Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಸಿಬಿ ಆಟಗಾರರು ಮೈದಾನದಲ್ಲಿ ಸ್ಮಾರ್ಟ್ ವಾಚ್ ಬಳಸುವಂತಿಲ್ಲ

ECB bans players from wearing smartwatches in field of play

ಲಂಡನ್, ಮಾರ್ಚ್ 31: ಇಂಗ್ಲೆಂಡ್ ಆಟಗಾರರು ಇನ್ಮುಂದೆ ಆಟದ ವೇಳೆ ಮೈದಾನದಲ್ಲಿ ಸ್ಮಾರ್ಟ್ ವಾಚ್ ಬಳಸುವಂತಿಲ್ಲ. ಆಟದ ಸಂದರ್ಭ ಕ್ರಿಕೆಟಿಗರು ಸ್ಮಾರ್ಟ್ ವಾಚ್ ಬಳಸುವುದಕ್ಕೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ನಿಷೇಧ ಹೇರಿದೆ. ಮುಂಬರಲಿರುವ ಎಲ್ಲಾ ಪಂದ್ಯಗಳಿಗೂ ಇದು ಅನ್ವಯವಾಗಲಿದೆ.

ಭ್ರಷ್ಟಾಚಾರ ವಿರೋಧಿ ನಿಯಮಗಳನ್ನು ಬಲಪಡಿಸುವುದಕ್ಕಾಗಿ ಇಂಗ್ಲೆಂಡ್ ಈ ನಿರ್ಧಾರ ಕೈಗೊಂಡಿದೆ. ಸ್ಮಾರ್ಟ್ ವಾಚ್‌ಗಳ ಮೂಲಕ ಪಂದ್ಯದ ಆಗು-ಹೋಗುಗಳನ್ನು ಅದೇ ಕ್ಷಣಕ್ಕೆ ಇತರರಿಗೆ ತಿಳಿಸಲು ಅವಕಾಶವಿದೆ. ಅಂದರೆ ಸ್ಮಾರ್ಟ್ ವಾಚ್‌ಗಳ ಮೂಲಕ ಲೈವ್ ಸ್ಟ್ರೀಮಿಂಗ್ ನಡೆಸಬಹುದು. ಇದಕ್ಕೆ ಕಡಿವಾಣ ಹಾಕಲು ಇಸಿಬಿ ಮುಂದಾಗಿದೆ.

ಈ ಮೊದಲು ಇಂಗ್ಲೆಂಡ್ ಆಟಗಾರರಿಗೆ ಆಟದ ವೇಳೆ ಸ್ಮಾರ್ಟ್ ವಾಚ್ ಧರಿಸಲು ಅನುಮತಿ ನೀಡಿತ್ತು. ಆದರೆ ನೇರಪ್ರಸಾರದ ಪಂದ್ಯಗಳ ವೇಳೆ ಸಂವಹನ ಮತ್ತು ದತ್ತಾಂಶ ವರ್ಗಾವಣೆ ಸೌಲಭ್ಯವನ್ನು ವಾಚ್‌ನಲ್ಲಿ ಸ್ವಿಚ್ ಆಫ್ ಮಾಡಿಡಲು ಸೂಚಿಸಲಾಗಿತ್ತು. ಆದರೂ ಇಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿರುವ ಸಾಧ್ಯತೆಯನ್ನು ಮನಗಂಡು ಇಸಿಬಿ ಸ್ಮಾರ್ಟ್‌ ವಾಚ್‌ಗೆ ನಿಷೇಧ ಹೇರಿದೆ.

'ಕೌಂಟಿ ಆಟದಲ್ಲಿ ಲೈವ್-ಸ್ಟ್ರೀಮಿಂಗ್ ಸೇವೆಗಳ ಬೆಳವಣಿಗೆಗೆ ಧನ್ಯವಾದಗಳು. ವಿಶ್ವಾದ್ಯಂತ ನೇರಪ್ರಸಾರ ವೀಕ್ಷಿಸಲು ಈಗ ಹೆಚ್ಚಿನ ಸಂಖ್ಯೆಯ ಪಂದ್ಯಗಳು ಲಭ್ಯವಿರುವುದರಿಂದ, ನಿಯಮಗಳನ್ನು ಬಿಗಿಗೊಳಿಸಲಾಗಿದೆ, ಅಂದರೆ ದೂರದರ್ಶನದಲ್ಲಿ ಪ್ರಸಾರಗೊಳ್ಳುವ ಆಟಗಳಲ್ಲಿ ಸ್ಮಾರ್ಟ್‌ವಾಚ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ,' ಎಂದು ಇಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

Story first published: Tuesday, March 31, 2020, 17:47 [IST]
Other articles published on Mar 31, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+