ಭಾರತದ ರೈತರ ಪ್ರತಿಭಟನೆಗೆ ಇಂಗ್ಲೆಂಡ್ ಮಾಜಿ ಕ್ರಿಕೆಟರ್ ಬೆಂಬಲ

ಲಂಡನ್: ನರೇಂದ್ರ ಮೋದಿಯ ಬಿಜೆಪಿ ಸರ್ಕಾರದ ರೈತ ವಿರೋಧಿ ಮಸೂದೆಗಳ ವಿರುದ್ಧ ದೆಹಲಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ, ಮೂಲತಃ ಭಾರತದವರಾದ ಮಾಂಟಿ ಪನೇಸರ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕಳೆದ ಸೆಪ್ಟೆಂಬರ್‌ನಲ್ಲಿ ಕೃಷಿಗೆ ಸಂಬಂಧಿಸಿದ ಮಸೂದೆಗಳನ್ನು ತಿದ್ದುಪಡಿ ಮಾಡಿತ್ತು. ಇದು ಮಾರಾಟಗಾರರಿಗೆ ಅನುಕೂಲವಾಗಿದ್ದು, ರೈತರಿಗೆ ತೊಂದರೆಯಾಗುವಂತಿದೆ ಎಂದು ಮಸೂದೆಯ ವಿರುದ್ಧ ಪಂಜಾಬ್, ಹರ್ಯಾಣ, ರಾಜಸ್ಥಾನ ಮತ್ತು ಉತ್ತರಪ್ರದೇಶ ರಾಜ್ಯಗಳ ರೈತರು ದೆಹಲಿಗೆ ತೆರಳಿ ಪ್ರತಿಭಸಿಸುತ್ತಿದ್ದಾರೆ.
ಪ್ರತಿಭಟನಾ ನಿರತ ರೈತರನ್ನು ಮೋದಿ ಸರ್ಕಾರ ಆರಂಭದಲ್ಲಿ ದೆಹಲಿ-ಹರ್ಯಾಣ ಗಡಿಯಲ್ಲಿ ತಡೆದಿತ್ತು. ಪೊಲೀಸರನ್ನು ಬಿಟ್ಟು ರೈತರ ಮೇಲೆ ಟಿಯರ್ ಗ್ಯಾಸ್ ಶೆಲ್‌ಗಳು ಮತ್ತು ಜಲಫಿರಂಗಿಗಳ ಮೂಲಕ ತಡೆಯಲು ಯತ್ನಿಸಿತ್ತು. ರೈತರು ಜಗ್ಗದಾಗ ದೆಹಲಿಗೆ ಪ್ರವೇಶಿಸಲು ಅನುಮತಿ ನೀಡಿತ್ತು. ರೈತರ ಈ ಪ್ರತಿಭಟನೆ ವಿಶ್ವಮಟ್ಟದಲ್ಲಿ ಸುದ್ದಿಯಾಗಿದೆ.
ರೈತರ ಪ್ರತಿಭಟನೆಗೆ ಬೆಂಬಲಿಸಿ ಟ್ವೀಟ್ ಮಾಡಿರುವ ಪನೇಸರ್, 'ನಾವು ಒಪ್ಪಂದ ಮಾಡಿಕೊಂಡಂತೆ ಬೆಳೆ ಬಂದಿಲ್ಲ, ಹೀಗಾಗಿ ಒಪ್ಪಂದದ ಪ್ರಕಾರ ಬೆಲೆ ನೀಡುವುದಿಲ್ಲ ಎಂದು ಕೊಳ್ಳುವವರು ಹೇಳಿದರೆ ರೈತರು ಏನು ಮಾಡಬೇಕು? ಬೆಳೆಗೆ ಇಂತಿಷ್ಟು ಬೆಲೆ ಅನ್ನೋದು ಅಲ್ಲಿ ಉಲ್ಲೇಖಿಸಿಲ್ಲವಲ್ಲ?,' ಎಂದು ಬರೆದುಕೊಂಡಿದ್ದಾರೆ.
ಎಡಗೈ ಆರ್ಥಡಾಕ್ಸ್ ಬೌಲರ್ ಆಗಿರುವ ಬೌಲರ್ ಆಗಿರುವ ಪನೇಸರ್ 50 ಟೆಸ್ಟ್ ಪಂದ್ಯಗಲ್ಲಿ 167 ವಿಕೆಟ್, 26 ಏಕದಿನ ಪಂದ್ಯಗಳಲ್ಲಿ 24 ವಿಕೆಟ್ ಮತ್ತು 1 ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ 2 ವಿಕೆಟ್ ಪಡೆದಿದ್ದಾರೆ. ಮಾಂಟಿ ಜನಿಸಿದ್ದು ಇಂಗ್ಲೆಂಡ್‌ನಲ್ಲೇ. ಆದರೆ ಪನೇಸರ್ ಹೆತ್ತವರು ಮೂಲತಃ ಭಾರತದವರು. ಸಿಖ್ ಸಮುದಾಯದವರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications