ದೈತ್ಯ ಭಾರತವೇ ವಿಶ್ವ ಟಿ20 ಗೆಲ್ಲಲಿದೆ: ಲಾರಾ

By Mahesh

ಹೈದರಾಬಾದ್, ಅ.14: 'ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಆಯೋಜನೆಯ ವಿಶ್ವ ಟಿ 20 ಚಾಂಪಿಯನ್ ಶಿಪ್ ಗೆಲ್ಲಲು ಟೀಂ ಇಂಡಿಯಾ ಸಮರ್ಥವಾಗಿ, ಇತರೆ ತಂಡಗಳಿಗೆ ಭಯ ಹುಟ್ಟಿಸುವಂಥ ತಂಡವೆಂದರೆ ಅದು ಭಾರತ ಮಾತ್ರ' ಎಂದು ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಹೇಳಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾ ಮಿಶ್ರ ಫಲಿತಾಂಶ ಕಂಡಿರಬಹುದು. ಅದರೆ, ಮುಂದಿನ ವರ್ಷ ನಡೆಯಲಿರುವ ವಿಶ್ವ ಟ್ವೆಂಟಿ-20 ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳ ಪೈಕಿ ಭಾರತವೇ ಅಗ್ರಗಣ್ಯ ಎಂದು ವೆಸ್ಟ್‌ಇಂಡೀಸ್‌ನ ಬ್ಯಾಟಿಂಗ್ ದಂತಕತೆ ಬ್ರಿಯಾನ್ ಲಾರಾ ಹೇಳಿದರು.

'Dangerous' India favourites to win World T20 2016: Brian Lara

ತವರಿನ ನೆಲದಲ್ಲಿ ಆಡುವಾಗ ಭಾರತದಷ್ಟು ಅಪಾಯಕಾರಿ ತಂಡ ಮತ್ತೊಂದಿಲ್ಲ. 2011ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಏಕದಿನ ವಿಶ್ವಕಪ್‌ನ್ನು ಜಯಿಸುವ ಮೂಲಕ ಇದನ್ನು ಈಗಾಗಲೇ ಸಾಬೀತುಪಡಿಸಿದೆ.

ನನ್ನ ಪ್ರಕಾರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತವೇ ಫೇವರಿಟ್. ಭಾರತಕ್ಕೆ ತವರು ನೆಲದಲ್ಲಿ ಆಡುವಾಗ ಒತ್ತಡವಿರುತ್ತದೆ. ಅದರೆ, ಭಾರತಕ್ಕೆ ವಿಶ್ವಕಪ್ ಗೆಲ್ಲುವ ಅವಕಾಶ ಅಧಿಕವಿದೆ, ಗೆಲ್ಲುವ ಮಾರ್ಗ ಪೊತ್ತಿದೆ ಎಂದು ಲಾರಾ ಅಭಿಪ್ರಾಯಪಟ್ಟರು.

ಹೈದರಾಬಾದಿನಲ್ಲಿ ವೈಯುಪಿಪಿ ಟಿವಿ ಅಪ್ಲಿಕೇಷನ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬಂದಿದ್ದ ಲಾರಾ ಅವರು, ಮುಂಬರುವ ಆಲ್ ಸ್ಟಾರ್ ಲೀಗ್ ಬಗ್ಗೆ ಉತ್ಸುಕರಾಗಿರುವುದಾಗಿ ಹೇಳಿದರು. ಸಚಿನ್, ವಾರ್ನ್ ಸೇರಿದಂತೆ ಹಲವಾರು ದಿಗ್ಗಜರ ಜೊತೆ ಆಡುವುದು ಅತ್ಯಂತ ಸಂತಸದ ಕ್ಷಣ ಎಂದರು.

ನಾನು ಕೋಚ್ ಅಥವಾ ಮಾರ್ಗದರ್ಶಿಯಾದರೂ ವೆಸ್ಟ್ ಇಂಡೀಸ್ ತಂಡದ ಸ್ಥಿತಿ ಬದಲಾಗುವುದಿಲ್ಲ. ನಾನಂತೂ ಆಡಳಿತಗಾರನಾಗಿ ದುಡಿಯಲು ಸಿದ್ಧನಿಲ್ಲ. ಉತ್ತಮ ಪ್ರತಿಭೆಗಳಿದ್ದರೂ ಅವಕಾಶ ವಂಚನೆ, ಇನ್ನಿತರ ರಾಜಕೀಯದಿಂದಾಗಿ ವಿಂಡೀಸ್ ತನ್ನ ಹಿಂದಿನ ಕಳೆ ಕಳೆದುಕೊಂಡಿದೆ.

ನನಗೆ ನನ್ನ ವೃತ್ತಿ ಜೀವನದಲ್ಲಿ 12,000 ರನ್ ಗಳಿಸುವುದು ಮುಖ್ಯವಾಗಿತ್ತು, ಮಿಕ್ಕ ದಾಖಲೆಗಳ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ದಾಖಲೆಗಳಿಗಾಗಿ ನಾನು ಎಂದೂ ಆಡಿಲ್ಲ. ಭಾರತದಲ್ಲಿ ನನಗೆ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ ನನ್ನ ವಿಶೇಷ ಗೆಳೆಯರಿದ್ದಾರೆ. ಇಲ್ಲಿಗೆ ಬರುವುದು ನನಗೆ ಅತ್ಯಂತ ಇಷ್ಟವಾದ ಸಂಗತಿ ಎಂದು ಲಾರಾ ಹೇಳಿದ್ದಾರೆ (ಪಿಟಿಐ)

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, October 15, 2015, 10:59 [IST]
Other articles published on Oct 15, 2015
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more