ಭಾರತ vs ಇಂಗ್ಲೆಂಡ್: ವಿಶೇಷ ದಾಖಲೆ ಸರಿದೂಗಿಸಿದ ಜೋ ರೂಟ್

ಲೀಡ್ಸ್: ಇಂಗ್ಲೆಂಡ್‌ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ತೃತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ಅಪರೂಪದ ದಾಖಲೆ ಸರಿದೂಗಿಸಿದ್ದಾರೆ. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತೀ ಹೆಚ್ಚು ಟೆಸ್ಟ್‌ ಶತಕ ಬಾರಿಸಿದ ಇಂಗ್ಲೆಂಡ್‌ ಆಟಗಾರನಾಗಿ ರೂಟ್ ಕೂಡ ಈಗ ದಾಖಲೆ ಪಟ್ಟಿ ಸೇರಿಕೊಂಡಿದ್ದಾರೆ. ಗುರುವಾರ (ಆಗಸ್ಟ್ 26) ನಡೆದ ದಿನದಾಟದ ವೇಳೆ ರೂಟ್ 6ನೇ ಟೆಸ್ಟ್ ಶತಕ ಬಾರಿಸುವ ಮೂಲಕ ಈ ವಿಶೇಷ ಸಾಧನೆ ಮಾಡಿದರು.

ಕುತೂಹಲಕಾರಿ ಸಂಗತಿಗಳ ಬಿಚ್ಚಿಟ್ಟ ನೀರಜ್ ಚೋಪ್ರಾ ಕೋಚ್ ಕಾಶೀನಾಥ್ ನಾಯ್ಕ್!ಕುತೂಹಲಕಾರಿ ಸಂಗತಿಗಳ ಬಿಚ್ಚಿಟ್ಟ ನೀರಜ್ ಚೋಪ್ರಾ ಕೋಚ್ ಕಾಶೀನಾಥ್ ನಾಯ್ಕ್!

ಇಂಗ್ಲೆಂಡ್ ಪರ ಒಂದು ವರ್ಷದಲ್ಲಿ ಅತೀ ಹೆಚ್ಚು ಟೆಸ್ಟ್‌ ಶತಕಗಳನ್ನು ಬಾರಿಸಿದ ದಾಖಲೆ ಈ ಮೊದಲು ಡೆನಿಸ್ ಕಾಂಪ್ಟನ್ ಹೆಸರಿನಲ್ಲಿತ್ತು. 1947ರಲ್ಲಿ ಕಾಂಪ್ಟನ್ ಆರು ಶತಕಗಳನ್ನು ಬಾರಿಸಿ ಈ ಸಾಧನೆ ಮಾಡಿದ್ದರು. ಅದಾಗಿ ಮೈಕಲ್ ವಾನ್ 2002ರಲ್ಲಿ 6 ಶತಕ ಬಾರಿಸಿ ಈ ದಾಖಲೆ ಸರಿದೂಗಿಸಿದ್ದರು. ಈಗ ರೂಟ್‌ ಕೂಡ ಆರು ಶತಕಗಳನ್ನು ಬಾರಿಸಿ ಈ ದಾಖಲೆ ಪಟ್ಟಿ ಸೇರಿದ್ದಾರೆ.

ಟೆಸ್ಟ್‌ನಲ್ಲಿ ಜೋ ರೂಟ್‌ ವೇಗದ ಶತಕ

ಟೆಸ್ಟ್‌ನಲ್ಲಿ ಜೋ ರೂಟ್‌ ವೇಗದ ಶತಕ

ಭಾರತ ವಿರುದ್ಧದ ತೃತೀಯ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ನಾಯಕ ಜೋ ರೂಟ್ ಶತಕ ಬಾರಿಸಲು ಹೆಚ್ಚು ಎಸೆತಗಳನ್ನು ಬಳಸಿಕೊಳ್ಳಲಿಲ್ಲ. 165 ಎಸೆತಗಳಲ್ಲಿ ರೂಟ್ 121 ರನ್ ಬಾರಿಸಿ ಜಸ್‌ಪ್ರೀತ್‌ ಬೂಮ್ರಾ ಅವರ 117.2ನೇ ಓವರ್‌ನಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರು. ಇಂಗ್ಲೆಂಡ್ ಪರ ಟಾಪ್ ಬ್ಯಾಟಿಂಗ್‌ ಆರ್ಡರ್‌ನಲ್ಲಿ ಬಂದಿದ್ದ ರೋರಿ ಬರ್ನ್ಸ್ 61, ಹಬೀಬ್ ಹಮೀದ್ 68, ಡಾವಿಡ್ ಮಲನ್ 70 ರನ್ ಕೊಡುಗೆ ನೀಡಿದ್ದರಿಂದ ರೂಟ್ ಬ್ಯಾಟಿಂಗ್‌ಗೆ ಬರುವಾಗ ಇಂಗ್ಲೆಂಡ್ ಉತ್ತಮ ಸ್ಥಿತಿಯಲ್ಲಿತ್ತು. ಹೀಗಾಗಿಯೇ ರೂಟ್ ವೇಗದಲ್ಲಿ ರನ್ ಗಳಿಸಲು ಮುಂದಾದರು. ದ್ವಿತೀಯ ಟೆಸ್ಟ್‌ನಲ್ಲಿ ಹೀನಾಯ ಸೋಲು ಕಂಡಿದ್ದ ಇಂಗ್ಲೆಂಡ್ ತೃತೀಯ ಟೆಸ್ಟ್‌ನಲ್ಲಿ ಉತ್ತಮ ತಿರುಗೇಟು ನೀಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಆಂಗ್ಲರು ಚತುರ ಆಟ ನೀಡಿದ್ದಾರೆ. ತೃತೀಯ ಟೆಸ್ಟ್‌ನಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಭಾರತ ಸದ್ಯ ಒತ್ತಡದಲ್ಲಿದೆ. ಗುರುವಾರ (ಆಗಸ್ಟ್ 26) ಎರಡನೇ ದಿನದಾಟ ಮುಗಿಯುವ ವೇಳೆ ಇಂಗ್ಲೆಂಡ್ ಗೆಲುವಿನ ಹಾದಿ ಸುಲಭವಾಗಿತ್ತು.

ಆರಂಭಿಕ ಇನ್ನಿಂಗ್ಸ್‌ನಲ್ಲಿ ಭಾರತ ಕೆಟ್ಟ ಬ್ಯಾಟಿಂಗ್

ಆರಂಭಿಕ ಇನ್ನಿಂಗ್ಸ್‌ನಲ್ಲಿ ಭಾರತ ಕೆಟ್ಟ ಬ್ಯಾಟಿಂಗ್

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತ ನೀರಸ ಬ್ಯಾಟಿಂಗ್ ಪ್ರದರ್ಶಿಸಿತ್ತು. ಯಾವುದೇ ಬ್ಯಾಟ್ಸ್‌ಮನ್‌ 20ಕ್ಕೂ ಅಧಿಕ ರನ್ ಗಳಿಸದಿರುವುದು ತಂಡದ ಕೆಟ್ಟ ಬ್ಯಾಟಿಂಗ್‌ಗೆ ಸಾಕ್ಷಿ ಹೇಳಿತ್ತು. ಭಾರತದ ಆರಂಭಿಕ ಇನ್ನಿಂಗ್ಸ್‌ನಲ್ಲಿ ಅತೀ ಹೆಚ್ಚು ವೈಯಕ್ತಿಕ ರನ್ ಗಳಿಸಿದ್ದೆಂದರೆ ರೋಹಿತ್ ಶರ್ಮಾ 19, ಅಜಿಂಕ್ಯ ರಹಾನೆ 18. ಉಳಿದಂತೆ ಎಲ್ಲರೂ 10ರೊಳಗಿನ ರನ್‌ಗೆ ಇನ್ನಿಂಗ್ಸ್‌ ಮುಗಿಸಿದ್ದರು. ರೋಹಿತ್ ಶರ್ಮಾ 19, ಕೆಎಲ್ ರಾಹುಲ್ 0, ಚೇತೇಶ್ವರ ಪೂಜಾರ 1, ವಿರಾಟ್ ಕೊಹ್ಲಿ 7, ಅಜಿಂಕ್ಯ ರಹಾನೆ 18, ರಿಷಭ್ ಪಂತ್ 2, ರವೀಂದ್ರ ಜಡೇಜಾ 4, ಮೊಹಮ್ಮದ್ ಶಮಿ 0, ಇಶಾಂತ್ ಶರ್ಮಾ 8, ಜಸ್ಪ್ರೀತ್ ಬೂಮ್ರಾ ೦, ಮೊಹಮ್ಮದ್ ಸಿರಾಜ್ 3 ರನ್‌ನೊಂದಿಗೆ ಭಾರತ 40.4 ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 78 ರನ್ ಗಳಿಸಿತ್ತು. ಭಾರತದ ಆರಂಭಿಕ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಬೌಲರ್‌ಗಳಾದ ಜೇಮ್ಸ್ ಆ್ಯಂಡರ್ಸನ್ 6 ರನ್‌ಗೆ 3, ಕ್ರೆಗ್ ಓವರ್‌ಟನ್ 14 ರನ್‌ಗೆ 3, ಆಲಿ ರಾಬಿನ್ಸನ್ 2, ಸ್ಯಾಮ್ ಕರನ್ 2 ವಿಕೆಟ್‌ನೊಂದಿಗೆ ಪಾರಮ್ಯ ಮೆರೆದರು.

ಸಿರಾಜ್ ಹಾಗು ಕೊಹ್ಲಿ ಸೇರಿ ಪಂತ್ ಮಾತಿಗೆ ವಿರುದ್ಧವಾಗಿ ನಡೆದಾಗ | Oneindia Kannada
ಆತಿಥೇಯ ಇಂಗ್ಲೆಂಡ್‌ಗೆ ಭರ್ಜರಿ ಮುನ್ನಡೆ

ಆತಿಥೇಯ ಇಂಗ್ಲೆಂಡ್‌ಗೆ ಭರ್ಜರಿ ಮುನ್ನಡೆ

ಆರಂಭಿಕ ಇನ್ನಿಂಗ್ಸ್‌ ಆಡುತ್ತಿರುವ ಇಂಗ್ಲೆಂಡ್ ಭರ್ಜರಿ ಮುನ್ನಡೆ ಗಳಿಸಿದೆ. ಗುರುವಾರ ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 129 ಓವರ್‌ಗೆ 8 ವಿಕೆಟ್ ಕಳೆದು 423 ರನ್ ಗಳಿಸಿ 345 ರನ್ ಮುನ್ನಡೆಯಲ್ಲಿತ್ತು. ರೋರಿ ಬರ್ನ್ಸ್ 61, ಹಸೀಬ್ ಹಮೀದ್ 68, ಡೇವಿಡ್ ಮಲನ್ 70, ಜೋ ರೂಟ್ 121, ಜಾನಿ ಬೈರ್‌ಸ್ಟೊ 29, ಜೋಸ್ ಬಟ್ಲರ್ 7, ಮೊಯೀನ್ ಅಲಿ 8, ಸ್ಯಾಮ್ ಕರನ್ 15, ಕ್ರೇಗ್ ಓವರ್‌ಟನ್ 24 ರನ್‌ ಬಾರಿಸಿದ್ದರು. ಓವರ್‌ಟನ್ ಮತ್ತು ರಾಬಿನ್ಸನ್ ಕ್ರೀಸ್‌ನಲ್ಲಿದ್ದರು. ಇಂಗ್ಲೆಂಡ್‌ ಇನ್ನಿಂಗ್ಸ್‌ನಲ್ಲಿ ಭಾರತದ ಜಸ್‌ಪ್ರೀತ್‌ ಬೂಮ್ರಾ 1, ಮೊಹಮ್ಮದ್ ಶಮಿ 3, ಮೊಹಮ್ಮದ್ ಸಿರಾಜ್ 2, ರವೀಂದ್ರ ಜಡೇಜಾ 2 ವಿಕೆಟ್ ಪಡೆದಿದ್ದರು. ಐದು ಪಂದ್ಯಗಳ ಈ ಟೆಸ್ಟ್‌ ಸರಣಿಯಲ್ಲಿ ಭಾರತ ಈಗಾಗಲೇ 1-0ಯ ಮುನ್ನಡೆಯಲ್ಲಿದೆ. ಆರಂಭಿಕ ಟೆಸ್ಟ್‌ ಡ್ರಾ ಆಗಿದ್ದರೆ, ದ್ವಿತೀಯ ಟೆಸ್ಟ್‌ನಲ್ಲಿ ಭಾರತ 151 ರನ್ ಜಯ ಗಳಿಸಿತ್ತು.

ಸಿಎಸ್‌ಕೆ ಯಾವಾಗಲೂ ಬಲಿಷ್ಠ ತಂಡವೆನಿಸಲು ಆತನೇ ದೊಡ್ಡ ಕಾರಣ: ಫಾಪ್ ಡು ಪ್ಲೆಸಿಸ್ಸಿಎಸ್‌ಕೆ ಯಾವಾಗಲೂ ಬಲಿಷ್ಠ ತಂಡವೆನಿಸಲು ಆತನೇ ದೊಡ್ಡ ಕಾರಣ: ಫಾಪ್ ಡು ಪ್ಲೆಸಿಸ್

ಭಾರತ, ಇಂಗ್ಲೆಂಡ್ ಪ್ಲೇಯಿಂಗ್ XI

ಇಂಗ್ಲೆಂಡ್ ಪ್ಲೇಯಿಂಗ್ XI: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ಸಿ), ಜಾನಿ ಬೈರ್‌ಸ್ಟೊ, ಜೋಸ್ ಬಟ್ಲರ್ (ವಿಕೆ), ಮೊಯೀನ್ ಅಲಿ, ಸ್ಯಾಮ್ ಕರನ್, ಕ್ರೇಗ್ ಓವರ್‌ಟನ್, ಓಲ್ಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್
ಬೆಂಚ್: ಸಾಕಿಬ್ ಮಹಮೂದ್, ಡೇನಿಯಲ್ ಲಾರೆನ್ಸ್, ಒಲ್ಲಿ ಪೋಪ್.

ಈ ಕೆಟ್ಟ ಆಟಗಾರನಿಗೆ ಅವಕಾಶ ಕೊಟ್ಟಿದ್ದೇ ಹಿನ್ನಡೆಗೆ ಕಾರಣ; ಕೊಹ್ಲಿ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ!ಈ ಕೆಟ್ಟ ಆಟಗಾರನಿಗೆ ಅವಕಾಶ ಕೊಟ್ಟಿದ್ದೇ ಹಿನ್ನಡೆಗೆ ಕಾರಣ; ಕೊಹ್ಲಿ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ!

ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆ), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.
ಬೆಂಚ್: ವೃದ್ಧಿಮಾನ್ ಸಾಹಾ, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮಯಾಂಕ್ ಅಗರ್ವಾಲ್, ಸೂರ್ಯಕುಮಾರ್ ಯಾದವ್, ಹನುಮ ವಿಹಾರಿ, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಅಭಿಮನ್ಯು ಈಶ್ವರನ್, ಪೃಥ್ವಿ ಶಾ

For Quick Alerts
ALLOW NOTIFICATIONS
For Daily Alerts
Story first published: Friday, August 27, 2021, 12:18 [IST]
Other articles published on Aug 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X