ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಫ್ರಾಂಚೈಸಿಗಳ ನಿರ್ಧಾರಕ್ಕೆ ದ್ರಾವಿಡ್ ಅಸಮಾಧಾನ

IPL 2020 : Dravid is unhappy with the IPL franchises | Oneindia Kannada
Dravid disappointed over Indian coaches not getting enough opportunities in IPL

ಐಪಿಎಲ್‌ನಲ್ಲಿ ಭಾರತೀಯ ಕೋಚ್‌ಗಳು ಅವಕಾಶವನ್ನು ಪಡೆಯದಿರುವ ವಿಚಾರಕ್ಕೆ ಮಾಜಿ ನಾಯಕ ರಾಹುಲ್ ದ್ರಾವಿಡ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಐಪಿಎಲ್ ತಂಡಗಳು ಸ್ಥಳೀಯ ಕೋಚ್‌ಗಳನ್ನು ಬಳಸಿಕೊಂಡು ಅವರ ಅನುಭವಗಳನ್ನು ಸರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಹೇಳಿದ್ದಾರೆ.

ನಮ್ಮಲ್ಲಿ ಹಲವು ಅತ್ಯುತ್ತಮ ಕೋಚ್‌ಗಳು ಇದ್ದಾರೆ. ನನಗೆ ಅವರ ಸಾಮರ್ಥ್ಯದ ಮೇಲೆ ಸಾಕಷ್ಟು ನಂಬಿಕೆಯಿದೆ. ಹೀಗಾಗಿ ಭಾರತೀಯ ಕೋಚ್‌ಗಳನ್ನು ಐಪಿಎಲ್‌ ತಂಡಗಳು ಉಪಯೋಗಿಸಿಕೊಳ್ಳಬೇಕು ಎಂದು ಎನ್‌ಸಿಎ ಅಧ್ಯಕ್ಷರೂ ಆಗಿರುವ ದ್ರಾವಿಡ್ ಹೇಳಿದ್ದಾರೆ

ಹಿತಾಸಕ್ತಿ ಸಂಘರ್ಷ ಆರೋಪ ಮುಕ್ತರಾದ ಕನ್ನಡಿಗ ರಾಹುಲ್ ದ್ರಾವಿಡ್ಹಿತಾಸಕ್ತಿ ಸಂಘರ್ಷ ಆರೋಪ ಮುಕ್ತರಾದ ಕನ್ನಡಿಗ ರಾಹುಲ್ ದ್ರಾವಿಡ್

ಭಾರತೀಯ ಕೋಚ್‌ಗಳು ಭಾರತೀಯ ಪಿಚ್‌ಗಳ ಬಗ್ಗೆ ಆಟಗಾರರ ಮನಸ್ಥಿತಿಯ ಬಗ್ಗೆ ಸಾಕಷ್ಟು ಉತ್ತಮ ಜ್ಞಾನವನ್ನು ಹೊಂದಿದ್ದಾರೆ. ಅವರಿಗೆ ಅವಕಾಶವನ್ನು ನೀಡಿದರೆ ತಂಡಕ್ಕೆ ಸಹಜವಾಗಿಯೇ ಲಾಭವಾಗಲಿದೆ. ಜೊತೆಗೆ ಸ್ಥಳೀಯವಾಗಿ ಉತ್ತಮ ಜ್ಞಾನವನ್ನು ಹೊಂದಿರುವ ಸಾಕಷ್ಟು ಮಂದಿ ಆಟಗಾರರು ಇದ್ದಾರೆ. ಅವರನ್ನೂ ಚೆನ್ನಾಗಿ ಬಳಸಿಕೊಳ್ಳಬೇಕಿದೆ ಎಂದಿದ್ದಾರೆ.

ಕನ್ನಡಿಗ ರಾಹುಲ್ ದ್ರಾವಿಡ್ ಭೇಟಿಯಾದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಕನ್ನಡಿಗ ರಾಹುಲ್ ದ್ರಾವಿಡ್ ಭೇಟಿಯಾದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ನಮ್ಮ ಗುರಿಯ ಜೊತೆಗೆ ಕೋಚ್‌ಗಳಿಗೂ ಸಹಕಾರಿಯಾಗುವಂತಾ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ) ಅಧ್ಯಕ್ಷ ರಾಹುಲ್ ದ್ರಾವಿಡ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Story first published: Friday, November 29, 2019, 10:58 [IST]
Other articles published on Nov 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X