ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

CWG 2022: ಭಾರತ vs ಇಂಗ್ಲೆಂಡ್ ಸೆಮಿಫೈನಲ್ ಪಂದ್ಯದ ಟಾಸ್ ವರದಿ ಮತ್ತು ಆಡುವ ಬಳಗ

CWG 2022: India women vs England Women semifinal toss report and playing 11

ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟ ಮುಂಬರುವ ಸೋಮವಾರದಂದು ( ಆಗಸ್ಟ್ 8 ) ಮುಕ್ತಾಯಗೊಳ್ಳಲಿದೆ. ಇನ್ನು ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾ ಕೂಟದಲ್ಲಿ ಕ್ರಿಕೆಟ್ ಆಟವೂ ಕೂಡ ಒಂದು ಭಾಗವಾಗಿರುವುದು ವಿಶೇಷವಾಗಿದ್ದು, ಕ್ರಿಕೆಟ್ ವಿಭಾಗದ ಪಂದ್ಯಗಳು ಭಾನುವಾರ ( ಆಗಸ್ಟ್ 7 ) ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಮುಕ್ತಾಯಗೊಳ್ಳಲಿದೆ.

IND vs WI: ಸೂರ್ಯಕುಮಾರ್ ಬಾಬರ್ ಹಿಂದಿಕ್ಕಿ ನಂ.1 ಆಗಲು 4ನೇ ಟಿ20ಯಲ್ಲಿ ಇಷ್ಟು ರನ್ ಗಳಿಸಿದರೆ ಸಾಕು!IND vs WI: ಸೂರ್ಯಕುಮಾರ್ ಬಾಬರ್ ಹಿಂದಿಕ್ಕಿ ನಂ.1 ಆಗಲು 4ನೇ ಟಿ20ಯಲ್ಲಿ ಇಷ್ಟು ರನ್ ಗಳಿಸಿದರೆ ಸಾಕು!

ಇನ್ನು ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ ಕ್ರಿಕೆಟ್ ವಿಭಾಗದಲ್ಲಿ ಭಾಗವಹಿಸಿದ್ದ 8 ತಂಡಗಳ ಪೈಕಿ ಭಾರತೀಯ ವನಿತೆಯರು, ಆಸ್ಟ್ರೇಲಿಯ ವನಿತೆಯರು, ಇಂಗ್ಲೆಂಡ್ ವನಿತೆಯರು ಹಾಗೂ ನ್ಯೂಜಿಲೆಂಡ್ ವನಿತೆಯರ ತಂಡಗಳು ಸೆಮಿಫೈನಲ್ ಸುತ್ತಿಗೆ ಆರ್ಹತೆಯನ್ನು ಪಡೆದುಕೊಂಡಿದ್ದು, ಪ್ರಥಮ ಸೆಮಿಫೈನಲ್ ಪಂದ್ಯದಲ್ಲಿ ಭಾರತ ವನಿತೆಯರು ಹಾಗೂ ಇಂಗ್ಲೆಂಡ್ ವನಿತೆಯರು ಮುಖಾಮುಖಿಯಾಗಿದ್ದಾರೆ.

ಕೊಹ್ಲಿ ವಿದ್ಯಾರ್ಹತೆ ಪಿಯುಸಿ: ಅನುಷ್ಕಾ ಶರ್ಮಾ ವಿದ್ಯಾರ್ಹತೆ ಏನು? ಓದಿದ್ದೆಲ್ಲಾ ಕರ್ನಾಟಕದಲ್ಲೇ!ಕೊಹ್ಲಿ ವಿದ್ಯಾರ್ಹತೆ ಪಿಯುಸಿ: ಅನುಷ್ಕಾ ಶರ್ಮಾ ವಿದ್ಯಾರ್ಹತೆ ಏನು? ಓದಿದ್ದೆಲ್ಲಾ ಕರ್ನಾಟಕದಲ್ಲೇ!

ಉಭಯ ತಂಡಗಳ ನಡುವಿನ ಈ ಪಂದ್ಯ ಇಂದು ( ಆಗಸ್ಟ್ 6 ) ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದಿರುವ ಭಾರತ ವನಿತೆಯರ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಇಂಗ್ಲೆಂಡ್ ಆಡುವ ಬಳಗ

ಇಂಗ್ಲೆಂಡ್ ಆಡುವ ಬಳಗ

ಡೇನಿಯಲ್ ವ್ಯಾಟ್, ಸೋಫಿಯಾ ಡಂಕ್ಲೆ, ನಟಾಲಿ ಸ್ಕಿವರ್(ಸಿ), ಆಮಿ ಜೋನ್ಸ್(ಡಬ್ಲ್ಯೂ), ಮಾಯಾ ಬೌಚಿಯರ್, ಆಲಿಸ್ ಕ್ಯಾಪ್ಸೆ, ಕ್ಯಾಥರೀನ್ ಬ್ರಂಟ್, ಸೋಫಿ ಎಕ್ಲೆಸ್ಟೋನ್, ಫ್ರೇಯಾ ಕೆಂಪ್, ಇಸ್ಸಿ ವಾಂಗ್, ಸಾರಾ ಗ್ಲೆನ್

ಭಾರತ ಆಡುವ ಬಳಗ

ಭಾರತ ಆಡುವ ಬಳಗ

ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್(ಸಿ), ತನಿಯಾ ಭಾಟಿಯಾ(ಡಬ್ಲ್ಯೂ), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ಸ್ನೇಹ ರಾಣಾ, ಮೇಘನಾ ಸಿಂಗ್, ರೇಣುಕಾ ಸಿಂಗ್

ಟೂರ್ನಿಯಲ್ಲಿ ಇತ್ತಂಡಗಳ ಸಾಧನೆ

ಟೂರ್ನಿಯಲ್ಲಿ ಇತ್ತಂಡಗಳ ಸಾಧನೆ

ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ ಕ್ರಿಕೆಟ್ ವಿಭಾಗದಲ್ಲಿ ಭಾರತ ಎ ಗುಂಪಿನ ತಂಡವಾಗಿತ್ತು ಹಾಗೂ ಇಂಗ್ಲೆಂಡ್ ಬಿ ಗುಂಪಿನ ತಂಡವಾಗಿತ್ತು. ಉಭಯ ತಂಡಗಳು ಲೀಗ್ ಹಂತದಲ್ಲಿ ತಮ್ಮ ಗುಂಪಿನ ಇತರೆ 3 ತಂಡಗಳ ವಿರುದ್ಧ ತಲಾ ಒಂದೊಂದು ಪಂದ್ಯವನ್ನಾಡಿದವು. ಇಂಗ್ಲೆಂಡ್ ಗ್ರೂಪ್ ಹಂತದಲ್ಲಿನ ತನ್ನ ಎಲ್ಲಾ ಪಂದ್ಯಗಳಲ್ಲಿಯೂ ಜಯ ಸಾಧಿಸಿ 6 ಅಂಕಗಳನ್ನು ಪಡೆದು ಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರೆ, ಭಾರತ ವನಿತೆಯರು ಆಡಿದ 3 ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ಮಾತ್ರ ಗೆದ್ದು ಉಳಿದೊಂದು ಪಂದ್ಯವನ್ನು ಸೋಲುವುದರ ಮೂಲಕ 4 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿತ್ತು.

Story first published: Saturday, August 6, 2022, 15:22 [IST]
Other articles published on Aug 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X