ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ.ಆಫ್ರಿಕಾ ಬೌಲರ್ ಡೊನಾಲ್ಡ್ ಸಿಟ್ಟಾದ ಕ್ಷಣ ಸ್ಮರಿಸಿದ ಕನ್ನಡಿಗ ದೊಡ್ಡ ಗಣೇಶ್

Cricketer Dodda Ganesh recalled 1996-97 test match against South Africa

ಬೆಂಗಳೂರು, ಮೇ 5: 1996-97ರ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಬೌಲರ್ ಅಲನ್ ಡೊನಾಲ್ಡ್ ಸಿಟ್ಟಾದ ಕ್ಷಣವನ್ನು ಕನ್ನಡಿಗ ದೊಡ್ಡ ಗಣೇಶ್ ಸ್ಮರಿಸಿಕೊಂಡಿದ್ದಾರೆ. ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಹೆಚ್ಚು ಕಾಲ ಕ್ರೀಸ್‌ನಲ್ಲಿ ಇರುವಂತೆ ವಿಕೆಟ್‌ ಕಾವಲು ಕಾದಿದ್ದಕ್ಕೆ ಡೊನಾಲ್ಡ್ ಆವತ್ತು ಸಿಟ್ಟಾಗಿದ್ದರಂತೆ.

ದೊಡ್ಡ ಗಣೇಶ್ ಸ್ಮರಿಸಿಕೊಂಡ ಈ ಘಟನೆ ನಡೆದಿದ್ದು ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಂಡಿದ್ದ ಭಾರತ ಅಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಿತ್ತು ಆಗ. ಇದರಲ್ಲಿ ಎರಡನೇ ಟೆಸ್ಟ್ ಪಂದ್ಯದ ಘಟನೆಯಿದು. ಕೇಪ್‌ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಈ ಪಂದ್ಯ ನಡೆದಿತ್ತು. ಗಣೇಶ್ ನೆನೆಪಿಸಿರುವ ಈ ಸಂಗತಿ ನಡೆದಿದ್ದು ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ.

ಟ್ವಿಟರ್‌ನಲ್ಲಿ ಅಭಿಮಾನಿಯೊಬ್ಬರು ಗಣೇಶ್ ಅವರಲ್ಲಿ, 'ನಿಮ್ಮ ಹಾಗು ಅಲನ್ ಡೊನಾಲ್ಡ್ ನಡುವೆ ನಡೆದ ಒಂದು ಇನ್ಸಿಡೆಂಟ್ ಬಗ್ಗೆ ಹೇಳಿ' ಅಂತ ಪ್ರಶ್ನಿಸಿದ್ದರು, ಇದಕ್ಕೆ ಉತ್ತರಿಸಿದ ಗಣೇಶ್, 'ಖಂಡಿತ ಗೆಳೆಯ. ನಾನು ಬ್ಯಾಟ್ ಮಾಡಲು ಬಂದಾಗ ಸಚಿನ್ 150 ದಾಟಿದ್ದರು, ನೀವು 200 ಮಾಡಿ. ಏನೇ ಪೆಟ್ಟು ಬಿದ್ದರೂ, ಎಂತಾ ಬಾಲ್ ಹಾಕಿದರೂ ನಾನು ವಿಕೆಟ್ ಒಪ್ಪಿಸಲ್ಲ ಅಂತ ಹೇಳಿ ಡೊನಾಲ್ಡ್ ರನ್ನು ದಿಟ್ಟತನದಿಂದ ಎದುರಿಸಿದೆ. ಇದರಿಂದ ಸಿಟ್ಟಾದ ಡೊನಾಲ್ಡ್ ಇಂಗ್ಲಿಷ್ನಲ್ಲಿ ಏನೇನೋ ಅಂದರೂ ನಾನು ಕಣ್ಣೆತ್ತಿ ನೋಡಲಿಲ್ಲ. ಸುಮ್ಮನೆ ನಕ್ಕೆ. 2*off 11b' ಎಂದು ಪ್ರತಿಕ್ರಿಯಿಸಿದ್ದಾರೆ.

ಆವತ್ತು ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಸಚಿನ್ 169 ರನ್ ಬಾರಿಸಿದ್ದರೆ, ಕೊನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಗಣೇಶ್ 11 ಎಸೆತಗಳಿಗೆ 2 ರನ್ ಕಲೆ ಹಾಕಿದ್ದರು. ಸಚಿನ್‌ ಹೆಚ್ಚು ಸಮಯ ಆಡಲು ಅವಕಾಶ ಕಲ್ಪಿಸೋದು ಗಣೇಶ್ ಅವರ ಯೋಜನೆಯಾಗಿತ್ತು.

ಅಂದ್ಹಾಗೆ, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ದಕ್ಷಿಣ ಆಫ್ರಿಕಾ, 529-7 (162.5)+256-6 (72) ಸ್ಕೋರ್‌ ಮಾಡಿದ್ದರೆ, ಭಾರತ 359-10 (92.2)+144-10 (66.2) ರನ್ ಬಾರಿಸಿ 282 ರನ್‌ನಿಂದ ಸೋತಿತ್ತು. ಸರಣಿ ಕೂಡ 2-0ಯಿಂದ ಪ್ರೋಟಿಯಾಸ್ ವಶವಾಗಿತ್ತು. ದ್ವಿತೀಯ ಟೆಸ್ಟ್‌ನಲ್ಲಿ ಅಲನ್ ಡೊನಾಲ್ಡ್ 2+3 ವಿಕೆಟ್ ಪಡೆದಿದ್ದರು.

Story first published: Tuesday, May 5, 2020, 11:12 [IST]
Other articles published on May 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X