ನ್ಯೂಜಿಲೆಂಡ್ ಆಟಗಾರರೊಂದಿಗೆ ಧೋನಿ 'ಲೆಗ್ ವಾಲಿಬಾಲ್'

Posted By:

ತಿರುವನಂತಪುರ, ನವೆಂಬರ್ 09 : ಧೋನಿಯ ಫುಟ್ ಬಾಲ್ ಪ್ರೀತಿ ಅವರ ಅಭಿಮಾನಿಗಳೆಲ್ಲರಿಗೂ ಗೊತ್ತಿರುವುದೇ. ಕ್ರಿಕೆಟ್ ಮೈದಾನ ಬಿಟ್ಟರೆ ಧೋನಿ ಹೆಚ್ಚು ಕಾಲ ಕಳೆದಿರುವುದು ಫುಟ್ ಬಾಲ್ ಮೈದಾನದಲ್ಲೆ.

ಕಿವೀಸ್ ವಿರುದ್ಧ 3ನೇ ಟಿ20 ಹಾಗೂ ಸರಣಿ ಗೆದ್ದ ಭಾರತ

ಆದರೆ ಫುಟ್ ಬಾಲ್ ಮತ್ತು ವಾಲಿಬಾಲ್ ಎರಡೂ ಕೌಶಲ್ಯಗಳು ಬೆರೆತ ಲೆಗ್ ವಾಲಿಬಾಲ್ ಆಡಿ ಭೇಷ್ ಎನಿಸಿಕೊಂಡಿದ್ದಾರೆ ಮಹೇಂದ್ರ ಸಿಂಗ್ ಧೋನಿ. ಅದೂ ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರರೊಂದಿಗೆ.

Dhoni plays Leg Volleyball with New zealand players

ಈ ಮುಂಚೆ ಭಾರತದ ಆಟಗಾರರಿಗೆ ಮಾತ್ರ ಅರಿವಿದದ್ದ ಧೋನಿ ಅವರ ಫುಟ್ ಬಾಲ್ ಆಟದ ಪ್ರವೀಣ್ಯತೆ ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರರಿಗೂ ತಿಳಿಯುವಂತಾಯ್ತು. ಆದರೆ ಇಂಡೋರ್ ನಲ್ಲಿ!

ಹೌದು, ತಿರುವನಂತಪುರದಲ್ಲಿ ಮೂರನೇ ಟಿ20 ಕ್ರಿಕೆಟ್ ಪಂದ್ಯಕ್ಕಾಗಿ ನವೆಂಬರ್ 7 ರ ಮಂಗಳವಾರ ಸೇರಿದ್ದ ಎರಡೂ ತಂಡಗಳ ಆಟಗಾರರು, ಮಳೆಯಿಂದಾಗಿ ಆಟ ತಡವಾದ ಕಾರಣ ಹೊಸ ರೀತಿಯ ಲೆಗ್ ಫುಟ್ ಬಾಲ್ ಆಟ ಆಡಿ ಸಮಯ ಕಳೆದಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಬಗ್ಗೆ ಮೈಕಲ್ ಕ್ಲಾರ್ಕ್ ಹೇಳಿದ್ದೇನು?

ವಾಲಿಬಾಲ್ ನ ನೆಟ್ ನ ಬದಲಿಗೆ ಚೇರ್ ಗಳನ್ನು ನೆಟ್ ನಂತೆ ಬಳಸಿ ಕೈ ಬದಲಿಗೆ ಕಾಲಿನಲ್ಲಿ ವಾಲಿಬಾಲ್ ಆಡಿದ್ದಾರೆ. ಧೊನಿ ಮತ್ತು ಕರ್ನಾಟಕದ ಮನೀಷ್ ಪಾಂಡೆ ಒಂದು ತಂಡವಾದರೆ ನ್ಯೂಜಿಲೆಂಡ್ ನ ಟಿಮ್ ಸೌಥಿ ಮತ್ತು ಟಾಮ್ ಬ್ರೂಸ್ ಅವರು ಎದುರಾಳಿ ತಂಡ.

ಧೋನಿ ಮತ್ತು ನ್ಯೂಜಿಲೆಂಡ್ ಆಟಗಾರರು ಲೆಗ್ ವಾಲಿಬಾಲ್ ಆಡುತ್ತಿರುವ ವಿಡಿಯೋವನ್ನು ನ್ಯೂಜಿಲೆಂಡ್ ನ ನ್ಯೂಜಿಲೆಂಡ್ ಆಟಗಾರ ಮಾರ್ಟಿನ್ ಗುಪ್ಟಿಲ್ ನವೆಂಬರ್ 8 ರ ತಡರಾತ್ರಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ. ವಿಡಿಯೊ ಅಪ್ ಲೋಡ್ ಆದ ಕೆಲವೇ ನಿಮಿಷಗಳಲ್ಲಿ ಕಮೆಂಟು, ಲೈಕುಗಳ ಸುನಾಮಿ ವಿಡಿಯೋವನ್ನು ಅಪ್ಪಳಿಸಿದೆ.

ತಡವಾಗಿ ಆರಂಭವಾದ ಈ ಪಂದ್ಯವನ್ನು ಭಾರತ ಗೆದ್ದು ಸರಣಿ ವಶ ಮಾಡಿಕೊಂಡಿದೆ.

Story first published: Thursday, November 9, 2017, 13:41 [IST]
Other articles published on Nov 9, 2017
Please Wait while comments are loading...