ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜಿನ ಬಗ್ಗೆ ಪ್ರಸ್ತಾಪಿಸಿ ಆಸ್ಟ್ರೇಲಿಯಾ ಸ್ಟಾರ್ ಆಟಗಾರನಿಗೆ ಸ್ಲೆಡ್ಜ್ ಮಾಡಿದ ಜೋಸ್ ಬಟ್ಲರ್

England Captain Jos Buttler Sledges All Rounder Cameron Green By Talking About IPL Mini Auction 2023

ಐಪಿಎಲ್ 2023ಕ್ಕೆ ಮುಂಚಿತವಾಗಿ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಮಿನಿ ಹರಾಜು ನಡೆಯಲಿದೆ. ಹಲವು ಆಟಗಾರರು ಮಿನಿ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್‌ನ ಸ್ಟಾರ್ ಆಟಗಾರರು ಈ ಬಾರಿ ಮಿನಿ ಹರಾಜಿನ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇದೇ ವಿಚಾರಕ್ಕೆ ಈಗ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಆಸ್ಟ್ರೇಲಿಯಾದ ಆಟಗಾರನನ್ನು ಮೈದಾನದಲ್ಲಿ ಸ್ಲೆಡ್ಜ್ ಮಾಡಿದ್ದಾರೆ.

ಇಂಗ್ಲೆಂಡ್ ಟಿ20 ವಿಶ್ವಕಪ್ ಚಾಂಪಿಯನ್ ಆದ ನಂತರ, ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಆಡುತ್ತಿದೆ. ಸರಣಿಯ ಮೊದಲನೇ ಪಂದ್ಯ ನವೆಂಬರ್ 17ರಂದು ಅಡಿಲೇಡ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್‌ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ಜಯ ಗಳಿಸಿತು.

ನಾಯಕನ ಸ್ಥಾನ ಕಳೆದುಕೊಳ್ಳಲಿರುವ ರೋಹಿತ್ ಶರ್ಮಾ! ಟಿ20 ಮಾದರಿಗೆ ಇನ್ನು ಈತನೇ ಕ್ಯಾಪ್ಟನ್ನಾಯಕನ ಸ್ಥಾನ ಕಳೆದುಕೊಳ್ಳಲಿರುವ ರೋಹಿತ್ ಶರ್ಮಾ! ಟಿ20 ಮಾದರಿಗೆ ಇನ್ನು ಈತನೇ ಕ್ಯಾಪ್ಟನ್

ಆಸ್ಟ್ರೇಲಿಯಾ-ಇಂಗ್ಲೆಂಡ್ ಕ್ರಿಕೆಟ್ ಲೋಕದ ಮತ್ತೊಂದು ಸಾಂಪ್ರದಾಯಿಕ ಎದುರಾಳಿಗಳಾಗಿವೆ, ಎರಡೂ ತಂಡಗಳು ಆಡುವಾಗ ಮೈಂಡ್ ಗೇಮ್, ಸ್ಲೆಡ್ಜಿಂಗ್ ಎರಡೂ ತಂಡಗಳಿಗೆ ಸಾಮಾನ್ಯ ಎನ್ನುವಂತೆ ಇರುತ್ತದೆ. ಆದರೆ, ಆಟದ ಸಂದರ್ಭದಲ್ಲಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಐಪಿಎಲ್ ಹರಾಜಿನ ವಿಚಾರ ಪ್ರಸ್ತಾಪಿಸಿ ಸ್ಲೆಡ್ಜ್ ಮಾಡಿದ್ದಾರೆ.

ಇಂಗ್ಲೆಂಡ್ ನೀಡಿದ 288 ರನ್‌ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್‍ 86 ರನ್ , ಟ್ರಾವಿಸ್ ಹೆಡ್‌ 69 ರನ್ , ಸ್ಟೀವ್ ಸ್ಮಿತ್ ಅಜೇಯ 80 ರನ್‌ಗಳ ನೆರವಿನಿಂದ ಸುಲಭವಾಗಿ ಗುರಿಯನ್ನು ಬೆನ್ನಟ್ಟಿತ್ತು.

ಐಪಿಎಲ್ ಹರಾಜು ಬರುತ್ತಿದೆ ಎಂದು ಕೆಣಕಿದ ಬಟ್ಲರ್

ಐಪಿಎಲ್ ಹರಾಜು ಬರುತ್ತಿದೆ ಎಂದು ಕೆಣಕಿದ ಬಟ್ಲರ್

ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ 41 ಓವರ್‌ನಲ್ಲಿ ಲಿಯಾಮ್ ಡಾಸನ್ ಅವರ ಎಸೆತ ಎದುರಿಸುವಾಗಿ ಕೀಪಿಂಗ್ ಮಾಡುತ್ತಿದ್ದ ಬಟ್ಲರ್ ಕೆಣಕಿದರು. ಓವರ್‌ನ ಮೂರನೇ ಎಸೆತದಲ್ಲಿ ಡಾಸನ್ ಎಸೆತವನ್ನು ಮುಂದೆ ಬಂದು ದೊಡ್ಡ ಹೊಡೆತ ಹೊಡೆಯಲು ಯತ್ನಿಸಿದಾಗ ಬಾಲ್ ಬ್ಯಾಟ್‌ ಸಂಪರ್ಕಕ್ಕೆ ಸಿಗಲಿಲ್ಲ. ಆಗ ಹಿಂದೆ ಇದ್ದ ಬಟ್ಲರ್, "ದೊಡ್ಡ ಹೊಡೆತ ಆಡುತ್ತಿರುವುದನ್ನು ನೋಡಲು ಸಂತೋಷವಾಗುತ್ತಿದೆ, ಡಾಸ್" ಎಂದು ಕೂಗಿದ್ದಾರೆ.

ನಾಲ್ಕನೇ ಎಸೆತವನ್ನು ಗ್ರೀನ್ ರಕ್ಷಣಾತ್ಮಕವಾಗಿ ಆಡಿದರು, ಚೇಸಿಂಗ್ ದಿ ಇಂಕ್, ಡಾವ್ಸ್ (ಚೇಸ್‌ ಇಂಕ್ ಎನ್ನುವುದು ಇಂಗ್ಲೆಂಡ್‌ನ ಬಿಸಿನೆಸ್ ಕಾರ್ಡ್ ಆಗಿದ್ದು, ವ್ಯವಹಾರದ ಉದ್ದೇಶಕ್ಕೆ ಬಳಸಲಾಗುತ್ತದೆ) ದೊಡ್ಡ ಹರಾಜು ಬರುತ್ತಿದೆ ಎಂದು ಕೂಗುವ ಮೂಲಕ ಐಪಿಎಲ್‌ ಹರಾಜನ್ನು ಉಲ್ಲೇಖಿಸಿ ಗ್ರೀನ್‌ರನ್ನು ಕೆಣಕಿದ್ದಾರೆ. ಕ್ಯಾಮರೂನ್ ಗ್ರೀನ್ 28 ಎಸೆತಗಳಲ್ಲಿ ಅಜೇಯ 20 ರನ್ ಗಳಿಸಿ ತಂಡವನ್ನು ಗೆಲುವಿನ ದಡ ತಲುಪಿಸಿದರು.

ದೊಡ್ಡ ಮೊತ್ತ ಪಡೆಯುವ ಸಾಧ್ಯತೆ

ದೊಡ್ಡ ಮೊತ್ತ ಪಡೆಯುವ ಸಾಧ್ಯತೆ

ವಿಶ್ವಕಪ್‌ಗೆ ಮುನ್ನ ಆಸ್ಟ್ರೇಲಿಯಾ ಭಾರತಕ್ಕೆ ಟಿ20 ಸರಣಿಗಾಗಿ ಪ್ರವಾಸದ ಸಂದರ್ಭದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದರು. ಈ ಬಾರಿ ಮಿನಿ ಹರಾಜಿನಲ್ಲಿ ಗ್ರೀನ್ ಭಾರಿ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ. ಸ್ಫೋಟಕ ಆರಂಭಿಕ ಬ್ಯಾಟರ್ ಆಗಿರುವ ಗ್ರೀನ್‌ ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ.

ಭಾರತದಂತಹ ಪಿಚ್‌ಗಳಲ್ಲಿ, ಚಿಕ್ಕ ಮೈದಾನಗಳಲ್ಲಿ ಗ್ರೀನ್ ಬೌಂಡರಿಗಳನ್ನು ಸುಲಭವಾಗಿ ಗಳಿಸಬಲ್ಲರು. ಹಲವು ಫ್ರಾಂಚೈಸಿಗಳು ಗ್ರೀನ್‌ರನ್ನು ಖರೀದಿಸಲು ಆಸಕ್ತಿ ಹೊಂದಿವೆ.

ಆಸ್ಟ್ರೇಲಿಯಾ, ಇಂಗ್ಲೆಂಡ್ ಆಟಗಾರರಿಗೆ ಅದೃಷ್ಟ

ಆಸ್ಟ್ರೇಲಿಯಾ, ಇಂಗ್ಲೆಂಡ್ ಆಟಗಾರರಿಗೆ ಅದೃಷ್ಟ

ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರರು ಪ್ರಮುಖ ಆಕರ್ಷಣೆಯಾಗಿದ್ದಾರೆ. ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್, ಇಂಗ್ಲೆಂಡ್‌ನ ಬೆನ್‌ಸ್ಟೋಕ್ಸ್, ಸ್ಯಾಮ್ ಕರನ್, ಆದಿಲ್ ರಶೀದ್ ಭಾರಿ ಬೇಡಿಕೆ ಪಡೆದುಕೊಳ್ಳುವ ಸಾಧ್ಯತೆ ಇದೆ.

ಬೆನ್‌ ಸ್ಟೋಕ್ಸ್ ಮತ್ತು ಸ್ಯಾಮ್ ಕರನ್ ಹೆಚ್ಚಿನ ಮೊತ್ತಕ್ಕೆ ಹರಾಜಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನೂ ಹಲವು ಆಟಗಾರರು ಹರಾಜಿಗೆ ಹೆಸರು ನೀಡುವ ಸಾಧ್ಯತೆ ಇದ್ದು, ಯಾರಿಗೆ ಅದೃಷ್ಠ ಖುಲಾಯಿಸಲಿದೆ ಎನ್ನುವ ಕುತೂಹಲ ಇದೆ.

Story first published: Friday, November 18, 2022, 11:55 [IST]
Other articles published on Nov 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X