For Quick Alerts
ALLOW NOTIFICATIONS  
For Daily Alerts
 

ಬ್ಯಾಟಿಂಗ್ ಮಾಡುವಾಗ ನಾನು ಸತ್ತಿದ್ದರೂ ಪರವಾಗಿರಲಿಲ್ಲ: ವಿವಿಯನ್ ರಿಚರ್ಡ್ಸ್

Didnt mind if I died while batting: Viv Richards on not using helmets

ಸಿಡ್ನಿ, ಏಪ್ರಿಲ್ 10: ವೆಸ್ಟ್ ಇಂಡೀಸ್ ದಂತಕತೆ ಸರ್ ವಿವಿಯನ್ ರಿಚರ್ಡ್ಸ್ ಬ್ಯಾಟಿಂಗ್‌ ಮಾಡುವಾಗ ಹೆಲ್ಮೆಟ್ ಧರಿಸೋದಕ್ಕೆ ಆದ್ಯತೆ ನೀಡುತ್ತಿರಲಿಲ್ಲ. ರಿಚರ್ಡ್ ಆಡುತ್ತಿದ್ದಾಗ ಬಹಳಷ್ಟು ಮಂದಿ ಮಾರಕವೇಗಿಗಳಿದ್ದರು. ಅಲ್ಲದೆ ಬೌನ್ಸರ್‌ಗಳಿಗೆ ಆಗ ಅಂಥ ನಿರ್ಬಂಧವೂ ಇರಲಿಲ್ಲ. ಆ ದಿನಗಳಲ್ಲಿ ತಾನು ಬ್ಯಾಟಿಂಗ್ ಮಾಡುತ್ತಿದ್ದ ಬಗ್ಗೆ ವಿವ್ ರಿಚರ್ಡ್ಸ್, ಆಸ್ಟ್ರೇಲಿಯಾ ಆಲ್ ರೌಂಡರ್ ಶೇನ್ ವಾಟ್ಸನ್ ಜೊತೆ ಮಾತನಾಡಿದ್ದಾರೆ.

ಶೇನ್ ವಾಟ್ಸನ್ ಜೊತೆ ವಿಚಾರಗಳನ್ನು ಹಂಚಿಕೊಳ್ಳುವಾಗ ವಿವ್ ರಿಚರ್ಡ್ಸ್, ತಾನು ಬ್ಯಾಟಿಂಗ್ ಮಾಡುವಾಗ ಸತ್ತಿದ್ದರೂ ಪರವಾಗಿರಲಿಲ್ಲ. ನಮಗೆ ಇಷ್ಟವಾದ ಕೆಲಸದಲ್ಲಿ ತೊಡಗಿದ್ದಾಗ ಸಾವೇ ಬಂದರೂ ಅಂಥ ಸಾವಿಗೆ ಅರ್ಥವಿರುತ್ತದೆ. ಕ್ರಿಕೆಟ್‌ ಬಗ್ಗೆ ತನಗಿದ್ದ ಪ್ರೀತಿ ಅಂಥದ್ದು ಎಂದು ಹೇಳಿಕೊಂಡಿದ್ದಾರೆ.

'ಆಟದ ಬಗೆಗಿದ್ದ ಪ್ರೀತಿಯಿಂದಾಗಿ ನಾನು ಎಷ್ಟೋ ಸಾರಿ ಅಂದುಕೊಳ್ಳುತ್ತಿದ್ದೆ; ನಾನು ಪ್ರೀತಿಸುವ ಕ್ರಿಕೆಟ್‌ ಆಟದ ವೇಳೆ ಬ್ಯಾಟಿಂಗ್ ಮಾಡುತ್ತಲೇ ನಾನು ಸತ್ತಿದ್ದರೂ ಪರವಾಗಿರಲಿಲ್ಲ ಅಂತ. ಬ್ಯಾಟಿಂಗ್‌ಗೆ ಹೋಗುವಾಗ ನಾನು ಇದನ್ನೇ ಮನಸ್ಸಿಗೆ ತಂದುಕೊಳ್ಳುತ್ತಿದ್ದೆ. ಬ್ಯಾಟಿಂಗ್‌ಗೆ ಹೋಗುವಾಗ ಇದಕ್ಕಿಂತ ಒಳ್ಳೆಯ ಐಡಿಯಾ ಬೇರೆಯದ್ದಿರಲಿಲ್ಲ,' ಎಂದು ರಿಚರ್ಡ್ಸ್ ನಗುತ್ತಾ ನುಡಿದರು.

ಪ್ರಾಣಕ್ಕೆ ಅಪಾಯಕಾರಿಯಾದಂತ ಕ್ರೀಡೆಗಳಲ್ಲಿ ತೊಡಗಿರುತ್ತಿದ್ದ ಕ್ರೀಡಾಪಟುಗಳನ್ನು ನೋಡುತ್ತಾ ನಾನು ಸ್ಫೂರ್ತಿಗೊಳ್ಳುತ್ತಿದ್ದೆ ಎಂದು ರಿಚರ್ಡ್ಸ್ ಹೇಳಿದ್ದಾರೆ. ಅಪಾಯಕಾರಿಯಾದ ಕ್ರೀಡೆಗಳಲ್ಲಿ ಬಹಳ ಗೌರವದಿಂದ ಪಾಲ್ಗೊಳ್ಳುತ್ತಿದ್ದ ಅನೇಕ ಕ್ರೀಡಾಪಟುಗಳನ್ನು ನೋಡಿ ನಾನು ಸ್ಫೂರ್ತಿಗೊಳ್ಳುತ್ತಿದ್ದೆ,' ಎಂದು ವಿವ್ ರಿಚರ್ಡ್ಸ್ ಹೇಳಿದರು.

'ಸಾವು ನೆನಪಾದಾಗೆಲ್ಲ ನಾನು ಫಾರ್ಮುಲ-1 ಚಾಲನೆ ಮಾಡುತ್ತಿದ್ದವರನ್ನು ನೋಡುತ್ತಿದ್ದೆ. ಅದಕ್ಕಿಂತ ಅಪಾಯಕಾರಿ ಬೇರೆ ಏನಿದೆ?,' ಎಂದ ರಿಚರ್ಡ್ಸ್‌ಗೆ ಮಾತಿಗೆ ವಾಟ್ಸನ್, '150 kph ವೇಗದಲ್ಲಿ ಬರುವ ಚೆಂಡು?,' ಎಂದು ತಮಾಷೆಯಾಗಿ ಪ್ರಶ್ನಿಸಿದರು. ಆಗ ಇಬ್ಬರ ಮುಖದಲ್ಲೂ ನಗು. ವಿವ್ ರಿಚರ್ಡ್ಸ್ 121 ಟೆಸ್ಟ್ ಪಂದ್ಯಗಳಲ್ಲಿ 8540 ರನ್, 187 ಏಕದಿನ ಪಂದ್ಯಗಳಲ್ಲಿ 6721 ರನ್ ಗಳಿಸಿದ್ದರು.

Story first published: Friday, April 10, 2020, 11:04 [IST]
Other articles published on Apr 10, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+