ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ವಿರುದ್ಧ ಆಸ್ಟ್ರೇಲಿಯಾ ಸರ್ಕಾರದ ಕಠಿಣ ನಿಲುವಿಗೆ ವಾರ್ನರ್, ಫಿಂಚ್ ಪ್ರಶ್ನೆ

David Warner, Aaron Finch Question Australian Governments Coronavirus Measures

ಕೊರೊನಾ ಆಸ್ಟ್ರೇಲಿಯಾದಲ್ಲೂ ಸಾಕಷ್ಟು ಭೀತಿಯನ್ನು ಸೃಷ್ಟಿಸಿದೆ. ಆಸ್ಟ್ರೇಲಿಯಾದಲ್ಲಿ ಈವರೆಗೆ 250ಕ್ಕೂ ಅಧಿಕ ಮಂದಿ ಕೊರೊನಾಗೆ ತುತ್ತಾಗಿದ್ದಾರೆ. ಇನ್ನು ಕೊರೊನಾದಿಂದಾಗಿ ಆಸ್ಟ್ರೇಲಿಯಾದಲ್ಲಿ ಈವರೆಗೆ ಮೂರು ಮಂದಿ ಮೃತಪಟ್ಟಿದ್ದಾರೆ. ಕೊರೊನಾ ಪೀಡಿತರ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರ್ಕಾರ ವಿದೇಶದಿಂದ ಆಗಮಿಸುವ ಪ್ರತಿಯೊಬ್ಬರ ಮೇಲೂ ವಿಶೇಷ ನಿಗಾ ವಹಿಸುವುದರ ಜೊತೆಗೆ ಕೆಲ ಕಠಿಣ ಕ್ರಮಗಳನ್ನು ಕೈಗೊಳ್ಳುವ ನಿರ್ಧಾರಕ್ಕೆ ಬಂದಿದೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಆರೋನ್ ಫಿಂಚ್ ಮತ್ತು ಸ್ಫೋಟಕ ಆಟಗಾರ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಸರ್ಕಾರ ಕೊರೊನಾ ವಿರುದ್ಧ ಕ್ರಮಕೈಗೊಳ್ಳುವ ಹಿನ್ನೆಲೆಯಲ್ಲಿ ತೆಗೆದುಕೊಂಡ ಕಠಿಣ ಕ್ರಮಗಳ ಬಗ್ಗೆ ಪ್ರಶ್ನಿಸಿದ್ದಾರೆ.

ಐಪಿಎಲ್ ರದ್ದಾದರೆ ಬಿಸಿಸಿಐಗಾಗುವ ನಷ್ಟ ಎಷ್ಟು ಸಾವಿರ ಕೋಟಿ ಗೊತ್ತಾ!?ಐಪಿಎಲ್ ರದ್ದಾದರೆ ಬಿಸಿಸಿಐಗಾಗುವ ನಷ್ಟ ಎಷ್ಟು ಸಾವಿರ ಕೋಟಿ ಗೊತ್ತಾ!?

ಆಸ್ಟ್ರೇಲಿಯಾ ಸರ್ಕಾರ ಭಾನುವಾರ ಮಧ್ಯರಾತ್ರಿಯ ಬಳಿಕ ಆಗಮಿಸುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು 14 ದಿನಗಳ 'ಸ್ವಯಂ ಪ್ರತ್ಯೇಕ'ಗೊಂಡಿರುವಂತೆ (self isolation) ಸೂಚನೆಯನ್ನು ಹೊರಡಿಸಿದೆ. ಈ ಬಗ್ಗೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ. ಆಸ್ಟ್ರೇಲಿಯಾ ಸರ್ಕಾರದ ಈ ಕ್ರಮವನ್ನು ಡೆವಿಡ್ ವಾರ್ನರ್ ಮತ್ತು ಆರೋನ್ ಫಿಂಚ್ ಪ್ರಶ್ನಿಸಿದ್ದಾರೆ.

ಆಸ್ಟ್ರೇಲಿಯಾದ ಪತ್ರಕರ್ತರೊಬ್ಬರು ಟ್ವಿಟ್ಟರ್‌ನಲ್ಲಿ ಮೊದಲಿಗೆ ಈ ಬಗ್ಗೆ ಬರೆದುಕೊಂಡಿದ್ದರು. 'ಹೊಸದಾಗಿ ವಿದೇಶದಿಂದ ಬಂದಿರುವ ಪ್ರಯಾಣಿಕರು ಸೆಲ್ಫ್ ಐಸೋಲೇಟಿಂಗ್‌ಗೆ ಒಳಗಾಗಿದ್ದಾರೆ ಎಂದು ಸರ್ಕಾರಕ್ಕೆ ಹೇಗೆ ತಿಳಿಯುತ್ತದೆ' ಎಂದಿದಿದ್ದಾರೆ. ಅದಕ್ಕೆ ಡೇವಿಡ್ ವಾರ್ನರ್ 'ಏರ್ಪೋರ್ಟ್‌ನಿಂದ ಅವರ ಸ್ಥಳಕ್ಕೆ ಕರೆತರುವ ಬಸ್, ಟ್ರೈನ್, ಕ್ಯಾಬ್‌ಗಳ ಕಥೆಯೇನು? ಎಂದು ಪ್ರಶ್ನಿಸಿದ್ದಾರೆ. ಇನ್ನು ಪತ್ರಕರ್ತನ ಟ್ವಿಟ್‌ಅನ್ನು ರಿಟ್ವೀಟ್ ಮಾಡಿರುವ ಫಿಂಚ್ 'ನನಗೂ ಅದೇ ಆಶ್ಚರ್ಯವೆನಿಸುತ್ತಿದೆ' ಎಂದು ಬರೆದುಕೊಂಡಿದ್ದಾರೆ.

ಕೊರೊನಾವೈರಸ್: ವಿರಾಟ್ ಕೊಹ್ಲಿ, ರಾಹುಲ್, ಮಯಾಂಕ್ ವಿಶೇಷ ಸಂದೇಶಕೊರೊನಾವೈರಸ್: ವಿರಾಟ್ ಕೊಹ್ಲಿ, ರಾಹುಲ್, ಮಯಾಂಕ್ ವಿಶೇಷ ಸಂದೇಶ

ಇನ್ನು ಆಸ್ಟ್ರೇಲಿಯಾ ಸರ್ಕಾರ ಮುಂದಿನ 30 ದಿನಗಳ ವರೆಗೆ ವಿದೇಶಗಳಿಂದ ಬರುವ ಪ್ರವಾಸಿಗರ ಹಡುಗಳನ್ನು ಕೂಡ 30 ದಿನಗಳವರೆಗೆ ನಿಷೇಧಿಸಿ ಆದೇಶವನ್ನು ಹೊರಡಿಸಿದೆ.

Story first published: Sunday, March 15, 2020, 22:25 [IST]
Other articles published on Mar 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X