ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Eng vs NZ: ಅತ್ಯಂತ ವಿಚಿತ್ರ ರೀತಿಯಲ್ಲಿ ವಿಕೆಟ್ ಕಳೆದುಕೊಂಡ ಕಿವೀಸ್ ಆಟಗಾರ: ವಿಡಿಯೋ

Eng vs NZ: Henry Nicholls lose his wicket to Jack Leach in a strange way

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಿದ್ದು ಅಂತಿಮ ಟೆಸ್ಟ್ ಪಂದ್ಯದ ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ನ್ಯೂಜಿಲೆಂಡ್ ತಂಡ ಮೊದಲ ದಿನ ಹೇಳಿಕೊಳ್ಳುವಂತಾ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ. ಇಂಗ್ಲೆಂಡ್ ಬೌಲರ್‌ಗಳ ದಾಳಿಗೆ ಪ್ರಮುಖ ಆಟಗಾರರು ವಿಕೆಟ್ ಕಳೆದುಕೊಂಡಿದ್ದಾರೆ.

ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಮಧ್ಯಮ ಕ್ರಮಾಂಕದ ಆಟಗಾರ ಹೆನ್ರಿ ನಿಕೋಲಸ್ ವಿಚಿತ್ರ ರೀತಿಯಲ್ಲಿ ವಿಕೆಟ್ ಕಳೆದುಕೊಂಡಿದ್ದಾರೆ. ಕಿವೀಸ್ ಪಡೆಯ ಈ ಆಟಗಾರ ವಿಕೆಟ್ ಕಳೆದುಕೊಂಡ ರೀತಿಗೆ ಬೌಲಿಂಗ್ ಮಾಡುತ್ತಿದ್ದ ಜಾಕ್ ಲೀಚ್ ಕೂಡ ಒಂದರೆ ಕ್ಷಣ ತಬ್ಬಿಬ್ಬಾಗಿದ್ದಾರೆ. ಹಾಗಾದರೆ ಹೆನ್ರಿ ನಿಕೋಲಸ್ ವಿಕೆಟ್ ಕಳೆದುಕೊಂಡಿದ್ದು ಹೇಗೆ? ತಮ್ಮದೇ ತಂಡದ ಆಟಗಾರ ನಿಕೋಲಸ್ ಪಾಲಿಗೆ ವಿಲನ್ ಆಗಿದ್ದು ಹೇಗೆ? ಮುಂದೆ ಓದಿ..

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ರೋಹಿತ್ ಶರ್ಮಾ; ವಿಶೇಷ ಪತ್ರ ಬರೆದ ಹಿಟ್‌ಮ್ಯಾನ್ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ರೋಹಿತ್ ಶರ್ಮಾ; ವಿಶೇಷ ಪತ್ರ ಬರೆದ ಹಿಟ್‌ಮ್ಯಾನ್

ವಿಚಿತ್ರ ರೀತಿಯಲ್ಲಿ ಔಟಾದ ನಿಕೋಲಸ್

ಅದು ಪಂದ್ಯದ 56ನೇ ಓವರ್. ಜಾಕ್ ಲೀಚ್ ಬೌಲಿಂಗ್ ದಾಳಿಗೆ ಇಳಿದಿದ್ದರು. ಸ್ಟ್ರೈಕ್‌ನಲ್ಲಿ ಹೆನ್ರಿ ನಿಕೋಲಸ್ ಬ್ಯಾಟಿಂಗ್ ನಡೆಸುತ್ತಿದ್ದರೆ ನಾನ್ ಸ್ಟ್ರೈಕ್ ತುದಿಯಲ್ಲಿ ಡ್ಯಾರೆಲ್ ಮಿಚೆಲ್ ಇದ್ದರು. ಈ ಸಂದರ್ಭದಲ್ಲಿ ಜಾಕ್ ಲೀಚ್ ಎಸೆತವನ್ನು ಮುಂದಕ್ಕೆ ಹೆಜ್ಜೆಯಿಟ್ಟು ಬಾರಿಸಿದ್ದರು ಹೆನ್ರಿ ನಿಕೋಲಸ್. ಆದರೆ ಆ ಚೆಂಡು ನೇರವಾಗಿ ನಾನ್‌ಸ್ಟ್ರೈಕ್‌ನಲ್ಲಿದ್ದ ಮಿಚೆಲ್ ಅವರತ್ತ ಧಾವಿಸಿತ್ತು. ಈ ಸಂದರ್ಭದಲ್ಲಿ ಬ್ಯಾಟ್‌ಗೆ ಚೆಂಡು ತಗುಲುವುದನ್ನು ತಪ್ಪಿಸಲು ಮಿಚೆಲ್ ಬ್ಯಾಟ್ ಮೇಲಕ್ಕೆತ್ತಿದ್ದರು. ಈ ಸಂದರ್ಭದಲ್ಲಿ ನಾನ್‌ಸ್ಟ್ರೈಕರ್ ಮಿಚೆಲ್ ಅವರ ಬ್ಯಾಟ್‌ಗೆ ನೇರವಾಗಿ ತಾಗಿದ ಚೆಂಡು ಮಿಡ್‌ಆಫ್‌ನಲ್ಲಿದ್ದ ಅಲೆಕ್ಸ್ ಲೀಸ್ ಬೊಗಸೆಗೆ ಸೇರಿಕೊಂಡಿತ್ತು. ಹೀಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಚಿತ್ರವಾಗಿ ವಿಕೆಟ್ ಕಳೆದುಕೊಂಡ ಆಟಗಾರರ ಪಟ್ಟಿಗೆ ಸೇರಿಕೊಂಡಿದ್ದಾರೆ ಹೆನ್ರಿ ನಿಕೋಲಸ್.

ತಂಡಕ್ಕೆ ಮರಳಿದ ನಾಯಕ ಕೇನ್

ತಂಡಕ್ಕೆ ಮರಳಿದ ನಾಯಕ ಕೇನ್

ಕೊರೊನಾವೈರಸ್ ಕಾರಣದಿಂದಾಗಿ ಎರಡನೇ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಕೇನ್ ವಿಲಿಯಮ್ಸನ್ ಮೂರನೇ ಪಂದ್ಯದಲ್ಲಿ ಮತ್ತೆ ಕಣಕ್ಕಿಳಿದಿದ್ದಾರೆ. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕ ಕೇನ್ ನಿರಾಸೆ ಅನುಭವಿದಿದ್ದಾರೆ. 64 ಎಸೆತ ಎದುರಿಸಿದ ಕೇನ್ ವಿಲಿಯಮ್ಸನ್ 31 ರನ್‌ಗಳಿಸಿ ಬ್ರಾಡ್‌ಗೆ ವಿಕೆಟ್ ಒಪ್ಪಿಸಿದ್ದಾರೆ.

ವೈಟ್‌ವಾಶ್ ತಪ್ಪಿಸಿಕೊಳ್ಳುತ್ತಾ ಕಿವೀಸ್ ಪಡೆ

ವೈಟ್‌ವಾಶ್ ತಪ್ಪಿಸಿಕೊಳ್ಳುತ್ತಾ ಕಿವೀಸ್ ಪಡೆ

ಇನ್ನು ಈ ಸರಣಿಯನ್ನು ನ್ಯೂಜಿಲೆಂಡ್ ತಂಡ ಈಗಾಗಲೇ ಆತಿಥೆಯ ಇಂಗ್ಲೆಂಡ್ ಕೈಗೆ ಒಪ್ಪಿಸಿದೆ. ಮೊದಲ ಎರಡು ಪಂದ್ಯಗಳಲ್ಲಿಯೂ ನ್ಯೂಜಿಲೆಂಡ್ ತಂಡ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದು ಎರಡು ಪಂದ್ಯದಲ್ಲಿಯೂ ಸೋಲು ಅನುಭವಿಸಿದೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ಗೆದ್ದು ವೈಟ್‌ವಾಶ್ ಮುಖಭಂಗದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ.

ಪ್ಲೇಯಿಂಗ್ XI

ಪ್ಲೇಯಿಂಗ್ XI

ಇಂಗ್ಲೆಂಡ್ ಆಡುವ ಬಳಗ: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಜೇಮೀ ಓವರ್‌ಟನ್, ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್
ಬೆಂಚ್: ಕ್ರೇಗ್ ಓವರ್ಟನ್, ಹ್ಯಾರಿ ಬ್ರೂಕ್

ನ್ಯೂಜಿಲೆಂಡ್ ಆಡುವ ಬಳಗ: ಟಾಮ್ ಲ್ಯಾಥಮ್, ವಿಲ್ ಯಂಗ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ನೀಲ್ ವ್ಯಾಗ್ನರ್
ಬೆಂಚ್: ಮ್ಯಾಟ್ ಹೆನ್ರಿ, ಹಮೀಶ್ ರುದರ್ಫೋರ್ಡ್, ಏಜಾಜ್ ಪಟೇಲ್, ಡೇನ್ ಕ್ಲೀವರ್, ಬ್ಲೇರ್ ಟಿಕ್ನರ್

Story first published: Thursday, June 23, 2022, 22:39 [IST]
Other articles published on Jun 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X