವಕಪ್‌ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜನೆ ಮಾಡಿದ ಆಸ್ಟ್ರೇಲಿಯಾ ಅದಾದ ಬಳಿಕ ಇಂಗ್ಲೆಂಡ್ ತಂಡದ ವಿರುದ್ಧ ಏಕದಿನ ಸರಣಿಯಲ್ಲಿ ಭಾಗಿಯಾಗಿತ್ತು. ಈ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಇಂಗ್ಲೆಂಡ್ ತಂಡಕ್ಕೆ ವೈಟ್‌ವಾಶ್ ಮಾಡುವಲ್ಲಿ ಆಸಿಸ್ ಪಡೆ ಯಶಸ್ವಿಯಾಯಿತು. ಆದರೆ ಈ ಸರಣಿಯನ್ನು ವೀಕ್ಷಿಸಲು ಮೈದಾನಕ್ಕೆ ಆಗಮಿಸಿದ್ದ ಪ್ರೇಕ್ಷಕರ ಸಂಖ್ಯೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯನ್ನು ದಂಗಾಗುವಂತೆ ಮಾಡಿದೆ.

ಏಕದಿನ ಸರಣಿಯಲ್ಲಿ ಕ್ರೀಡಾಂಗಣಕ್ಕೆ ಆಗಮಿಸಿ ಪಂದ್ಯಗಳನ್ನು ನೋಡುವ ಪ್ರೇಕ್ಷಕರ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಕುಸಿತವಾಗಿದೆ. ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಏಕದಿನ ಪಂದ್ಯದಲ್ಲಿ 10406 ಪಂದ್ಯ ಪ್ರೇಕ್ಷಕರು ಮಾತ್ರವೇ ಭಾಗಿಯಾಗಿದ್ದರು. ಇದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗೆ ಅಚ್ಚರಿ ಮೂಡಿಸಿದೆ. ಈ ಸರಣಿಯಲ್ಲಿ ಆಸ್ಟ್ರೇಲಿಯಾ 3-0 ಅಂತರದಿಂದ ವಶಕ್ಕೆ ಪಡೆದುಕೊಂಡಿದ್ದರು ಕೂಡ ಸ್ಟೇಡಿಯಂ ಸಪ್ಪೆಯಾಗಿತ್ತು.

ಸಂಜು ಸ್ಯಾಮ್ಸನ್‌ಗೆ ಮತ್ತೆ ನಿರಾಸೆ: ಫಿಫಾ ವಿಶ್ವಕಪ್‌ನಿಂದಲೂ ಅಭಿಮಾನಿಗಳ ಬೆಂಬಲಸಂಜು ಸ್ಯಾಮ್ಸನ್‌ಗೆ ಮತ್ತೆ ನಿರಾಸೆ: ಫಿಫಾ ವಿಶ್ವಕಪ್‌ನಿಂದಲೂ ಅಭಿಮಾನಿಗಳ ಬೆಂಬಲ

ವಿಶ್ವಕಪ್‌ನಲ್ಲಿ ಸಾಧಾರಣ ಬೆಂಬಲ

ವಿಶ್ವಕಪ್‌ನಲ್ಲಿ ಸಾಧಾರಣ ಬೆಂಬಲ

ಇನ್ನು ಟಿ20 ವಿಶ್ವಕಪ್‌ನಲ್ಲಿಯೂ ಆಸ್ಟ್ರೇಲಿಯಾ ತಂಡಕ್ಕೆ ನಿರೀಕ್ಷಿಸಿದ ಮಟ್ಟದ ಅಭಿಮಾನಿಗಳ ಬೆಂಬಲ ದೊರೆತಿರಲಿಲ್ಲ ಎಂಬುದನ್ನು ಗಮನಿಸಬೇಕಿದೆ. ಗ್ರೂಪ್ ಸ್ಟೇಜ್‌ನಲ್ಲಿ ಆಸ್ಟ್ರೇಲಿಯಾ ಐದು ಪಂದ್ಯಗಳನ್ನು ಆಡಿದ್ದು ಈ ಪಂದ್ಯಗಳಲ್ಲಿ ಸರಾಸರಿ 37,565 ಹಾಜರಾತಿಯನ್ನು ಹೊಂದಿತ್ತು. ಇದರಲ್ಲಿ ಇಂಗ್ಲೆಂಡ್ ವಿರುದ್ಧದ ಮಳೆಯಿಂದ ರದ್ದಾದ ಪಂದ್ಯ ಕೂಡ ಸೇರಿದೆ.

ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥರ ಪ್ರತಿಕ್ರಿಯೆ

ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥರ ಪ್ರತಿಕ್ರಿಯೆ

ಇನ್ನು ಈ ವಿಚಾರವಾಗಿ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ನಿಕ್ ಹಾಕ್ಲೆ ಪ್ರತಿಕ್ರಿಯೆ ನೀಡಿದ್ದಾರೆ. ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ನಾವು ಇಲ್ಲಿ 14 ವೈಟ್-ಬಾಲ್ ಪಂದ್ಯಗಳನ್ನು ಆಡಿದ್ದೇವೆ ಎಮದರೆ ನೀವು ನಂಬುತ್ತೀರಾ? ಆದರೆ ಒಟ್ಟಾರೆಯಾಗಿ ವಿಶ್ವಕಪ್‌ನಲ್ಲಿ ಸೇರಿಕೊಂಡಿದ್ದ ಪ್ರೇಕ್ಷಕರ ಸಂಖ್ಯೆಯಿಂದಾಗಿ ನಾವು ನಿಜವಾಗಿಯೂ ರೋಮಾಂಚನಗೊಂಡಿದ್ದೇವೆ. ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ವಿಶ್ವಕಪ್ ಮತ್ತು ವೈಟ್-ಬಾಲ್ ಸರಣಿಗಳಲ್ಲಿ ಆಸ್ಟ್ರೇಲಿಯಾದಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ಟಿಕೆಟ್‌ಗಳನ್ನು ಖರೀದಿಸಿದ್ದಾರೆ" ಎಂದಿದ್ದಾರೆ ನಿಕ್ ಹಾಕ್ಲೆ.

ಈತ ಭಾರತದಲ್ಲಿನ ನನ್ನ ನೆಚ್ಚಿನ ವೇಗದ ಬೌಲರ್; ಮಾಜಿ ಆಸೀಸ್ ಬೌಲರ್ ಬ್ರೆಟ್ ಲೀ

ಪ್ರೇಕ್ಷಕರ ಬೆಂಬಲಕ್ಕೆ ತೃಪ್ತಿಯಿದೆ ಎಂದ ನಿಕ್ ಹಾಕ್ಲೆ

ಪ್ರೇಕ್ಷಕರ ಬೆಂಬಲಕ್ಕೆ ತೃಪ್ತಿಯಿದೆ ಎಂದ ನಿಕ್ ಹಾಕ್ಲೆ

"ಈವರೆಗಿನ ಪ್ರೇಕ್ಷಕರ ಸಂಖ್ಯೆಯಲ್ಲಿ ನಾವು ತೃಪ್ತರಾಗಿದ್ದೇವೆ. ಆದರೆ ಕೆಲ ವಿಭಿನ್ನ ಸಂದರ್ಭಗಳು ಕೂಡ ಇದ್ದು ಅದಕ್ಕೆ ಸಂಬಂಧಿಸಿದಂತೆ ನಾವು ಕೊರೊನಾ ವೈರಸ್‌ನ ಬಳಿಕ ಕ್ರಿಕೆಟ್ ವೇಳಾಪಟ್ಟಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇನ್ನು ಇಂಗ್ಲೆಂಡ್ ವಿರುದ್ಧದ ಸರಣಿ ವಿಶ್ವಕಪ್ ಮುಕ್ತಾಯವಾದಂತೆ ತಕ್ಷಣಕ್ಕೆ ಆರಂಭವಾಯಿತು ಎನಿಸುತ್ತದೆ. ಆದರೆ ಇದು ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನ ದೃಷ್ಟಿಯಿಂದ ಪ್ರಮುಖವಾದ ಭಾಗವಾಗಿದೆ" ಎಂದು ನಿಕ್ ಹಾಕ್ಲೆ ಹೇಳಿಕೆ ನೀಡಿದ್ದಾರೆ.

ಆಸ್ಟ್ರೇಲಿಯಾಗೆ ಆಘಾತ ನೀಡಿದ ವಿಶ್ವಕಪ್ ಟೂರ್ನಿ

ಆಸ್ಟ್ರೇಲಿಯಾಗೆ ಆಘಾತ ನೀಡಿದ ವಿಶ್ವಕಪ್ ಟೂರ್ನಿ

ಇನ್ನು ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿದ್ದ ಆಸ್ಟ್ರೇಲಿಯಾ ಲೀಗ್ ಹಂತದಿಂದಲೇ ನಿರ್ಗಮಿಸಿ ನಿರಾಸೆ ಮೂಡಿಸಿದೆ. ಮೊದಲ ಪಂದ್ಯದಲ್ಲಿಯೇ ನ್ಯೂಜಿಲಂಡ್ ವಿರುದ್ಧ ಹೀನಾಯಕ ಪ್ರದರ್ಶನ ನಿಡಿ ಹಿನ್ನಡೆ ಅನುಭವಿಸಿತ್ತು ಆಸಿಸ್ ಪಡೆ. ಇನ್ನು ಟೂರ್ನಿಯುದ್ದಕ್ಕೂ ಆಸ್ಟ್ರೇಲಿಯಾ ತಂಡ ಪರಿಣಾಮಕಾರಿಯಾದ ಪ್ರದರ್ಶನ ನಿಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿತ್ತು. ಆರಂಬಿಕ ಆಟಗಾರ ಡೇವಿಡ್ ವಾರ್ನರ್ ಉತ್ತಮ ಆರಂಭ ನೀಡುವಲ್ಲಿ ವಿಫಲವಾದರೆ ಆರೋನ್ ಫಿಂಚ್ ಕೂಡ ನಿರೀಕ್ಷಿತ ಪ್ರದರ್ಶನ ನಿಡಲು ವಿಫಲವಾದರು. ವಾಋ್ನರ್ ಹಾಗೂ ಫಿಂಚ್ ಅವರ ಟಿ20 ಭವಿಷ್ಯ ಅಸ್ಥಿರವಾಗಿರುವಾಗ 2014ರ ವಿಶ್ವಕಪ್ ದೃಷ್ಟಿಯಿಂದ ಆಸ್ಟ್ರೇಲಿಯಾ ತಂಡ ಕೂಡ ಪ್ರಮುಖ ಬದಲಾವಣೆಗೆ ಮುಂದಾಗುವ ಸಾಧ್ಯತೆಯಿದೆ.

Story first published: Monday, November 28, 2022, 12:22 [IST]
Other articles published on Nov 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X