ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಇಬ್ಬರು ಆಟಗಾರರ ಅದ್ಭುತ ಆಟದ ಹಿಂದಿನ ಶಕ್ತಿ ಧೋನಿ ಎಂದ ದಾನಿಶ್ ಕನೇರಿಯಾ

Danish Kaneria credits former Indian captain for grooming Deepak Chahar and other players

ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡೆದ ಎರಡನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಗೆಲ್ಲಲಿದೆ ಎಂದು ಯಾರೂ ಸಹ ಊಹಿಸಿರಲಿಲ್ಲ. ಬ್ಯಾಟ್ಸ್‌ಮನ್‌ಗಳೆಲ್ಲಾ ವಿಕೆಟ್ ಒಪ್ಪಿಸಿದ ನಂತರ ಭಾರತ ಪಂದ್ಯವನ್ನು ಕೈಚೆಲ್ಲುವುದು ಬಹುತೇಕ ಖಚಿತ ಎಂದೇ ಎಣಿಸಲಾಗಿತ್ತು. ಅದರೆ ಪವಾಡವೆಂಬಂತೆ ಭಾರತ ತಂಡದ ಬೌಲರ್ ದೀಪಕ್ ಚಹರ್ ಅದ್ಭುತ ಪ್ರದರ್ಶನ ನೀಡುವುದರ ಮೂಲಕ ಟೀಮ್ ಇಂಡಿಯಾವನ್ನು ಗೆಲುವಿನ ದಡ ಮುಟ್ಟಿಸಿದರು.

82 ಎಸೆತಗಳಲ್ಲಿ ಅಜೇಯ 69 ರನ್ ಬಾರಿಸಿದ ದೀಪಕ್ ಚಹರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ದೀಪಕ್ ಚಹರ್ ಆಡಿದ ಈ ಅದ್ಭುತ ಇನ್ನಿಂಗ್ಸ್‌ಗೆ ಪ್ರಶಂಸೆಯ ಸುರಿಮಳೆಯೇ ಸುರಿಯಿತು. ದೀಪಕ್ ಚಹರ್ ಅದ್ಬುತ ಆಟದ ಕುರಿತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೇವಲ ದೀಪಕ್ ಚಹರ್ ಮಾತ್ರವಲ್ಲದೆ ಭಾರತ 'ಬಿ' ತಂಡವನ್ನೂ ಹೊಗಳಿದ ದಾನಿಶ್ ಕನೇರಿಯಾ ಭಾರತ ಬಿ ತಂಡ ಪಾಕಿಸ್ತಾನ ತಂಡವನ್ನೂ ಕೂಡ ಮಣಿಸಲಿದೆ ಎಂದರು.

ಅಷ್ಟೇ ಅಲ್ಲದೆ ದೀಪಕ್ ಚಹರ್ ನೀಡಿದ ಪ್ರದರ್ಶನ ಮತ್ತು ಆಸ್ಟ್ರೇಲಿಯಾ ನೆಲದಲ್ಲಿ ರವಿಚಂದ್ರನ್ ಅಶ್ವಿನ್ ನೀಡಿದ ಪ್ರದರ್ಶನದ ಕುರಿತು ಮಾತನಾಡಿದ ದಾನಿಶ್ ಕನೇರಿಯಾ ಈ ಇಬ್ಬರು ಆಟಗಾರರ ಅದ್ಬುತ ಪ್ರದರ್ಶನದ ಹಿಂದಿನ ಶಕ್ತಿ ಎಂಎಸ್ ಧೋನಿ ಎಂದು ಹೊಗಳಿದ್ದಾರೆ.

ಅಶ್ವಿನ್ ಮತ್ತು ದೀಪಕ್ ಚಹರ್ ಅತ್ಯದ್ಭುತ ಪ್ರದರ್ಶನ

ಅಶ್ವಿನ್ ಮತ್ತು ದೀಪಕ್ ಚಹರ್ ಅತ್ಯದ್ಭುತ ಪ್ರದರ್ಶನ

ಕಳೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ನಂತರ ಶ್ರೀಲಂಕಾ ವಿರುದ್ಧ ದೀಪಕ್ ಚಹರ್ ನೀಡಿದ ಅತ್ಯದ್ಭುತ ಪ್ರದರ್ಶನದಿಂದ ಟೀಮ್ ಇಂಡಿಯಾ ಗೆಲುವಿನ ಹಾದಿ ಹಿಡಿಯಿತು ಎಂದು ದಾನಿಶ್ ಕನೇರಿಯಾ ಕೊಂಡಾಡಿದ್ದಾರೆ.

ಇಬ್ಬರೂ ಸಹ ಧೋನಿ ನಾಯಕತ್ವದಲ್ಲಿ ಪಳಗಿದವರು, ಕೀರ್ತಿ ಧೋನಿಗೆ ಸಲ್ಲಬೇಕು

ಇಬ್ಬರೂ ಸಹ ಧೋನಿ ನಾಯಕತ್ವದಲ್ಲಿ ಪಳಗಿದವರು, ಕೀರ್ತಿ ಧೋನಿಗೆ ಸಲ್ಲಬೇಕು

ರವಿಚಂದ್ರನ್ ಅಶ್ವಿನ್ ಮತ್ತು ದೀಪಕ್ ಚಹರ್ ಇಬ್ಬರೂ ಸಹ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿರುವ ಅನುಭವವನ್ನು ಹೊಂದಿರುವಂತಹ ಆಟಗಾರರು. ಹೀಗಾಗಿ ಸೋಲುವ ಪಂದ್ಯಗಳನ್ನು ಗೆಲುವಿನ ಹಾದಿಗೆ ತರುವಂತ ಆಟ ಆಡುವುದನ್ನು ಧೋನಿ ನಾಯಕತ್ವದಲ್ಲಿ ಪಳಗಿರುವ ಈ ಇಬ್ಬರೂ ಚೆನ್ನಾಗಿ ಬಲ್ಲರು ಎಂದು ದಾನಿಶ್ ಕನೇರಿಯಾ ಈ ಇಬ್ಬರ ಅದ್ಭುತ ಆಟದ ಕೀರ್ತಿಯನ್ನು ಧೋನಿಗೆ ಸಲ್ಲಿಸಿದರು.

Suryakumar Yadav ಈ ಸರಣಿಯ ಶ್ರೇಷ್ಠ ಆಟಗಾರ | Oneindia Kannada
ಇನ್ನೂ ಹತ್ತು ವರ್ಷ ಧೋನಿ ಪರಂಪರೆ ಇರುತ್ತದೆ

ಇನ್ನೂ ಹತ್ತು ವರ್ಷ ಧೋನಿ ಪರಂಪರೆ ಇರುತ್ತದೆ

ಧೋನಿ ನಾಯಕತ್ವದ ವೇಳೆ ಮಿಂಚಿ ಸ್ಟಾರ್ ಆಟಗಾರರಾಗಿರುವ ಹಲವಾರು ಆಟಗಾರರಿದ್ದಾರೆ. ಸುರೇಶ್ ರೈನಾ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜರಂತಹ ಆಟಗಾರರು ಇನ್ನೂ ಹತ್ತು ವರ್ಷಗಳ ಕಾಲ ಧೋನಿ ಪರಂಪರೆಯನ್ನು ಮುಂದುವರಿಸಲಿದ್ದಾರೆ ಎಂದು ದಾನಿಶ್ ಕನೇರಿಯಾ ಹೇಳಿದರು.

Story first published: Friday, July 23, 2021, 16:20 [IST]
Other articles published on Jul 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X