ಐಪಿಎಲ್: ಸನ್ ರೈಸರ್ಸ್ ಹೈದರಾಬಾದ್‌ಗೆ ಮತ್ತೆ ಡೇವಿಡ್ ವಾರ್ನರ್ ನಾಯಕ

ಹೈದರಾಬಾದ್, ಫೆಬ್ರವರಿ 27: ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ನಾಯಕನಾಗಿ ಡೇವಿಡ್ ವಾರ್ನರ್ ಮತ್ತೆ ಆಯ್ಕೆಯಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎರಡು ಸೀಸನ್‌ಗಳಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವ ವಹಿಸಿಕೊಂಡಿದ್ದರು. ಆದರೆ 2020ರ ಸೀಸನ್‌ಗೆ ಎಸ್‌ಆರ್‌ಎಚ್ ನಾಯಕತ್ವದ ಜವಾಬ್ದಾರಿ ವಾರ್ನರ್ ವಹಿಸಿಕೊಳ್ಳಲಿದ್ದಾರೆ.
ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್, ಸನ್ ರೈಸರ್ಸ್ ಹೈದರಾಬಾದ್ ಮತ್ತೆ ಮುನ್ನಡೆಸುವ ಅವಕಾಶ ಲಭಿಸಿದ್ದು ತನ್ನನ್ನು ರೋಮಾಂಚನಗೊಳಿಸಿದೆ ಎಂದಿದ್ದಾರೆ. ಎಸ್‌ಆರ್‌ಎಚ್ ನಾಯಕತ್ವ ಕೇನ್ ವಿಲಿಯಮ್ಸನ್‌ನಿಂದ ಡೇವಿಡ್ ವಾರ್ನರ್‌ಗೆ ಬದಲಾಗಿರುವುದನ್ನು ಹೈದರಾಬಾದ್ ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಾರ್ನರ್, ಮುಂಬರುವ 2020ರ ಐಪಿಎಲ್‌ಗೆ ಎಸ್‌ಆರ್‌ಎಚ್ ನಾಯಕತ್ವವನ್ನು ನೀಡಿರುವುದಕ್ಕೆ ನಾನು ರೋಮಾಂಚನಗೊಂಡಿದ್ದೇನೆ. ತಂಡವನ್ನು ಮುನ್ನಡೆಸುವ ಅವಕಾಶಕ್ಕಾಗಿ ಮತ್ತೊಮ್ಮೆ ಎಸ್‌ಆರ್‌ಎಚ್‌ಗೆ ಕೃತಜ್ಞನೆ ಸಲ್ಲಿಸುತ್ತಿದ್ದೇನೆ,' ಎಂದಿದ್ದಾರೆ.
2018ರಲ್ಲಿ ತನ್ನ ಅನುಪಸ್ಥಿತಿಯಲ್ಲಿ ಹೈದರಾಬಾದ್ ತಂಡ ಮುನ್ನಡೆಸಿದ್ದ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಮತ್ತು ಭಾರತದ ವೇಗಿ ಭುವನೇಶ್ವರ್ ಕುಮಾರ್‌ಗೂ ವಾರ್ನರ್ ಧನ್ಯವಾದ ಸಲ್ಲಿಸಿದ್ದಾರೆ. ಚೆಂಡು ವಿರೂಪ ಪ್ರಕರಣದಲ್ಲಿ ಡೇವಿಡ್ ನಿಷೇಧಕ್ಕೀಡಾಗಿದ್ದರಿಂದ 2018ರ ಸೀಸನ್‌ನಲ್ಲಿ ಆಡಿರಲಿಲ್ಲ.
ಮಾರ್ಚ್ 29ರಿಂದ ಮೇ 24ರ ವರೆಗೆ ಆಕರ್ಷಣೀಯ ಐಪಿಎಲ್ ಟೂರ್ನಿ ನಡೆಯಲಿದೆ. ಉದ್ಘಾಟನಾ ಪಂದ್ಯ ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಅಂದು ಕಾದಾಡಲಿವೆ. ಏಪ್ರಿಲ್ 1ರಂದು ಮೊದಲ ಪಂದ್ಯವಾಗಿ ಎಸ್‌ಆರ್‌ಎಚ್, ಮುಂಬೈ ಇಂಡಿಯನ್ಸ್ ಸವಾಲು ಸ್ವೀಕರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications