ICC chairman : ಐಸಿಸಿ ನೂತನ ಅಧ್ಯಕ್ಷರ ನೇಮಕ: ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇಗೆ ಅಧ್ಯಕ್ಷ ಪಟ್ಟ

ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ನೂತನ ಅಧ್ಯಕ್ಷರಾಗಿ ನ್ಯೂಜಿಲೆಂಡ್‌ನ ಗ್ರೇಗ್ ಬಾರ್ಕ್ಲೇ ನೇಮಕಗೊಂಡಿದ್ದಾರೆ. ಈ ಮೂಲಕ ಎರಡನೇ ಬಾರಿಗೆ ಐಸಿಸಿ ಅಧ್ಯಕ್ಷ ಪಟ್ಟಕ್ಕೇರಿದ ಬಾರ್ಕ್ಲೇ, ಭಾರತದ ಶಶಾಂತ್ ಮನೋಹರ್ ಬಳಿಕ ಸ್ವತಂತ್ರ ಅಧ್ಯಕ್ಷರಾದ ಎರಡನೇ ವ್ಯಕ್ತಿಯಾಗಿದ್ದಾರೆ.

ವಾಣಿಜ್ಯ ವಕೀಲ ಮತ್ತು 2012ರಿಂದ ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್‌ನ ಡೈರೆಕ್ಷರ್ ಆಗಿರುವ ಗ್ರೇಗ್ ಬಾರ್ಕ್ಲೇ ನೂತನ ಅಧ್ಯಕ್ಷರಾದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಮ್ರಾನ್ ಕ್ವಾಜಾ ಸ್ಥಾನವನ್ನು ಬಾರ್ಕ್ಲೇ ವಹಿಸಿಕೊಂಡಿದ್ದಾರೆ. ಹಂಗಾಮಿ ಅಧ್ಯಕ್ಷರಾಗಿದ್ದ ಶಶಾಂಕ್ ಮನೋಹರ್ ಅಧಿಕಾರವಧಿ ಜುಲೈನಲ್ಲಿ ಮುಗಿದ ಬಳಿಕ ಬಹಳ ಸಮಯದವರೆಗೆ ಸ್ಥಾನ ಕಾಲಿ ಉಳಿದುಕೊಂಡಿತ್ತು.

ನಂಬಿದ್ರೆ ನಂಬಿ, ಬಿಟ್ರೆ ಬಿಡಿ:T20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತದ ಪರ ಕೊನೆಯ ಬಾರಿಗೆ ವಿಕೆಟ್ ಪಡೆದಿದ್ದು ವಿರಾಟ್ ಕೊಹ್ಲಿ!ನಂಬಿದ್ರೆ ನಂಬಿ, ಬಿಟ್ರೆ ಬಿಡಿ:T20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತದ ಪರ ಕೊನೆಯ ಬಾರಿಗೆ ವಿಕೆಟ್ ಪಡೆದಿದ್ದು ವಿರಾಟ್ ಕೊಹ್ಲಿ!

ಐಸಿಸಿ ಏಕದಿನ ವಿಶ್ವಕಪ್ 2015ರಲ್ಲಿ ಡೈರೆಕ್ಷರ್ ಆಗಿ ಕೆಲಸ ಮಾಡಿದ್ದ ಗ್ರೇಗ್ ಬಾರ್ಕ್ಲೇ, ನಾರ್ಥನ್ ಡಿಸ್ಟ್ರಿಕ್ಟ್‌ ಕ್ರಿಕೆಟ್ ಅಸೋಸಿಯೇಷನ್‌ನ ಸದಸ್ಯರು ಆಗಿದ್ದರು. ಇಷ್ಟಲ್ಲದೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಹಲವು ಕಂಪನಿಗಳಲ್ಲಿ ಬೋರ್ಡ್‌ನ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ ಅಪಾರ ಅನುಭವ ಹೊಂದಿದ್ದಾರೆ.

'' ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ದೊಡ್ಡ ಗೌರವವಾಗಿದೆ. ನನ್ನನ್ನು ಬೆಂಬಲಿಸಿದ ಐಸಿಸಿಯ ಸಿಬ್ಬಂದಿ ಹಾಗೂ ಡೈರೆಕ್ಟರ್ಸ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಜಾಗತಿಕ ಪಿಡುಗಿನ ಸಮಯದಲ್ಲಿ ಕ್ರಿಕೆಟ್‌ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಪ್ರಯತ್ನ ಮಾಡೋಣ'' ಎಂದು ಗ್ರೇಗ್ ಬಾರ್ಕ್ಲೇ ಹೇಳಿದ್ದಾರೆ.

''ಕ್ರೀಡೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಇತರೆ ಸದಸ್ಯರೊಂದಿಗೆ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ನಮ್ಮ ಒಗ್ಗಟ್ಟು ಕ್ರಿಕೆಟ್‌ ಜಗತ್ತಿಗೆ ಅಂದಾಜಿಗಿಂತ ಹೆಚ್ಚಿನ ಕ್ರಿಕೆಟ್ ಮನರಂಜನೆ ನೀಡಲು ಪ್ರಯತ್ತಿಸುತ್ತದೆ. 104 ಐಸಿಸಿ ಸದಸ್ಯರನ್ನು ಪರವಾಗಿ ಕ್ರೀಡೆಯ ಭವಿಷ್ಯಕ್ಕಾಗಿ ನಾನು ನನ್ನ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ಮತ್ತು ಬಹಳ ಗಂಭೀರವಾಗಿ ಮಾಡಲು ಪ್ರಯತ್ನಿಸುತ್ತೇನೆ'' ಎಂದು ಗ್ರೇಗ್ ಬಾರ್ಕ್ಲೇ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, November 11, 2022, 17:53 [IST]
Other articles published on Nov 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X