ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಪುನರಾರಂಭದ ಪರಿಸ್ಥಿತಿಯಲ್ಲಿ ನಾವಿನ್ನೂ ಇಲ್ಲ: ರಾಹುಲ್ ದ್ರಾವಿಡ್

Dont Think We Are In A Position To Resume Cricket In India; Dravid

ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಹಾಲಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಕ್ರಿಕೆಟ್ ಪುನರಾರಂಭದ ಬಗ್ಗೆ ಮಾತನಾಡಿದ್ದಾರೆ. ಭಾರತ ಇನ್ನೂ ಕ್ರಿಕೆಟ್ ಪುನರಾರಂಭಿಸುವ ಪರಿಸ್ಥಿತಿಯಲ್ಲಿ ಇಲ್ಲ ಎಂಬ ಅಭಿಪ್ರಾಯವನ್ನು ಅವರು ತಿಳಿಸಿದ್ದಾರೆ.

ಕೊರೊನಾ ವೈರಸ್ ಪ್ರಕರಣಗಳು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಕ್ರಿಕೆಟ್ ಪುನರಾರಂಭಿಸುವ ಮೊದಲು ಇನ್ನೂ ಸ್ವಲ್ಪ ಕಾಲ ಕಾದು ನೋಡಬೇಕಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ. ಜೊತೆಗೆ ದೇಶೀಯ ಕ್ರಿಕೆಟ್ ನಿಗದಿತ ಸಮಯಕ್ಕೆ ಆರಂಭವಾಗಲು ಸಾಧ್ಯವಾಗದಿದ್ದರೆ ಅದನ್ನು ಚುಟುಕುಗೊಳಿಸಬೇಕು ಎನ್ನುವ ಅಭಿಪ್ರಾಯವನ್ನೂ ಅವರು ತಿಳಿಸಿದ್ದಾರೆ.

WWEಗೆ ನಿವೃತ್ತಿ ಘೋಷಿಸಿದ ರಸ್ಲಿಂಗ್ ಸೂಪರ್ ಸ್ಟಾರ್ ಅಂಡರ್‌ಟೇಕರ್!WWEಗೆ ನಿವೃತ್ತಿ ಘೋಷಿಸಿದ ರಸ್ಲಿಂಗ್ ಸೂಪರ್ ಸ್ಟಾರ್ ಅಂಡರ್‌ಟೇಕರ್!

ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಯೊಂದು ಕೂಡ ಅಸ್ಥಿರವಾಗಿದೆ. ಸರ್ಕಾರ ಮತ್ತು ವೈದ್ಯಕೀಯ ಸಲಹೆಗಾರರ ನಿರ್ಧಾರವನ್ನು ಗಣನೆಗೆ ತೆಗೆದುಕೊಂಡು ಕ್ರಿಕೆಟ್ ಆಡುವ ಬಗ್ಗೆ ಮತ್ತು ಯಾವ ರೀತಿಯಾಗಿ ಮುಂದುವರಿಯಬಹುದು ಎಂದು ನಿರ್ಧಾರವನ್ನು ತೆಗದುಕೊಳ್ಳಬಹುದು. ಹಾಗಿದ್ದರೂ ಈ ಬಾರಿಯ ಕ್ರಿಕೆಟ್‌ ಋತುವಿನ ಹೆಚ್ಚಿನ ಕಾಲ ವ್ಯರ್ಥವಾಗಲಾರದು ಎಂದು ನಾನು ಭಾವಿಸುತ್ತೇನೆ ಎಂದು ದ್ರಾವಿಡ್ ಹೇಳಿದ್ದಾರೆ.

ದ್ರಾವಿಡ್ ಬೆಂಗಳೂರಿನಲ್ಲಿರುವ ಎನ್‌ಸಿಎ ಮೊದಲು ಸ್ಥಳೀಯ ಕ್ರಿಕೆಟಿಗರಿಗೆ ತರಬೇತಿ ನೀಡುವ ಗುರಿ ಹೊಂದಿದೆ ಎಂದು ತಿಳಿಸಿದರು. ಕಳೆದ ತಿಂಗಳು, ಭಾರತ ಸರ್ಕಾರವು ಕ್ರೀಡಾಕೂಟಗಳ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿ, ಮುಚ್ಚಿದ ಬಾಗಿಲುಗಳ ಹಿಂದೆ ಪುನರಾರಂಭಿಸಲು ಅವಕಾಶ ಮಾಡಿಕೊಟ್ಟಿದೆ.

ರಣಜಿ ಕ್ರಿಕೆಟ್‌ನ ಶ್ರೇಷ್ಠ ಸ್ಪಿನ್ನರ್ ರಾಜಿಂದರ್ ಗೋಯೆಲ್ ನಿಧನರಣಜಿ ಕ್ರಿಕೆಟ್‌ನ ಶ್ರೇಷ್ಠ ಸ್ಪಿನ್ನರ್ ರಾಜಿಂದರ್ ಗೋಯೆಲ್ ನಿಧನ

ಲಾಕ್‌ಡೌನ್‌ಗೆ ಮುಂಚಿತವಾಗಿ ನಮ್ಮ ಹೆಚ್ಚಿನ ದೇಶೀಯ ಸ್ಪರ್ಧೆಗಳನ್ನು ಪೂರ್ಣಗೊಳಿಸಲು ನಮಗೆ ಸಾಧ್ಯವಾಯಿತು. ಮುಂದಿನ ನಮ್ಮ ತರಬೇತಿ ಕಾರ್ಯಕ್ರಮಗಳು ಯಾವ ದೇಶೀಯ ಪಂದ್ಯಾವಳಿಯನ್ನು ಮೊದಲು ಆಡುತ್ತವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅದು ಟಿ 20 ಆಗಿದ್ದರೆ ಅದಕ್ಕೆ ತಕ್ಕಂತೆ ನಾವು ಕಾರ್ಯಕ್ರಮವನ್ನು ಪ್ರಾರಂಭಿಸುತ್ತೇವೆ ಎಂದು ದ್ರಾವಿಡ್ ಹೇಳಿದ್ದಾರೆ.

Story first published: Monday, June 22, 2020, 16:09 [IST]
Other articles published on Jun 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X