ಬೆಂಗಳೂರು, ಅಕ್ಟೋಬರ್ 29: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯ ನಿವೃತ್ತಿ ಬಗ್ಗೆ ಗಾಳಿ ಸುದ್ದಿ ಇನ್ನೊಮ್ಮೆ ಹಬ್ಬಿದೆ. ಜಾರ್ಖಂಡ್ ನಲ್ಲಿ ಕಿರಿಯರ್ ತಂಡಕ್ಕೆ ತರಬೇತಿ ನೀಡಲು ಧೋನಿ ಮುಂದಾಗಿರುವುದರಿಂದ ನಿವೃತ್ತಿ ಬಗ್ಗೆ ಮತ್ತೆ ಸುದ್ದಿ ಹಬ್ಬಿಸಲಾಗಿದೆ.
ಈ ಹಿಂದೆ ಭಾರತದ ನಾಯಕ ವಿರಾಟ್ ಕೊಹ್ಲಿ ಹಳೆ ಪಂದ್ಯವೊಂದ ಫೋಟೋವನ್ನು ಟ್ವಿಟ್ಟರಲ್ಲಿ ಹಾಕಿಕೊಂಡಿದ್ದರು. ಇದು ಧೋನಿ ನಿವೃತ್ತಿ ಸುಳಿವಿನ ಗಾಳಿ ಸುದ್ದಿಗೆ ಕಾರಣವಾಗಿತ್ತು. ಆದರೆ ಅದು 2016ರ ವರ್ಲ್ಡ್ ಟಿ20 ಸೂಪರ್ 10ರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಫೋಟೋವಾಗಿತ್ತು.
ಧೋನಿ ನಿವೃತ್ತಿ ಸುದ್ದಿ ಹಬ್ಬಿಸಿದ್ದ ಚಿತ್ರದ ಹಿಂದಿನ ಸತ್ಯ ಬಾಯ್ಬಿಟ್ಟ ಕೊಹ್ಲಿ!
ಐಸಿಸಿ ಕ್ರಿಕೆಟ್ ವಿಶ್ವಕಪ್ 2019ರ ಮುಕ್ತಾಯದ ಬಳಿಕ ಧೋನಿ ಯಾವುದೇ ಅಂತಾರಾಷ್ಟ್ರೀಯ ಸರಣಿಗಳಲ್ಲಿ ಆಡಿಲ್ಲ.
To whom all tweeting #DhoniRetires pic.twitter.com/mbJTdvQQzU
— Yashasvi_talwar (@witchy_soul) October 28, 2019
ತಾನೇ ಕೊಂಚ ದಿನ ಕ್ರಿಕೆಟ್‌ನಿಂದ ಬಿಡುವು ಪಡೆಯುವುದಾಗಿ ಹೇಳಿದ್ದರು. ಧೋನಿ ಕ್ರಿಕೆಟ್‌ನಿಂದ ದೂರ ಉಳಿಯಲು ಗಾಯದ ಸಮಸ್ಯೆಯೂ ಕಾರಣ ಎನ್ನಲಾಗುತ್ತಿದೆ.
ಬೆತ್ತಲೆ ಫೋಟೋ ಹಾಕಿದ್ದ ಮಹಿಳಾ ಕ್ರಿಕೆಟರ್ ಸಾರಾ ಟೇಲರ್ ನಿವೃತ್ತಿ!
ಆದರೆ ಇದನ್ನು ಗಮನಿಸಿದ ಕೆಲವರು #Dhoniretires ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ರೆಂಡ್ ಮಾಡಿದ್ದಾರೆ. ಇದು ವೈರಲಾಗುತ್ತಿದ್ದು, ಅನೇಕರು ಧೋನಿ ಕೊಡುಗೆಯನ್ನು ಸ್ಮರಿಸಿದ್ದಾರೆ. ಧೋನಿ ಅಭಿಮಾನಿಗಳು ಸಿಟ್ಟಿಗೆದ್ದು, ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದಿದ್ದಾರೆ.
Dear dhoni we would not let you go without this :#DhoniRetires pic.twitter.com/yYlwxkx5ty
— Vikram Singh 🇮🇳 (@TheVikram_) October 29, 2019
ರಾಂಚಿ ಟೆಸ್ಟ್ ಪಂದ್ಯದ ವೇಳೆ ಕಾಣಿಸಿಕೊಂಡಿದ್ದ ಧೋನಿ ಅವರು ನಂತರ ನಿಸ್ಸಾನ್ ಜೋಂಗಾ ಸವಾರಿ ಮಾಡಿದ್ದರು.
Fake News...He is not finished yet... #DhoniRetires@msdhoni pic.twitter.com/gFpTpqTP6w
— Shashikant Patidar (@shashipatidar01) October 29, 2019
ನಂತರ ಜಾರ್ಖಂಡ್ ನ ಅಂಡರ್ 23ರ ತಂಡವನ್ನು ತರಬೇತಿ ಮಾಡುತ್ತಾರೆ ಎಂಬ ಸುದ್ದಿ ಬಂದಿತ್ತು. ಇದಕ್ಕೆ ಪೂರಕವಾಗಿ ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಅವರು ಧೋನಿ ಜೊತೆ ಮಾತನಾಡಿದ್ದು, ಕಿರಿಯರಿಗೆ ಅವಕಾಶ ನೀಡುವಂತೆ ಸೂಚಿಸಿದ್ದಾರೆ ಎಂಬರ್ಥದಲ್ಲಿ ಹೇಳಿದ್ದಾರೆ.
ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ