
ಆಸ್ಟ್ರೇಲಿಯಾ ತಂಡಕ್ಕೆ ಬಿಡುವಿಲ್ಲದ ವರ್ಷ
ಡೇವಿಡ್ ವಾರ್ನರ್ ಕ್ಯಾಮರೂನ್ ಗ್ರೀನ್‌ಗೆ ವಾರ್ನಿಂಗ್ ನೀಡಲು ಕಾರಣ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಬಿಡುವಿಲ್ಲದ ಕ್ರಿಕೆಟ್ ಸರಣಿಗಳು. ಭಾರತ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಬಳಿಕ ಐಪಿಎಲ್ ಟೂರ್ನಿ ಆತಂಬವಾಗಲಿದ್ದು ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫಯನಲ್ ಪಂದ್ಯ ನಡೆಯಲಿದೆ. ಜೊತೆಗೆ ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ ಆಶಸ್ ಸರಣಿಯಲ್ಲಿ ಭಾಗಿಯಾಗಲಿದ್ದು ಜೂನ್‌ನಲ್ಲಿ ಆಶಸ್ ಸರಣಿ ನಡೆಯಲಿದೆ. ಬಳಿಕ ಭಾರತದಲ್ಲಿ ಏಕದಿನ ವಿಶ್ವಕಪ್ ಆಯೋಜನೆಯಾಗಲಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ಮುನ್ನ ವಾರ್ನರ್ ಮಾತು
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ವಾರ್ನರ್ ಮಾತನಾಡಿದ್ದು ಐಪಿಎಲ್ ಟೂರ್ನಿ ಆಟಗಾರರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಸಾಕಷ್ಟು ಒತ್ತಡವನ್ನುಂಡು ಮಾಡಲಿದೆ ಎಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಅನುಭವ ಉಪಯುಕ್ತವಾಗಿರುತ್ತದೆ ಎಂದು ವಾರ್ನರ್ ಹೇಳಿದ್ದರೂ ಮುಂಬರುವ ಒತ್ತಡದ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ವಾರ್ನರ್ ಹೇಳಿದ್ದಾರೆ. ಈ ಮೂಲಕ ಗ್ರೀನ್‌ಗೆ ವಾರ್ನಿಂಗ್ ನೀಡಿದ್ದಾರೆ. ತಮ್ಮ ವೈಯಕ್ತಿಕ ಅನುಭವವನ್ನು ಹೇಳಿಕೊಂಡಿರುವ ವಾರ್ನರ್ ಗ್ರೀನ್‌ಗೆ ಈ ಬಗ್ಗೆ ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ.

ಆತನಿಗೆ ಬಿಟ್ಟ ನಿರ್ಧಾರ
ಈ ಸಂದರ್ಭದಲ್ಲಿ ತಾನು ಹಾಗೂ ಸಹ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅನುಭವವನ್ನು ವಾರ್ನರ್ ಹೇಳಿಕೊಂಡಿದ್ದಾರೆ. ಆದರೆ ಐಪಿಎಲ್‌ನಲ್ಲಿ ಆಡುವ ಅಂತಿಮ ನಿರ್ಧಾರ ಕ್ಯಾಮರೂನ್ ಗ್ರೀನ್ ಅವರಿಗೆ ಬಿಟ್ಟಿದ್ದು ಎಂದಿದ್ದಾರೆ. "ಯುವ ಆಟಗಾರನ ದೃಷ್ಟಿಕೋನದಲ್ಲಿ ಹೇಳುವುದಾದರೆ ಅದು ಅವರಿಗೆ ಬಿಟ್ಟಿರುವ ವಿಚಾರ. ಸುದೀರ್ಘ ಕಾಲದ ವೃತ್ತಿ ಜೀವನವನ್ನು ಗಮನದಲ್ಲಿಟ್ಟುಕೊಂಡು ಅವರು ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಬೇಕಿದ್ದು ದೊಡ್ಡ ನಿರ್ಧಾರವಾಗಲಿದೆ. ಆಟಗಾರನಾಗಿ ಆತ ತೆಗೆದುಕೊಳ್ಳುವ ನಿರ್ಧಾರವನ್ನು ಸಾಗತಿಸುತ್ತೇವೆ. ಆದರೆ ಅಂತಿಮವಾಗಿ ಇದು ವೈಯಕ್ತಿಕವಾಗಿ ಅವರಿಗೆ ಹಾಗೂ ಆಸ್ಟ್ರೇಲಿಯಾ ತಂಡಕ್ಕೆ ಹಿನ್ನಡೆಯುಂಟು ಮಾಡುತ್ತದೆ" ಎಂದು ಎಚ್ಚರಿಸಿದ್ದಾರೆ ಡೇವಿಡ್ ವಾರ್ನರ್.

ಐಪಿಎಲ್‌ನಲ್ಲಿ ಆಡುವುದನ್ನು ಖಚಿತಪಡಿಸಿರುವ ಗ್ರೀನ್
ಇನ್ನು ಆಸ್ಟ್ರೇಲಿಯಾದ ಯುವ ಸೆನ್ಸೇಶನಲ್ ಆಟಗಾರ ಕ್ಯಾಮರೂನ್ ಗ್ರೀನ್ ಇತ್ತೀಚೆಗಷ್ಟೇ ತಾನು ಐಪಿಎಲ್ 2023ರ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುವುದಾಗಿ ಹೇಳಿದ್ದಾರೆ. ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಆಸಿಸ್ ಪ್ರವಾಸ ಕೈಗೊಂಡು ಟಿ20 ಸರಣಿಯಲ್ಲಿ ಭಾಗಿಯಾಗಿದ್ದಾಗ ಕ್ಯಾಮರೂನ್ ಗ್ರೀನ್ ನೀಡಿದ ಪ್ರದರ್ಶನ ಎಲ್ಲರ ಗಮನಸೆಳೆದಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಮಾನವಾಗಿ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿರುವ ಈ ಯುವ ಆಟಗಾರನ ಮೇಲೆ ಸಹಜವಾಗಿಯೇ ಸಾಕಷ್ಟು ಫ್ರಾಂಚೈಸಿಗಳು ಕಣ್ಣಿಟ್ಟಿದೆ. ಹೀಗಾಗಿ ದೊಡ್ಡ ಮೊತ್ತಕ್ಕೆ ನಿಕರಿಯಾಗುವ ನಿರೀಕ್ಷೆಯಲ್ಲಿದ್ದಾರೆ ಆಸ್ಟ್ರೇಲಿಯಾದ ಯುವ ಕ್ರಿಕೆಟಿಗ.