ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ರಿಷಭ್ ಪಂತ್ ಕ್ಯಾಚ್ ಬಿಟ್ಟಾಗ WTC ಪ್ರಶಸ್ತಿಯೇ ಕೈಬಿಟ್ಟಂತೆ ಅನ್ನಿಸಿತ್ತು'

Dropping Rishabh Pants catch was like dropping WTC title, reveals New Zealands Tim Southee
ಪಂತ್ ಕ್ಯಾಚ್ ಬಿಟ್ಟು ತಲೆಕೆಡಿಸಿಕೊಂಡಿದ್ದ ಟಿಮ್ ಸೌಥಿ | Oneindia Kannada

ವೆಲ್ಲಿಂಗ್ಟನ್: ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಭಾರತದ ಯುವ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಕ್ಯಾಚ್ ಬಿಟ್ಟಾಗ WTC ಪ್ರಶಸ್ತಿಯನ್ನೇ ಕೈ ಚೆಲ್ಲಿದಂತೆ ಅನ್ನಿಸಿತು ಎಂದು ನ್ಯೂಜಿಲೆಂಡ್ ಅನುಭವಿ ವೇಗಿ ಟಿಮ್ ಸೌಥೀ ಹೇಳಿದ್ದಾರೆ.

WTCಗೆ ಅತ್ಯುತ್ತಮ XI ಹೆಕ್ಕಿದ ಬ್ರಾಡ್, ಪ್ರಮುಖ ಭಾರತೀಯನ ಅವಗಣನೆ, ಪಾಕ್ ಆಟಗಾರನಿಗೆ ಮಣೆ!WTCಗೆ ಅತ್ಯುತ್ತಮ XI ಹೆಕ್ಕಿದ ಬ್ರಾಡ್, ಪ್ರಮುಖ ಭಾರತೀಯನ ಅವಗಣನೆ, ಪಾಕ್ ಆಟಗಾರನಿಗೆ ಮಣೆ!

ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿ ನಡೆದಿದ್ದ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಐದನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ರಿಷಭ್ ಪಂತ್, ಕೈಲ್ ಜೇಮಿಸನ್ ಓವರ್‌ನಲ್ಲಿ ವಿಕೆಟ್ ಒಪ್ಪಿಸುವುದರಲ್ಲಿದ್ದರು. ಆದರೆ ಸೆಕೆಂಡ್ ಸ್ಲಿಪ್‌ನಲ್ಲಿದ್ದ ಟಿಮ್ ಸೌಥೀ ಆ ಕ್ಯಾಚನ್ನು ಕೈಬಿಟ್ಟಿದ್ದರು.

ಹಾಗೆ ಜೀವದಾನ ಪಡೆದ ಪಂತ್, 41 ರನ್‌ ಗಳಿಸಿ ಟ್ರೆಂಟ್ ಬೌಲ್ಟ್ ಓವರ್‌ನಲ್ಲಿ ಹೆನ್ರಿ ನಿಕೋಲ್ಸ್‌ಗೆ ಕ್ಯಾಚಿತ್ತು ನಿರ್ಗಮಿಸಿದ್ದರು. ಒಂದು ವೇಳೆ ಮೊದಲೇ ಸೌಥೀ ಆ ಕ್ಯಾಚ್ ಹಿಡಿದಿದ್ದರೆ ಪಂತ್ ಇಷ್ಟು ರನ್‌ ಕೂಡ ಬಾರಿಸುತ್ತಿರಲಿಲ್ಲ. ಅಷ್ಟೇ ಅಲ್ಲ, ಪಂತ್‌ ಒಂದು ವೇಳೆ ಎರಡನೇ ಸಾರಿಯೂ ಔಟಾಗದೆ ಕ್ರೀಸಿಗಂಟಿ ನಿಂತಿದ್ದರೆ ಪಂದ್ಯದ ಗತಿಯನ್ನೇ ಬದಲಿಸುತ್ತಿದ್ದರು ಅನ್ನೋದು ಸೌಥೀಗೆ ಗೊತ್ತಿತ್ತು. ಇದೇ ಕಾರಣಕ್ಕೆ ಕ್ಯಾಚ್ ಬಿಟ್ಟಾಗ ಸೌಥೀ ಹೆದರಿದ್ದರು.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಹೊಸ ಅಂಕ ನಿಯಮ ಘೋಷಿಸಿದ ಐಸಿಸಿವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಹೊಸ ಅಂಕ ನಿಯಮ ಘೋಷಿಸಿದ ಐಸಿಸಿ

'ಕ್ಯಾಚ್ ಬಿಟ್ಟಾಗ ಆ ಭೀತಿ ನನ್ನ ತಲೆಯಲ್ಲಿತ್ತು. ಪಂತ್ ಆಡುವ ಪರಿ ನನಗೆ ಗೊತ್ತಿತ್ತು. ಕೇವಲ ಐದು ಆರು ಓವರ್‌ಗಳು ಮುಂದುವರೆಯಲು ಅವಕಾಶ ಕೊಟ್ಟರೂ ಪಂತ್ ಆಟವನ್ನೇ ನಮ್ಮಿಂದ ದೂರ ತೆಗೆದುಕೊಂಡು ಹೋಗಬಲ್ಲರು. ಅದೂ ಸೀಮಿತ ಅವಧಿಯಲ್ಲಿ ಪಂದ್ಯ ಮುಗಿಸಬೇಕಾಗಿದ್ದರಿಂದ ಪಂತ್ ಕ್ಯಾಚ್ ಬಿಟ್ಟಾಗ ನನ್ನ ತಲೆಯೊಳಗೆ ನುಗ್ಗಿ ರಕ್ಕಸನೊಬ್ಬ ಕೊರೆಯುತ್ತಿದ್ದ," ಎಂದು ಸೌಥೀ ಹೇಳಿದ್ದಾರೆ.

Story first published: Thursday, July 1, 2021, 15:30 [IST]
Other articles published on Jul 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X