ಟೆಸ್ಟ್ ರದ್ದಿಗೆ ಐಪಿಎಲ್ ದೂರಿದ ಮೈಕಲ್ ವಾನ್‌ಗೆ ಅಭಿಮಾನಿಗಳು ತರಾಟೆ

ಲಂಡನ್: ಚಾರ್ಟರ್ಡ್ ವಿಮಾನದ ಮೂಲಕ ಮುಂಬೈ ಇಂಡಿಯನ್ಸ್‌ನ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ಜಸ್‌ಪ್ರೀತ್‌ ಬೂಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಮ್ಯಾನ್ಚೆಸ್ಟರ್‌ನಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಪ್ರಯಾಣಿಸಿದ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ತನ್ನ ಅಸಮಾಧಾನ ಹೊರ ಹಾಕಿದ್ದಾರೆ.

ಟೀಮ್ ಇಂಡಿಯಾ ಮೇಲೆ ಗಂಭೀರ ಆರೋಪ ಹೊರಿಸಿದ ಸ್ಟೀವ್ ಹಾರ್ಮಿಸನ್!ಟೀಮ್ ಇಂಡಿಯಾ ಮೇಲೆ ಗಂಭೀರ ಆರೋಪ ಹೊರಿಸಿದ ಸ್ಟೀವ್ ಹಾರ್ಮಿಸನ್!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಕೊನೇಯ ಟೆಸ್ಟ್ ಪಂದ್ಯ ರದ್ದಾಗಲು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಲ್ಲದೆ ಬೇರೆ ಕಾರಣವಿದೆ ಎಂದು ಹೇಳಬೇಡಿ ಎಂದು ಟೀಮ್ ಇಂಡಿಯಾ ವಿರುದ್ಧ ಮೈಕಲ್ ವಾನ್ ಕಿಡಿ ಕಾರಿದ್ದಾರೆ. ವಾನ್ ಹೇಳಿಕೆಗೆ ಭಾರತೀಯ ಅಭಿಮಾನಿಗಳು ಟ್ವಿಟರ್ ಮೂಲಕ ತಿರುಗೇಟು ನೀಡಿದ್ದಾರೆ.

ನಿಜವಾದ ಕಾರಣವೇನು? ಆಗುತ್ತಿರುವ ಚರ್ಚೆಯೇನು?

ನಿಜವಾದ ಕಾರಣವೇನು? ಆಗುತ್ತಿರುವ ಚರ್ಚೆಯೇನು?

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಮತ್ತು ಒಬ್ಬ ಫಿಸಿಯೋ ಕೋವಿಡ್ ಸೋಂಕಿಗೀಡಾಗಿದ್ದರು. ಆದರೂ ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್‌ ವೇಳೆ ಕೋಚ್‌ಗಳಿಲ್ಲದೆ, ಬೆಂಬಲ ಸಿಬ್ಬಂದಿಯಿಲ್ಲದೆ ಆಡಿ ಪಂದ್ಯ ಗೆದ್ದಿತ್ತು. ಮ್ಯಾನ್ಚೆಸ್ಟರ್‌ನಲ್ಲಿ ನಡೆಯಲಿದ್ದ ಕೊನೇಯ ಟೆಸ್ಟ್‌ಗೆ ಮುನ್ನ ಭಾರತೀಯ ತಂಡದಲ್ಲಿದ್ದ ಒಬ್ಬ ಫಿಸಿಯೋ ಕೂಡ ಕೋವಿಡ್-19 ಸೋಂಕಿಗೆ ತುತ್ತಾಗಿದ್ದರಿಂದ ಪಂದ್ಯ ಆಡಲು ಭಾರತೀಯ ಕ್ರಿಕೆಟಿಗರು ಹಿಂದೇಟು ಹಾಕಿದ್ದರು. ಸೆಪ್ಟೆಂಬರ್‌ 10ರಂದು ಆರಂಭವಾಗಿದ್ದ ಟೆಸ್ಟ್ ಪಂದ್ಯವನ್ನು ಸ್ವಲ್ಪ ತಡವಾಗಿ ಆಚರಿಸಬೇಕು ಎಂದರೆ ಸೆಪ್ಟೆಂಬರ್ 19ರಂದು ಐಪಿಎಲ್ ಆರಂಭಗೊಳ್ಳಲಿದ್ದರಿಂದ ಅದೂ ಕೂಡ ಸಾಧ್ಯವಿರಲಿಲ್ಲ. ಹೀಗಾಗಿ ಅಂತಿಮವಾಗಿ ಪಂದ್ಯವನ್ನು ರದ್ದೆಂದು ಘೋಷಿಸಲಾಗಿತ್ತು. ಇಲ್ಲಿ ಕೆಲವರು ಭಾರತ ತಂಡದಲ್ಲಿ ಕೋಚ್‌ಗಳು, ಬೆಂಬಲ ಸಿಬ್ಬಂದಿ ಇಲ್ಲದಿರುವಾಗ ಟೆಸ್ಟ್ ಆಡೋದು ಹೇಗೆ ಎಂದು ಹೇಳಿದರೆ, ಇನ್ನು ಕೆಲವರು ಟೀಮ್ ಇಂಡಿಯಾಕ್ಕೆ ಟೆಸ್ಟ್ ಕ್ರಿಕೆಟ್‌ಗಿಂತ ನಗದು ಶ್ರೀಮಂತ ಐಪಿಎಲ್‌ ದೊಡ್ಡದಾಯ್ತು ಎನ್ನುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಐಪಿಎಲ್ ದೂರಿದ ಮೈಕಲ್ ವಾನ್‌ಗೆ ಅಭಿಮಾನಿಗಳು ತರಾಟೆ

ಸೆಪ್ಟೆಂಬರ್‌ 11ರಂದು ಇಂಗ್ಲೆಂಡ್ ಮಾಜಿ ಆಟಗಾರ ಮೈಕಲ್ ವಾನ್ ಒಂದು ಟ್ವೀಟ್ ಮಾಡಿದ್ದರು. ಇದರಲ್ಲಿ, 'ಐಪಿಎಲ್ ತಂಡಗಳು ಚಾರ್ಟರ್ಡ್ ವಿಮಾನಗಳ ಮೂಲಕ ಯುಎಇಗೆ ತೆರಳುತ್ತಿವೆ. ಐಪಿಎಲ್‌ಗೂ ಮುನ್ನ ಯುಎಇಯಲ್ಲಿ ಆರು ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸಬೇಕಾಗುತ್ತದೆ. ಐಪಿಎಲ್ ಶುರುವಾಗಲು ಇನ್ನೂ 7 ದಿನಗಳು ಬಾಕಿಯಿವೆ. ಆದ್ದರಿಂದ ಟೆಸ್ಟ್ ಪಂದ್ಯ ರದ್ದಗಲು ಐಪಿಎಲ್‌ಗೆ ಹೊರತಾಗಿ ಬೇರೆ ಕಾರಣವಿದೆ ಎಂದು ಹೇಳಲೇಬೇಡಿ' ಎಂದು ಬರೆದುಕೊಳ್ಳಲಾಗಿತ್ತು. ಮೈಕಲ್ ವಾನ್ ಈ ಟ್ವೀಟ್‌ಗೆ ಅನೇಕ ಭಾರತೀಯ ಅಭಿಮಾನಿಗಳು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಒಬ್ಬ ಆಟಗಾರ ಪಾಸಿಟಿವ್ ಬಂದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು?!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್‌ ಪಂದ್ಯ ರದ್ದಾಗಲು ಐಪಿಎಲ್ ಕಾರಣವಲ್ಲದೆ ಬೇರೇನೂ ಅಲ್ಲ ಎಂದಿರುವ ಮೈಕಲ್ ವಾನ್‌ಗೆ ಟ್ವೀಟ್ ಮೂಲಕ ಅನೇಕ ಭಾರತೀಯ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. 'ಹಾಗಾದರೆ ಆಟಗಾರರು ಅವರು ಮತ್ತು ಅವರ ಕುಟುಂಬಸ್ಥರನ್ನು ಅಪಾಯದಲ್ಲಿ ಸಿಲುಕಿಸಬೇಕಿತ್ತೆ? ವಿದೇಶಕ್ಕೆ ಬಂದು ಅಲ್ಲಿನ ಅಭಿಮಾನಿಗಳಿಗೆ ಮನರಂಜಿಸುವುದಕ್ಕೋಸ್ಕರ ಆಟಗಾರರು ತಮ್ಮ ಜೀವವನ್ನು ಪಣಕ್ಕಿಡಬೇಕಿತ್ತೇ?' ಎಂದು ಕೆಲವರು ವಾನ್‌ಗೆ ತಿರುಗಿ ಪ್ರಶ್ನಿಸಿದ್ದಾರೆ. ಇನ್ನು ಕೆಲವರು, 'ಕಳೆದ ಕೆಲ ದಿನಗಳಿಂದ ಭಾರತೀಯ ಆಟಗಾರರನ್ನು ಉಪಚರಿಸುತ್ತಿದ್ದ ಒಬ್ಬ ಫಿಸಿಯೋ ಕೂಡ ಕೋವಿಡ್‌ ಸೋಂಕಿಗೆ ತುತ್ತಾಗಿದ್ದಾರೆ. ಹೀಗಾಗಿ ಆಟಗಾರರಿಗೆ ಸಹಜವಾಗೇ ನಾವೂ ಸೋಂಕು ತಗಲಿ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ ಎಂದು ಭಯವಾಗಿರುತ್ತದೆ. ಪಂದ್ಯ ಆಡುವಾಗ ಮಧ್ಯದಲ್ಲಿ ಒಬ್ಬ ಆಟಗಾರ ಪಾಸಿಟಿವ್ ಬಂದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಸ್ವಲ್ಪ ಕಲ್ಪಿಸಿಕೊಳ್ಳಿ' ಎಂದು ಪ್ರತಿಕ್ರಿಯಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, September 11, 2021, 23:49 [IST]
Other articles published on Sep 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X