ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ENG vs NZ 3ನೇ ಟೆಸ್ಟ್: ಕಿವೀಸ್‌ಗೆ ಮಿಚೆಲ್, ಬ್ಲಂಡೆಲ್ ಆಸರೆ; ಎರಡನೇ ದಿನದಾಟದ ಲೈವ್ ಸ್ಕೋರ್ ಇಲ್ಲಿದೆ

ENG vs NZ: England vs New Zealand 3rd test Day 2 live score

ನ್ಯೂಜಿಲೆಂಡ್ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟ ನಡೆಸುತ್ತಿದೆ. ಇತ್ತಂಡಗಳ ನಡುವಿನ ಈ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿದ್ದು, ಎರಡೂ ಪಂದ್ಯಗಳಲ್ಲಿಯೂ ಸಹ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಗೆದ್ದು, 2-0 ಅಂತರದಿಂದ ಸರಣಿಯಲ್ಲಿ ಮುನ್ನಡೆಯನ್ನು ಸಾಧಿಸಿದ್ದು, ಈಗಾಗಲೇ ಸರಣಿಯನ್ನು ಕೈವಶಪಡಿಸಿಕೊಂಡಿದೆ. ಇತ್ತ ಎರಡೂ ಪಂದ್ಯಗಳನ್ನೂ ಸೋತು ಸರಣಿ ಸೋಲಿನ ಹಿನ್ನಡೆ ಅನುಭವಿಸಿರುವ ಪ್ರವಾಸಿ ನ್ಯೂಜಿಲೆಂಡ್ ತಂಡ ಮೂರನೇ ಪಂದ್ಯದಲ್ಲಾದರೂ ಗೆದ್ದು ವೈಟ್‌ವಾಷ್ ಮುಖಭಂಗದಿಂದ ಪಾರಾಗಬೇಕಿದೆ.

ತಂಡಕ್ಕೆ ಸ್ಫೂರ್ತಿ ತುಂಬಲು ಜ್ಯೋತಿಷಿ ನೇಮಕ ಮಾಡಿದ್ದ ಎಐಎಫ್ಎಫ್ ; ಸುರಿದದ್ದು ಲಕ್ಷ ಲಕ್ಷತಂಡಕ್ಕೆ ಸ್ಫೂರ್ತಿ ತುಂಬಲು ಜ್ಯೋತಿಷಿ ನೇಮಕ ಮಾಡಿದ್ದ ಎಐಎಫ್ಎಫ್ ; ಸುರಿದದ್ದು ಲಕ್ಷ ಲಕ್ಷ

ಇತ್ತಂಡಗಳ ನಡುವಿನ ಈ ಮೂರನೇ ಟೆಸ್ಟ್ ಪಂದ್ಯ ನಿನ್ನೆಯಿಂದ ( ಜೂನ್ 23 ) ಲೀಡ್ಸ್‌ನ ಹೆಡಿಂಗ್ಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡಿದ್ದರು.

ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಾರಿ 90+ ಬಾರಿಸಿ ಶತಕ ಮಿಸ್ ಮಾಡಿಕೊಂಡ ಸಕ್ರಿಯ ಆಟಗಾರರಿವರುಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಾರಿ 90+ ಬಾರಿಸಿ ಶತಕ ಮಿಸ್ ಮಾಡಿಕೊಂಡ ಸಕ್ರಿಯ ಆಟಗಾರರಿವರು

ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿದೆ. ಆರಂಭಿಕ ಆಘಾತ ಅನುಭವಿಸಿದ್ದ ನ್ಯೂಜಿಲೆಂಡ್ ತಂಡಕ್ಕೆ ಡೇರಿಲ್ ಮಿಚೆಲ್ ಮತ್ತು ಟಾಮ್ ಬ್ಲಂಡೆಲ್ ಆಸರೆಯಾಗಿದ್ದು, ಮೊದಲ ದಿನದಂತೆಯೇ ಎರಡನೇ ದಿನವೂ ತಮ್ಮ ಆಟವನ್ನು ಮುಂದುವರೆಸುವ ಯೋಜನೆಯೊಂದಿಗೆ ಕಣಕ್ಕಿಳಿದಿದ್ದಾರೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ತೃತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಲೈವ್ ಸ್ಕೋರ್ ಕೆಳಕಂಡಂತಿದೆ.

1
51778
ನ್ಯೂಜಿಲೆಂಡ್‌ ತಂಡಕ್ಕೆ ಮಿಚೆಲ್, ಬ್ಲಂಡೆಲ್ ಆಸರೆ

ನ್ಯೂಜಿಲೆಂಡ್‌ ತಂಡಕ್ಕೆ ಮಿಚೆಲ್, ಬ್ಲಂಡೆಲ್ ಆಸರೆ

ನ್ಯೂಜಿಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದ ಟಾಮ್ ಲಾಥಮ್ ಮೊದಲನೇ ಓವರ್‌ನಲ್ಲಿಯೇ ವಿಕೆಟ್ ಒಪ್ಪಿಸಿ ಡಕ್ ಔಟ್ ಆದರು ಹಾಗೂ ಮತ್ತೋರ್ವ ಆರಂಭಿಕ ಆಟಗಾರ ವಿಲ್ ಯಂಗ್ 20 ರನ್ ಕಲೆಹಾಕಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಕೇನ್ ವಿಲಿಯಮ್ಸನ್ 31, ಡಿವೋನ್ ಕಾನ್ವೆ 26 ಮತ್ತು ಹೆನ್ರಿ ನಿಕೋಲ್ಸ್ 19 ರನ್ ಕಲೆ ಹಾಕಿದರು. ಸದ್ಯ ಡೇರಿಲ್ ಮಿಚೆಲ್ ಮತ್ತು ವಿಕೆಟ್ ಕೀಪರ್ ಟಾಮ್ ಬ್ಲಂಡೆಲ್ ಅಜೇಯರಾಗಿ ಕಣದಲ್ಲಿದ್ದು, ಮಿಚೆಲ್ 78 ರನ್ ಗಳಿಸಿದ್ದರೆ, ಬ್ಲಂಡೆಲ್ 48 ರನ್ ಗಳಿಸಿದ್ದಾರೆ.

ತಲಾ 2 ವಿಕೆಟ್ ಪಡೆದ ಬ್ರಾಡ್, ಲೀಚ್

ತಲಾ 2 ವಿಕೆಟ್ ಪಡೆದ ಬ್ರಾಡ್, ಲೀಚ್

ಇಂಗ್ಲೆಂಡ್ ತಂಡದ ಬೌಲರ್‌ಗಳಾದ ಸ್ಟುವರ್ಟ್ ಬ್ರಾಡ್ ಮತ್ತು ಜ್ಯಾಕ್ ಲೀಚ್ ತಲಾ 2 ವಿಕೆಟ್ ಪಡೆದರು ಹಾಗೂ ಜೇಮಿ ಓವರ್‌ಟನ್ 1 ವಿಕೆಟ್ ಪಡೆದರು.

Team India ವನ್ನು ಕಾಡಿದ್ದ Englandಸ್ಟಾರ್ ಸ್ಪಿನ್ನರ್ Adil Rashid ಹಜ್ ಯಾತ್ರೆಗೆ... | *Cricket | OneIndia
ಆಡುವ ಬಳಗಗಳು

ಆಡುವ ಬಳಗಗಳು

ನ್ಯೂಜಿಲೆಂಡ್‌: ಟಾಮ್ ಲ್ಯಾಥಮ್, ವಿಲ್ ಯಂಗ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್ ಮತ್ತು ನೀಲ್ ವ್ಯಾಗ್ನರ್

ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್(ಸಿ), ಬೆನ್ ಫೋಕ್ಸ್(ಡಬ್ಲ್ಯೂ), ಜೇಮೀ ಓವರ್‌ಟನ್, ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್ ಮತ್ತು ಜ್ಯಾಕ್ ಲೀಚ್

Story first published: Friday, June 24, 2022, 15:43 [IST]
Other articles published on Jun 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X