ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಾಟ್ಸನ್, ಧೋನಿ ಆಕರ್ಷಕ ಆಟ: ಡೆಲ್ಲಿಯೆದುರು ಚೆನ್ನೈ 13 ರನ್ ಜಯ

Delhi vs Chennai 2018 Match 30: Watson, Dhoni muscle CSK to the top

ಪುಣೆ, ಮೇ 1: ವಿಕೆಟ್ ಉಳಿಸಿಕೊಳ್ಳುವಲ್ಲಿ ಎಡವಿದ ಡೆಲ್ಲಿ ತಂಡ ಚೆನ್ನೈ ಎದುರು 13 ರನ್ ಗಳಿಂದ ತಲೆಬಾಗಿತು. ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 212 ರನ್ ಗುರಿಯನ್ನು ತಲುಪಲಾಗದೆ ಡೆಲ್ಲಿ ಡೇರ್ ಡೆವಿಲ್ಸ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 198 ರನ್ ಪೇರಿಸಲಷ್ಟೇ ಶಕ್ತವಾಯಿತು.

ಸೋಮವಾರ ಪಂದ್ಯಾಂತ್ಯಕ್ಕೆ ಚೆನ್ನೈ ಎಂಟರಲ್ಲಿ ಆರು ಪಂದ್ಯಗಳನ್ನು ಗೆದ್ದು ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ಚೆನ್ನೈvs ಡೆಲ್ಲಿ ಸ್ಕೋರ್ ಕಾರ್ಡ್

ಟಾಸ್ ಸೋತು ಮೊದಲು ಬ್ಯಾಟಿಂಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್, ಶೇನ್ ವಾಟ್ಸನ್ 78 (40), ಡು ಪ್ಲೆಸಿಸ್ 33 (33), ಅಂಬಾಟಿ ರಾಯುಡು 41 (24) ಮತ್ತು ಎಂ.ಎಸ್. ಧೋನಿ 51 (22) ರನ್ ನೆರವಿನಿಂದ 20 ಓವರ್ ಗಳಿಗೆ ನಾಲ್ಕು ವಿಕೆಟ್ ಕಳೆದು ಕೊಂಡು 211 ರನ್ ಪೇರಿಸಿ ಡೆಲ್ಲಿ ತಂಡಕ್ಕೆ 212 ರನ್ ಗಳ ಗುರಿ ನೀಡಿತ್ತು.

ಅನುಭವಿ ಆಟಗಾರರು ಹೆಚ್ಚಾಗಿರುವ ತಂಡವೆಂಬಂತೆ ಚೆನ್ನೈ ತಂಡ ಆರಂಭದಿಂದಲೇ ರನ್ ಕದಿಯುತ್ತಾ ಸಾಗಿ ಎದುರಾಳಿಗೆ ಗರಿಷ್ಠ ಗುರಿ ನೀಡುವಲ್ಲಿ ಯಶಸ್ವಿಯಾಯಿತು.

ಇದರಲ್ಲಿ ಶೇನ್ ವಾಟ್ಸನ್, ರಾಯುಡು ಮತ್ತು ಧೋನಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಯುವ ತಂಡ ಡೆಲ್ಲಿಯನ್ನು ಕಾಡಿದರು. 10.5ನೇ ಓವರಿಗೆ ಚೆನ್ನೈ ಮೊದಲ ವಿಕೆಟಾಗಿ ಪ್ಲೆಸಿಸ್ ಅವರನ್ನು ಕಳೆದುಕೊಂಡಿತಾದರೂ ಆ ಹೊತ್ತಿಗೆ 102 ರನ್ ಕಲೆ ಹಾಕಿದ್ದು ಸಿಎಸ್ಕೆಗೆ ಪ್ಲಸ್ಸಾಗಿ ಪರಿಣಮಿಸಿತು.

ಚೆನ್ನೈ ತಂಡದಿಂದ ಸುರೇಶ್ ರೈನ ಅವರೇ ಹೆಚ್ಚು ಹೊತ್ತು ನಿಲ್ಲಲಿಲ್ಲ. 2 ಸೆತಗಳನ್ನು ಎದುರಿಸಿದ ರೈನಾ ಬರೀ ಒಂದು ರನ್ನಿಗೆ ಪೆವಿಲಿಯನ್ ಕಡೆ ಮುಖ ಮಾಡಿದರು. ಆದರೆ ನಂತರ ಬ್ಯಾಟಿಂಗ್ ಗಿಳಿದ ರಾಯುಡು ತಂಡಕ್ಕೆ ತಕ್ಕ ಮಟ್ಟಿನ ಕೊಡುಗೆ ನೀಡಿದರು. ಇದರಲ್ಲಿ ವಾಟ್ಸನ್ 13.5ನೇ ಓವರ್ ವರೆಗೂ ನಿಂತು ಚೆನ್ನೈ ವಿಕೆಟ್ ಕಾವಲಾದರು.

ಡೆಲ್ಲಿ ತಂಡದಿಂದ ಅಮಿತ್ ಮಿಶ್ರಾ, ವಿ. ಶಂಕರ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ಗೆ ತಲಾ ಒಂದೊಂದು ವಿಕೆಟ್ ಲಭಿಸಿತು. ಇದರಲ್ಲಿ ರಾಯುಡು ಟ್ರೆಂಟ್ ಬೌಲ್ಟ್ ಬೌಲಿಂಗ್ ವೇಳೆ ರನೌಟ್ ಆಗಿ ನಿರ್ಗಮಿಸಿದರು. ಧೋನಿ ಮತ್ತು ಜಡೇಜಾ ಅಜೇಯರಾಗಿ ಉಳಿದರು.

ಚೇಸಿಂಗ್ ಗಿಳಿದ ಡೆಲ್ಲಿ ಬಹುಬೇಗನೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು. ಕೆ.ಎಂ ಆಸಿಫ್ ಬೌಲಿಂಗ್ ವೇಳೆ 2ನೇ ಓವರ್ ನಲ್ಲೇ ಪೃಥ್ವಿ ಶಾ 9 ರನ್ ಗೆ ನಿರ್ಗಮಿಸಿದರು. 8.5 ಓವರ್ ಗೆ ತಂಡದ ಮೊತ್ತ 74 ಆಗುವಾಗ ಡೆಲ್ಲಿ 4 ವಿಕೆಟ್ ಗಳನ್ನು ಕಳೆದುಕೊಂಡಿತ್ತು.

ಡೆಲ್ಲಿ ಪರ ರನ್ ಕೊಡುಗೆ ನೀಡಿದವರೆಂದರೆ ಕಾಲಿನ್ ಮುನ್ರೋ 26, ರಿಶಬ್ ಪಂತ್ 79 ಮತ್ತು ವಿ. ಶಂಕರ್ 53. ಬೌಲಿಂಗ್ ದಾಳಿ ನಡೆಸಿದ ಚೆನ್ನೈ ಪರ ಆಸಿಫ್ 2 ವಿಕೆಟ್ ಪಡೆದರೆ, ಜಡೇಜಾ ಮತ್ತು ಎನ್ ಗಿಡಿ ತಲಾ ಒಂದೊಂದು ವಿಕೆಟ್ ಉರುಳಿಸಿದರು. ಡೆಲ್ಲಿ ನಾಯಕ ಶ್ರೇಯಸ್ ಐಯರ್ ಅವರು ವಾಟ್ಸನ್ ಓವರ್ ವೇಳೆ ರನೌಟಾಗಿದ್ದು ತಂಡಕ್ಕೆ ದೊಡ್ಡ ನಷ್ಟವೆನಿಸಿತು.

Story first published: Tuesday, May 8, 2018, 15:53 [IST]
Other articles published on May 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X