ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊನೆಗೂ ಭಾರತ ಚಿನ್ನ ಗೆದ್ದಿದೆ ಎಂದು ವ್ಯಂಗ್ಯವಾಡಿದ ಡೇನಿಯಲ್ ಅಲೆಕ್ಸಾಂಡರ್!

India vs England: Daniel Alexander trolls Virat Kohli as James Anderson dismisses him for a golden duck

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಿದ್ದು ಮೊದಲನೇ ಪಂದ್ಯ ಇಂಗ್ಲೆಂಡ್‌ನ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಆಗಸ್ಟ್ 4ರ ಬುಧವಾರದಂದು ಆರಂಭವಾದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಆದರೆ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ನಿರೀಕ್ಷಿಸಿದ ಮಟ್ಟದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ.

ಭಾರತ vs ಇಂಗ್ಲೆಂಡ್: ಈ ಕೆಟ್ಟ ದಾಖಲೆಯಲ್ಲಿ ಧೋನಿಯನ್ನೂ ಹಿಂದಿಕ್ಕಿದ ವಿರಾಟ್ ಕೊಹ್ಲಿ!ಭಾರತ vs ಇಂಗ್ಲೆಂಡ್: ಈ ಕೆಟ್ಟ ದಾಖಲೆಯಲ್ಲಿ ಧೋನಿಯನ್ನೂ ಹಿಂದಿಕ್ಕಿದ ವಿರಾಟ್ ಕೊಹ್ಲಿ!

ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು 183 ರನ್‌ಗಳಿಗೆ ಆಲ್ಔಟ್ ಆಗುವ ಮೂಲಕ ನೀರಸ ಪ್ರದರ್ಶನವನ್ನು ನೀಡಿದರು. ಹೀಗೆ ಇಂಗ್ಲೆಂಡ್ ವಿರುದ್ಧ ಭಾರತದ ಬೌಲರ್‌ಗಳು ಮೊದಲ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರುವುದರ ಮೂಲಕ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು 183 ರನ್‌ಗಳಿಗೆ ಕಟ್ಟಿಹಾಕಿದರು. ನಂತರ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೇ 21 ರನ್ ಗಳಿಸಿತ್ತು.

ಧೋನಿ ಇದ್ದಾಗ ತಂಡದಲ್ಲಿ ಸ್ಥಾನ ಪಡೆದು ಕೊಹ್ಲಿ ನಾಯಕತ್ವದಲ್ಲಿ ತಂಡದಿಂದ ಹೊರಬಿದ್ದಿರುವ 10 ಆಟಗಾರರು!ಧೋನಿ ಇದ್ದಾಗ ತಂಡದಲ್ಲಿ ಸ್ಥಾನ ಪಡೆದು ಕೊಹ್ಲಿ ನಾಯಕತ್ವದಲ್ಲಿ ತಂಡದಿಂದ ಹೊರಬಿದ್ದಿರುವ 10 ಆಟಗಾರರು!

ಎರಡನೇ ದಿನ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭವನ್ನೇ ಪಡೆದುಕೊಂಡಿತು. ಭಾರತದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದ ಕೆ ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ರೋಹಿತ್ ಶರ್ಮಾ 36 ರನ್ ಗಳಿಸಿ ನಿರ್ಗಮಿಸಿದರೆ, ನಂತರ ಬಂದ ಚೇತೇಶ್ವರ್ ಪೂಜಾರ ಕೇವಲ 4 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು ಮತ್ತು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಜೇಮ್ಸ್ ಆ್ಯಂಡರ್ಸನ್ ಎಸೆತದಲ್ಲಿ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡುವ ಮೂಲಕ ಡಕ್ಔಟ್ ಆದರು. ಹೌದು ಆ್ಯಂಡರ್ಸನ್ ಎಸೆದ ಮೊದಲನೇ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಔಟ್ ಆಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಹೀಗೆ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಆಗುತ್ತಿದ್ದಂತೆಯೇ ವಿರಾಟ್ ವಿರುದ್ಧ ಈ ಕೆಳಕಂಡ ಟೀಕೆಗಳು ವ್ಯಕ್ತವಾಗಿವೆ.

ಚಿನ್ನದ ಪದಕ ಗೆದ್ದ ಭಾರತ ಎಂದ ಡೇನಿಯಲ್ ಅಲೆಕ್ಸಾಂಡರ್

ಚಿನ್ನದ ಪದಕ ಗೆದ್ದ ಭಾರತ ಎಂದ ಡೇನಿಯಲ್ ಅಲೆಕ್ಸಾಂಡರ್

ಶ್ರೀಲಂಕಾದ ಕ್ರೀಡಾ ತಜ್ಞ ಡೇನಿಯಲ್ ಅಲೆಕ್ಸಾಂಡರ್ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಆದ ಕುರಿತು ಪ್ರತಿಕ್ರಿಯಿಸಿದ್ದು ಭಾರತ ಚಿನ್ನದ ಪದಕವನ್ನು ಗೆದ್ದಿದೆ ಎಂದಿದ್ದಾರೆ. ಹೌದು ಡೇನಿಯಲ್ ಅಲೆಕ್ಸಾಂಡರ್ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಕುರಿತು ಟೀಕೆಯನ್ನು ವ್ಯಕ್ತಪಡಿಸಿದ್ದು ಭಾರತಕ್ಕೆ ಚಿನ್ನ ಲಭಿಸಿದೆ ಆದರೆ ಒಲಿಂಪಿಕ್ಸ್‌ನಲ್ಲಿ ಅಲ್ಲ ಬದಲಾಗಿ ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದಾರೆ ಎಂದು ಡೇನಿಯಲ್ ಅಲೆಕ್ಸಾಂಡರ್ ವಿರಾಟ್ ಕೊಹ್ಲಿಯ ಕಾಲೆಳೆದಿದ್ದಾರೆ.

ಕೆಟ್ಟ ದಾಖಲೆ ಬರೆದ ಕೊಹ್ಲಿ

ಕೆಟ್ಟ ದಾಖಲೆ ಬರೆದ ಕೊಹ್ಲಿ

ಇಷ್ಟು ಮಾತ್ರವಲ್ಲದೆ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಬೇಡವಾದ ಕೆಟ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಹೌದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಡಕ್ಔಟ್ ಆಗಿರುವ ಭಾರತೀಯ ನಾಯಕ ಎಂಬ ಕೆಟ್ಟ ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ವಿರಾಟ್ ಕೊಹ್ಲಿ 9 ಬಾರಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿದರೆ ಮಹೇಂದ್ರ ಸಿಂಗ್ ಧೋನಿ 8 ಬಾರಿ ಟೆಸ್ಟ್ ಕ್ರಿಕೆಟ್‍ನಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ.

VIRAT KOHLI ಟೆಸ್ಟ್ ಮ್ಯಾಚ್ ನಲ್ಲಿ ಮಾಡಿದ ಹೊಸ ದಾಖಲೆ !! | Oneindia Kannada
ಪಂದ್ಯಕ್ಕೆ ಮಳೆಯ ಕಾಟ

ಪಂದ್ಯಕ್ಕೆ ಮಳೆಯ ಕಾಟ

ಇನ್ನು ಟೀಮ್ ಇಂಡಿಯಾ ಸದ್ಯ 4 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿದ್ದು ಕೆಎಲ್ ರಾಹುಲ್ ಅಜೇಯ 57 ಮತ್ತು ರಿಷಭ್ ಪಂತ್ ಅಜೇಯ 7 ರನ್ ಗಳಿಸಿದ್ದಾರೆ. ಈ ನಡುವೆ ವರುಣನ ಆಗಮನವಾಗಿದ್ದು ಎರಡನೇ ದಿನದ ಪಂದ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ.

Story first published: Thursday, August 5, 2021, 22:34 [IST]
Other articles published on Aug 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X