ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್: ಭಾರತದ ಸಮೀಪದಲ್ಲೇ ಇದೆ ಇಂಗ್ಲೆಂಡ್

England in 3rd position in World Test Championship Points Table

ಮ್ಯಾನ್ಚೆಸ್ಟರ್, ಜುಲೈ 29: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ ಸರಣಿ ಜಯದೊಂದಿಗೆ ಇಂಗ್ಲೆಂಡ್‌ ತಂಡ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್‌ನ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಎರಡು ಪಂದ್ಯಗಳನ್ನು ಗೆದ್ದಿರುವುದರಿಂದ ಇಂಗ್ಲೆಂಡ್‌ಗೆ ಖಾತೆಯಲ್ಲಿ ಪಾಯಿಂಟ್ಸ್‌ ಕೂಡ ಹೆಚ್ಚಿದೆ.

ಮನಮುಟ್ಟುವ ಹಾಗೆ ಸ್ಟುವರ್ಟ್ ಬ್ರಾಡ್‌ಗೆ ಸಂದೇಶ ಬರೆದ ಯುವರಾಜ್ ಸಿಂಗ್!ಮನಮುಟ್ಟುವ ಹಾಗೆ ಸ್ಟುವರ್ಟ್ ಬ್ರಾಡ್‌ಗೆ ಸಂದೇಶ ಬರೆದ ಯುವರಾಜ್ ಸಿಂಗ್!

ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ಎರಡು ಪಂದ್ಯಗಳನ್ನು ಗೆದ್ದಿತ್ತು. ಆರಂಭಿಕ ಪಂದ್ಯದಲ್ಲಿ ಕೆರಿಬಿಯನ್ನರು ಗೆದ್ದಿದ್ದರಿಂದ ಟೆಸ್ಟ್ ಸರಣಿ 2-1ರಿಂದ ಆಂಗ್ಲರ ವಶವಾಗಿತ್ತು. ಹೀಗಾಗಿ ಇಂಗ್ಲೆಂಡ್ ತಂಡ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಹೆಚ್ಚುವರಿ ಅಂಕ ಕಲೆ ಹಾಕಿದೆ.

ಮುಂದಿನ ಎಂಎಸ್ ಧೋನಿ ಈತನೇ ಎಂದು ಸುರೇಶ್ ರೈನಾ ಹೆಸರಿಸಿದ್ದು ಯಾರನ್ನು?ಮುಂದಿನ ಎಂಎಸ್ ಧೋನಿ ಈತನೇ ಎಂದು ಸುರೇಶ್ ರೈನಾ ಹೆಸರಿಸಿದ್ದು ಯಾರನ್ನು?

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ 360 ಅಂಕ ಗಳಿಸಿದೆ (9 ಪಂದ್ಯಗಳಲ್ಲಿ 7 ಗೆಲುವು, 2 ಸೋಲು). ದ್ವಿತೀಯ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಖಾತೆಯಲ್ಲಿ 296 ಅಂಕಗಳಿವೆ. ಮುಂಬರಲಿರುವ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಬಳಿಕ ಅಂಕದಲ್ಲಿ ಬದಲಾವಣೆಯಾಗಲಿದೆ. ಇಂಗ್ಲೆಂಡ್ 226 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ವಿಶ್ವಕಪ್ ಗೆಲುವಿನ ನಂತರ ಸಚಿನ್‌ರನ್ನು ಹೆಗಲ ಮೇಲೆ ಹೊತ್ತು ಗೌರವಿಸಿದ ಕಾರಣ ಹೇಳಿದ ಕೊಹ್ಲಿವಿಶ್ವಕಪ್ ಗೆಲುವಿನ ನಂತರ ಸಚಿನ್‌ರನ್ನು ಹೆಗಲ ಮೇಲೆ ಹೊತ್ತು ಗೌರವಿಸಿದ ಕಾರಣ ಹೇಳಿದ ಕೊಹ್ಲಿ

ಸದ್ಯ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 1. ಭಾರತ (360 ಅಂಕಗಳು), 2. ಆಸ್ಟ್ರೇಲಿಯಾ (296), 3. ಇಂಗ್ಲೆಂಡ್ (226), 4. ನ್ಯೂಜಿಲೆಂಡ್ (180), 5. ಪಾಕಿಸ್ತಾನ (140) ತಂಡಗಳಿವೆ. ಬೌಲರ್‌ಗಳಲ್ಲಿ 1. ಸ್ಟುವರ್ಟ್ ಬ್ರಾಡ್ (53 ವಿಕೆಟ್‌ಗಳು), 2. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ (49), 3. ನೇಥನ್ ಲಿಯಾನ್ (47), 4. ಭಾರತ ಮೊಹಮ್ಮದ್ ಶಮಿ (36), 5. ನ್ಯೂಜಿಲೆಂಡ್‌ನ ಟಿಮ್ ಸೌಥೀ (33) ಇದ್ದಾರೆ.

Story first published: Wednesday, July 29, 2020, 18:38 [IST]
Other articles published on Jul 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X