ಮಾಜಿ ಕ್ರಿಕೆಟಿಗರಿಗೆ ಹಣದ ಕೊಡುಗೆ; ಮಾದರಿ ಕೆಲಸಕ್ಕೆ ಮುಂದಾದ ಸಿಎಸ್‌ಕೆ

ತನ್ನದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಐಪಿಎಲ್ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ಆಗಾಗ ಸಮಾಜಮುಖಿ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗುತ್ತಾ ಇರುತ್ತದೆ.

ಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ಮಳೆ ಬಂದದ್ದು ಎರಡು ತಂಡಗಳಿಗೂ ಅನುಕೂಲವಾಯಿತು ಎಂದ ಮಾಜಿ ಕ್ರಿಕೆಟಿಗಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ಮಳೆ ಬಂದದ್ದು ಎರಡು ತಂಡಗಳಿಗೂ ಅನುಕೂಲವಾಯಿತು ಎಂದ ಮಾಜಿ ಕ್ರಿಕೆಟಿಗ

ಈ ಹಿಂದೆ ಕೊರೋನಾ ಸಮಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ವೆಂಟಿಲೇಟರ್ ಮತ್ತು ಹಣದ ಕೊಡುಗೆಯನ್ನು ನೀಡುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಷ್ಟೆ ಅಲ್ಲದೆ ಇತ್ತೀಚೆಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ಭಾರತದ ಕ್ರೀಡಾ ಪಟು ನೀರಜ್ ಚೋಪ್ರಾಗೆ ಒಂದು ಕೋಟಿ ರೂಪಾಯಿ ನಗದು ಪುರಸ್ಕಾರ ನೀಡುವುದರ ಮತ್ತು ನೀರಜ್ ಚೋಪ್ರಾಗೆ ಕೊಡುಗೆಯಾಗಿ ವಿಶೇಷ ಜೆರ್ಸಿ ತಯಾರಿಸುವುದರ ಮೂಲಕ ಮತ್ತೊಮ್ಮೆ ಕ್ರೀಡಾಭಿಮಾನಿಗಳ ಹೃದಯವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದಿತ್ತು.

IND vs ENG : ಭಾರತ vs ಇಂಗ್ಲೆಂಡ್ 2ನೇ ಟೆಸ್ಟ್: ಸಂಭ್ಯಾವ್ಯ ತಂಡ, ಪಿಚ್ ರಿಪೋರ್ಟ್, ಹವಾಮಾನ ವರದಿIND vs ENG : ಭಾರತ vs ಇಂಗ್ಲೆಂಡ್ 2ನೇ ಟೆಸ್ಟ್: ಸಂಭ್ಯಾವ್ಯ ತಂಡ, ಪಿಚ್ ರಿಪೋರ್ಟ್, ಹವಾಮಾನ ವರದಿ

ಇದೀಗ ಅಂತಹದ್ದೇ ಮತ್ತೊಂದು ಒಳ್ಳೆಯ ಕೆಲಸ ಮಾಡಲು ಮುಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ತಮಿಳುನಾಡು ರಾಜ್ಯದ ಹಿರಿಯ ಕ್ರಿಕೆಟಿಗರಿಗೆ ವಿಶೇಷ ಕಾರ್ಯಕ್ರಮವೊಂದರಲ್ಲಿ ನಗದು ಪುರಸ್ಕಾರ ನೀಡುವ ಮೂಲಕ ಗೌರವ ಸಲ್ಲಿಸಲು ತೀರ್ಮಾನಿಸಿದೆ. ಹೌದು ಕ್ರಿಕೆಟ್‍ನಲ್ಲಿ ತಮ್ಮದೇ ಆದ ಕೊಡುಗೆ ಸಲ್ಲಿಸಿರುವ ತಮಿಳುನಾಡು ಮೂಲದ ಆಯ್ದ ಹಿರಿಯ ಕ್ರಿಕೆಟಿಗರಿಗೆ ತಲಾ 7 ಲಕ್ಷ ರೂಪಾಯಿ ಗೌರವ ಧನವನ್ನು ನೀಡಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ತೀರ್ಮಾನಿಸಿದೆ. ಮಂಗಳವಾರ (ಆಗಸ್ಟ್ 10) ಚೆನ್ನೈನಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಕ್ರೀಡಾ ಸ್ಫೂರ್ತಿ ಮೆರೆಯುವಂತಹ ಕೆಲಸವನ್ನು ಮಾಡಲು ಮುಂದಾಗಿದೆ.

ಭಾರತ vs ಇಂಗ್ಲೆಂಡ್ ಮೊದಲ ಟೆಸ್ಟ್‌; ಪಂದ್ಯಶ್ರೇಷ್ಠ ಪ್ರಶಸ್ತಿ ಕುರಿತು ಜಹೀರ್ ಖಾನ್ ಬೇಸರಭಾರತ vs ಇಂಗ್ಲೆಂಡ್ ಮೊದಲ ಟೆಸ್ಟ್‌; ಪಂದ್ಯಶ್ರೇಷ್ಠ ಪ್ರಶಸ್ತಿ ಕುರಿತು ಜಹೀರ್ ಖಾನ್ ಬೇಸರ

1950ರಿಂದ 1990ರವರೆಗೆ ಸೇವೆ ಸಲ್ಲಿಸಿದ ಕ್ರಿಕೆಟಿಗರಿಗೆ ಸರಿಯಾದ ನಗದು ಬಹುಮಾನಗಳು ಸಿಕ್ಕಿರುವುದಿಲ್ಲ, ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂತಹ ಕ್ರಿಕೆಟಿಗರನ್ನು ಗುರುತಿಸಿ ತಲಾ 7 ಲಕ್ಷ ಗೌರವ ಧನವನ್ನು ನೀಡಲು ಆರಂಭಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಗೌರವಧನ ಪಡೆದುಕೊಳ್ಳಲಿರುವ ಮಾಜಿ ಕ್ರಿಕೆಟಿಗರ ಪಟ್ಟಿ

* ಕೆ ಆರ್ ರಾಜಗೋಪಾಲ್: ತಮಿಳುನಾಡು ತಂಡದ ಮಾಜಿ ಬ್ಯಾಟ್ಸ್‌ಮನ್‌ ಮತ್ತು ವಿಕೆಟ್ ಕೀಪರ್. 1967ರ ಸಮಯದಲ್ಲಿ ಟೀಮ್ ಇಂಡಿಯಾ ಪರ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಅವಕಾಶವನ್ನು ಕೆ ಆರ್ ರಾಜಗೋಪಾಲ್ ಕೂದಲೆಳೆ ಅಂತರದಲ್ಲಿ ಕೈ ತಪ್ಪಿಸಿಕೊಂಡಿದ್ದರು.

* ಶ್ರೀ ನಜಾಮ್ ಹುಸೇನ್: 1960ರ ವೇಳೆಯಲ್ಲಿ ಮೈಸೂರು ಮತ್ತು ಮದ್ರಾಸ್ ತಂಡಗಳ ಪರ ಆಡುತ್ತಿದ್ದ ಶ್ರೀ ನಜಾಮ್ ಹುಸೇನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೌರವವನ್ನು ಸ್ವೀಕರಿಸಲಿದ್ದಾರೆ.

* ಶ್ರೀ ಎಸ್ ವಿ ಎಸ್ ಮಣಿ: ತಮಿಳುನಾಡು ಮತ್ತು ಸೌತ್ ಜ಼ೋನ್ ತಂಡಗಳ ಪರ ಆಟವನ್ನು ಆಡುತ್ತಿದ್ದ ಎಸ್ ವಿ ಎಸ್ ಮಣಿ ಅವರಿಗೂ ಸಹ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೌರವಿಸಲಿದೆ.

* ಶ್ರೀ ಆರ್ ಪ್ರಭಾಕರ್: ತಮಿಳುನಾಡು ರಾಜ್ಯ ತಂಡದ ಪರ ಆಟವಾಡುತ್ತಿದ್ದ ಆರ್ ಪ್ರಭಾಕರ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಹಿಂದೆ ನಡೆದಿದ್ದ ಹಿಂದೂ ಟ್ರೋಫಿಯಲ್ಲಿ 30 ಓವರ್‌ಗಳಿಗೆ 160 ರನ್ ಬಾರಿಸಿದ್ದ ಆರ್ ಪ್ರಭಾಕರ್ 16 ಸಿಕ್ಸರ್ ಮತ್ತು 14 ಬೌಂಡರಿ ಬಾರಿಸಿದ್ದರು.

* ಶ್ರೀ ಕೆ ಪಾರ್ಥಸಾರಥಿ

ಚೆನ್ನೈ ನಗರದಲ್ಲಿರುವ ಎಂ ಎ ಚಿದಂಬರಂ ಕ್ರೀಡಾಂಗಣದ ಮೇಲ್ವಿಚಾರಕರಾಗಿ 1973ರಿಂದ 2013ರವರೆಗೆ ಸೇವೆ ಸಲ್ಲಿಸಿರುವ ಶ್ರೀ ಕೆ ಪಾರ್ಥಸಾರಥಿ ಅವರಿಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೌರವ ಧನ ನೀಡಿ ಗೌರವಿಸಲಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, August 10, 2021, 16:31 [IST]
Other articles published on Aug 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X