ತ್ವರಿತಗತಿ ಟಿ20 ಶತಕ ದಾಖಲೆ ಮುರಿದ ಡೇವಿಡ್ ಮಿಲ್ಲರ್!

Posted By:

ಬೆಂಗಳೂರು, ಅಕ್ಟೋಬರ್ 29: ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಡೇವಿಡ್ ಮಿಲ್ಲರ್ ಅವರು ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಕೇವಲ 35 ಎಸೆತಗಳಲ್ಲಿ 100ರನ್ ಗಡಿ ದಾಟುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಬಾಂಗ್ಲಾದೇಶದ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಅವರು 36ಎಸೆತಗಳಲ್ಲಿ 101ರನ್ ಗಳಿಸಿ ಔಟಾಗದೆ ಉಳಿದರು.

David Miller Slams fastest ever T20i hundred

ತ್ವರಿತಗತಿ ಶತಕದಲ್ಲಿ 7 ಬೌಂಡರಿ ಹಾಗೂ 9 ಸಿಕ್ಸರ್ ಗಳಿತ್ತು. ಮಿಲ್ಲರ್ ಅವರು ಶತಕ ಹಾಗೂ ಹಶೀಂ ಆಮ್ಲಾ ಅವರು 85 ರನ್ (51 ಎಸೆತಗಳಲ್ಲಿ) ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ 20 ಓವರ್ ಗಳಲ್ಲಿ 224/4 ಸ್ಕೋರ್ ಮಾಡಿದೆ.

ಈ ಮುಂಚೆ ರಿಚರ್ಡ್ ಲೆವಿ ಅವರು ನ್ಯೂಜಿಲೆಂಡ್ ವಿರುದ್ಧ 2012ರಲ್ಲಿ 45 ಎಸೆತಗಳಲ್ಲಿ ಶತಕ ಗಳಿಸಿ ಹೊಸ ಟಿ20ಐ ದಾಖಲೆ ಬರೆದಿದ್ದರು.

Story first published: Sunday, October 29, 2017, 20:31 [IST]
Other articles published on Oct 29, 2017
Please Wait while comments are loading...