ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಬಿ ಡಿ ವಿಲಿಯರ್ಸ್ ನಿವೃತ್ತಿಯಾಗಿದ್ದಾರೆ ಅನ್ನಿಸುವುದೇ ಇಲ್ಲ: ವಿರಾಟ್ ಕೊಹ್ಲಿ

Doesnt feel like AB de Villiers has retired: Virat Kohli

ಅಹ್ಮದಾಬಾದ್: ದಕ್ಷಿಣ ಆಫ್ರಿಕಾದ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ ಅನ್ನಿಸುವುದೇಯಿಲ್ಲ ಎಂದು ಟೀಮ್ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಮುಂಬೈ ಅಲ್ಲ, ಚೆನ್ನೈ ಕೂಡ ಅಲ್ಲ, ಈ ಬಾರಿ ಕಪ್ ಈ ತಂಡದ್ದೇ ಎಂದ ರವಿ ಶಾಸ್ತ್ರಿಮುಂಬೈ ಅಲ್ಲ, ಚೆನ್ನೈ ಕೂಡ ಅಲ್ಲ, ಈ ಬಾರಿ ಕಪ್ ಈ ತಂಡದ್ದೇ ಎಂದ ರವಿ ಶಾಸ್ತ್ರಿ

ಮಂಗಳವಾರ (ಏಪ್ರಿಲ್ 27) ಅಹ್ಮದಾಬಾದ್‌ನಲ್ಲಿ ನಡೆದಿದ್ದ ಐಪಿಎಲ್ 22ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿ ಡಿ ವಿಲಿಯರ್ಸ್ ಬಿರುಸಿನ ಅರ್ಧ ಶತಕ ಚಚ್ಚಿದ್ದರು. ಆರ್‌ಸಿಬಿಯಿಂದ 5ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ಎಬಿಡಿ 42 ಎಸೆತಗಳಲ್ಲಿ 75 ರನ್ ಕೊಡುಗೆ ನೀಡಿದ್ದರು. ಪರಿಣಾಮ ಪಂದ್ಯದಲ್ಲಿ ಆರ್‌ಸಿಬಿ ರೋಚಕ 1 ರನ್‌ನಿಂದ ಗೆದ್ದಿತ್ತು.

3 ಫೋರ್ಸ್, 5 ಸಿಕ್ಸರ್‌ಗಳನ್ನು ಬಾರಿಸಿದ್ದ ಡಿ ವಿಲಿಯರ್ಸ್ ಆರ್‌ಸಿಬಿ ತಂಡ ಎದುರಾಳಿ ಡೆಲ್ಲಿಗೆ ಸವಾಲಿನ ಗುರಿ ನೀಡುವಲ್ಲಿ ಪ್ರಮುಖಪಾತ್ರ ವಹಿಸಿದ್ದರು. ಹೀಗಾಗಿ ಎಬಿಡಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತ್ತು. 37ರ ಹರೆಯದ ಎಬಿಡಿ 2018 ಮೇ 23ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಆ ಬಳಿಕ ಮತ್ತೆ ನಿವೃತ್ತಿ ವಾಪಸ್ ಪಡೆದುಕೊಂಡಿದ್ದರು.

ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಅಮಿತ್ ಮಿಶ್ರಾಗೆ ಎಚ್ಚರಿಸಿದ ಅಂಪೈರ್ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಅಮಿತ್ ಮಿಶ್ರಾಗೆ ಎಚ್ಚರಿಸಿದ ಅಂಪೈರ್

'ಎಬಿಡಿ ಸ್ಪರ್ಧಾತ್ಮಕ ಕ್ರಿಕೆಟ್‌ ಪಂದ್ಯಗಳನ್ನು ಕಳೆದ 5 ತಿಂಗಳಿನಿಂದಲೂ ಆಡುತ್ತಿಲ್ಲ. ಆದರೆ ಆತ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿಲ್ಲ ಎಂದು ನಿಮಗೆ ಅನ್ನಿಸೋದೇ ಇಲ್ಲ. ಆತನಿಗೆ ಹ್ಯಾಟ್ಸಾಫ್. ನಮಗಾಗಿ ಎಬಿಡಿ ಮತ್ತೆ ಮತ್ತೆ ಈ ಪ್ರದರ್ಶನ ನೀಡುತ್ತಿರಲಿ,' ಎಂದು ಡೆಲ್ಲಿ ವಿರುದ್ಧದ ಪಂದ್ಯದ ಬಳಿಕ ಕೊಹ್ಲಿ ಹೇಳಿದ್ದಾರೆ.

Story first published: Wednesday, April 28, 2021, 16:59 [IST]
Other articles published on Apr 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X