ಪಾಯಿಂಟ್ಸ್‌ನಲ್ಲಿ ದಾಖಲೆ, ಬಾಬರ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಮಲನ್!

ಕೇಪ್‌ಟೌನ್: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಆತಿಥೇಯರ ವಿರುದ್ಧ ಮೂರು ಟಿ20ಐ ಸರಣಿಯ ಮೂರೂ ಪಂದ್ಯಗಳನ್ನು ಗೆದ್ದುಕೊಂಡಿದೆ. ಡಿಸೆಂಬರ್ 1ರಂದು ನಡೆದಿದ್ದ ಕಡೇಯ ಟಿ20ಐ ಪಂದ್ಯದಲ್ಲಿ ಇಂಗ್ಲೆಂಡ್ 9 ವಿಕೆಟ್ ಸುಲಭ ಗೆಲುವನ್ನಾಚರಿಸಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್‌ನ ಡೇವಿಡ್ ಮಲನ್ 47 ಎಸೆತಗಳಿಗೆ 99 ರನ್ ಬಾರಿಸಿ ಗಮನ ಸೆಳೆದಿದ್ದರು.

ಪಾಂಡ್ಯ, ಜಡೇಜಾ ಜೊತೆಯಾಟ ತಂಡಕ್ಕೆ ಬಲ ತುಂಬಿತು: ವಿರಾಟ್ ಕೊಹ್ಲಿ

ದಕ್ಷಿಣ ಆಫ್ರಿಕಾ ವಿರುದ್ಧದ ಕಡೇಯ ಟಿ20ಐನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿರುವ ಡೇವಿಡ್ ಮಲನ್ ಟಿ20ಐ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೊದಲು ನಂಬರ್ ವನ್ ಸ್ಥಾನದಲ್ಲಿದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಝಾಮ್ ಅವರನ್ನು ಮಲನ್ ಹಿಂದಿಕ್ಕಿದ್ದಾರೆ.

33ರ ಹರೆಯದ ಎಡಗೈ ಬ್ಯಾಟ್ಸ್‌ಮನ್ ಡೇವಿಡ್ ಮಲಾನ್ ಖಾತೆಯಲ್ಲಿ ಈಗ ಒಟ್ಟು 915 ಅಂಕಗಳಿವೆ. ದಕ್ಷಿಣ ಆಫ್ರಿಕಾ ವಿರುದ್ಧದ 3 ಟಿ20 ಇನ್ನಿಂಗ್ಸ್‌ಗಳಲ್ಲಿ 173 ರನ್ ಬಾರಿಸಿದ್ದರಿಂದ ಮಲನ್‌ಗೆ ಈ ಪಾಯಿಂಟ್ಸ್‌ ಲಭಿಸಿದೆ. ಇದು ಟಿ20ಐ ಇತಿಹಾಸದಲ್ಲಿ ವರ್ಷವೊಂದರಲ್ಲಿ ಆಟಗಾರನೊಬ್ಬ ಗಳಿಸಿದ ಅತ್ಯಧಿಕ ಪಾಯಿಂಟ್ಸ್‌ ದಾಖಲೆ ನಿರ್ಮಿಸಿದೆ.

ಜಡೇಜಾ ಅರ್ಧಶತಕ ಬಾರಿಸುತ್ತಲೇ ಸಂಜಯ್ ಮಂಜ್ರೇಕರ್ ಟ್ರೋಲ್

2018ರ ಜುಲೈನಲ್ಲಿ ಆಸ್ಟ್ರೇಲಿಯಾದ ಆ್ಯರನ್ ಫಿಂಚ್ 900 ಪಾಯಿಂಟ್ಸ್‌ ಗಳಿಸಿ ಟಿ20ಐನಲ್ಲಿ ದಾಖಲೆ ಬರೆದಿದ್ದರು. ಈಗ ಮಲನ್ 915 ಪಾಯಿಂಟ್ಸ್‌ ಗಳಿಸಿರುವುದಷ್ಟೇ ಅಲ್ಲ, ನಂ.1 ಸ್ಥಾನದಲ್ಲಿದ್ದ ಬಾಬರ್‌ಗಿಂತ 44 ಪಾಯಿಂಟ್ಸ್ ಮುನ್ನಡೆಯಲ್ಲಿದ್ದಾರೆ. ಬಾಬರ್ ಖಾತೆಯಲ್ಲಿ 871 ಅಂಕಗಳಿವೆ. ಟಿ20ಐ ತಂಡಗಳ ರ್‍ಯಾಂಕಿಂಗ್‌ನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ಭಾರತ ಮೊದಲ 3 ಸ್ಥಾನಗಳಲ್ಲಿವೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, December 2, 2020, 23:37 [IST]
Other articles published on Dec 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X