ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL: ಸೋಲಿನಲ್ಲೂ ಧೋನಿ ಮುಡಿಗೆ ಮತ್ತೊಂದು ದಾಖಲೆ!

IPL 2019 : ಫೈನಲ್ ಪಂದ್ಯದಲ್ಲಿ ಧೋನಿ ದಾಖಲೆ..? | Oneindia kannada
Dhoni Becomes Most Successful Wicket-Keeper In IPL History

ಹೈದರಾಬಾದ್‌, ಮೇ 12: ವಿಕೆಟ್‌ ಹಿಂಬದಿಯಲ್ಲಿ ಮಿಂಚಿನ ಕೈಚಳಕ ಪ್ರದರ್ಶಿಸುವ ವಿಕೆಟ್‌ಕೀಪರ್‌ ಎಂಎಸ್‌ ಧೋನಿ ಅವರ ದಾಖಲೆಗಳ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ವಿಕೆಟ್ ಹಿಂಬದಿ ನಿಂತಿ ಅತಿ ಹೆಚ್ಚು ಡಿಸ್ಮಿಸಲ್‌ಗಳನ್ನು ಮಾಡಿದ ದಾಖಲೆ ಇದೀಗ ಧೋನಿ ಅವರದ್ದಾಗಿದೆ. ಭಾನುವಾರ ನಡೆದ ಮುಂಬೈ ಇಂಡಿಯನ್ಸ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಧೋನಿ ಈ ದಾಖಲೆ ಬರೆದಿದ್ದಾರೆ. ಕ್ವಿಂಟನ್‌ ಡಿ'ಕಾಕ್‌ (29) ಮತ್ತು ರೋಹಿತ್‌ ಶರ್ಮಾ (15) ಅವರ ಕ್ಯಾಚ್‌ ಪಡೆಯುವ ಮೂಲಕ ಧೋನಿ ಈ ದಾಖಲೆ ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ಕೋಲ್ಕೊತಾ ನೈಟ್‌ ರೈಡರ್ಸ್‌ನ ನಾಯಕ ದಿನೇಶ್‌ ಕಾರ್ತಿಕ್‌ (131) ಈ ದಾಖಲೆ ಹೊಂದಿದ್ದರು. ಈ ಪಟ್ಟಿಯಲ್ಲಿ ಕನ್ನಡಿಗ ರಾಬಿನ್‌ ಉತ್ತಪ್ಪ (90) ಮೂರನೇ ಸ್ಥಾನದಲ್ಲಿ ಇರುವುದು ವಿಶೇಷ.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮುಂಬೈ ಇಂಡಿಯನ್ಸ್‌ ತಂಡ ತನ್ನ ಪಾಲಿನ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 149 ರನ್‌ಗಳ ಸಾಧಾರಣ ಮೊತ್ತವನ್ನಷ್ಟೇ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಚೆನ್ನೈ ಸೂಪರ್‌ ಕಿಂಗ್ಸ್, ಶೇನ್‌ ವ್ಯಾಟ್ಸನ್‌ (59 ಎಸೆತಗಳಲ್ಲಿ 80 ರನ್‌) ಅವರ ಸ್ಫೋಕ ಬ್ಯಾಟಿಂಗ್‌ ನೆರವಿನಿಂದ ಸುಲಭವಾಗಿ ಗುರಿ ಮುಟ್ಟುವ ಸೂಚನೆ ನೀಡಿತ್ತಾದರೂ, ಅಂತಿಮ ಓವರ್‌ನಲ್ಲಿ 6 ಎಸೆತಗಳಲ್ಲಿ 9 ರನ್‌ಗಳಿಸಲಾಗದೆ 1 ರನ್‌ ಅಂತರದಲ್ಲಿ ಸೋಲುಂಡಿತು.

 IPL: ಧೋನಿ ಸಾಧನೆ ಬಗ್ಗೆ ಹಾಡಿ ಹೊಗಳಿದ ಮ್ಯಾಥ್ಯೂ ಹೇಡನ್‌ IPL: ಧೋನಿ ಸಾಧನೆ ಬಗ್ಗೆ ಹಾಡಿ ಹೊಗಳಿದ ಮ್ಯಾಥ್ಯೂ ಹೇಡನ್‌

ಇದರೊಂದಿಗೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿ ನಾಲ್ಕು ಬಾರಿ ಪ್ರಶಸ್ತಿ ಗೆದ್ದ ಮೊದಲ ತಂಡ ಎಂಬ ಹಿರಿಮೆಗೆ ಮುಂಬೈ ಇಂಡಿಯನ್ಸ್‌ ಪಾತ್ರವಾದರೆ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಅತಿ ಹೆಚ್ಚು ಬಾರಿ ಫೈನಲ್‌ ಪಂದ್ಯಗಳನ್ನು ಆಡಿದ ತಂಡವಾಗಿ ಹೊರಹೊಮ್ಮಿತು.

 ಐಪಿಎಲ್: ಹಾಲಿ ಚಾಂಪಿಯನ್ ಸಿಎಸ್‌ಕೆಗೆ ಸೋಲು, ಎಂಐ ಚಾಂಪಿಯನ್! ಐಪಿಎಲ್: ಹಾಲಿ ಚಾಂಪಿಯನ್ ಸಿಎಸ್‌ಕೆಗೆ ಸೋಲು, ಎಂಐ ಚಾಂಪಿಯನ್!

ತಾಹಿರ್‌ಗೆ ಪರ್ಪಲ್‌ ಕ್ಯಾಪ್‌
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಲೆಗ್‌ ಸ್ಪಿನ್ನರ್‌ ಇಮ್ರಾನ್‌ ತಾಹಿರ್‌, ಐಪಿಎಲ್‌ 2019ರ ಪರ್ಪಲ್‌ ಕ್ಯಾಪ್‌ ವಿನ್ನರ್‌ ಎನಿಸಿಕೊಂಡರು. ಒಟ್ಟು 26 ವಿಕೆಟ್‌ಗಳನ್ನು ಪಡೆದ ದಕ್ಷಿಣ ಆಫ್ರಿಕಾದ ಸ್ಪಿನ್ನರ್‌ ತಾಹಿರ್‌ ತಮ್ಮದೇ ದೇಶದವಾರದ ಕಗಿಸೊ ರಬಾಡ (25) ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದರು. ಇನ್ನು 40ನೇ ವಯಸ್ಸಿನಲ್ಲಿ ಐಪಿಎಲ್‌ ಫೈನಲ್‌ ಪಂದ್ಯವನ್ನಾಡಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಇಮ್ರಾನ್‌ ಪಾತ್ರರಾದರು.

Story first published: Sunday, May 12, 2019, 23:59 [IST]
Other articles published on May 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X