ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಹಿಟ್‌ಮ್ಯಾನ್‌' ರೋಹಿತ್‌ ವಿಶ್ವದಾಖಲೆಯನ್ನು ಮುರಿದ ಐಯಾನ್‌ ಮಾರ್ಗನ್‌!

ICC World Cup 2019 : ಮಾರ್ಗನ್ ಬ್ರೇಕ್ ಮಾಡಿದ್ದು ಅಂತಿಂತಾ ರೆಕಾರ್ಡ್ ಅಲ್ಲ..! | Oneindia Kannada
Eoin Morgan breaks the record of most sixes in an ODI innings

ಮ್ಯಾಂಚೆಸ್ಟರ್‌, ಜೂನ್‌ 18: ಬೆನ್ನು ನೋವಿನ ಸಮಸ್ಯೆ ಕಾರಣ ಮಂಗಳವಾರ ನಡೆದ ಅಫಘಾನಿಸ್ತಾನ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ನಾಯಕ ಐಯಾನ್‌ ಮಾರ್ಗನ್‌ ಆಡುವುದೇ ಅನುಮಾನವಿತ್ತು. ಆದರೆ, ಬೆನ್ನು ನೋವಿನಿಂದ ಚೇತರಿಸಿ ತಂಡದ ಸೇವೆಗೆ ಮರಳಿದ ಕ್ಯಾಪ್ಟನ್‌ ಮಾರ್ಗನ್‌ ಅಕ್ಷರಶಃ ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿ ಸ್ಫೋಟಕ ಶತಕದ ಮೂಲಕ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಮಂಗಳವಾರ ಟಾಸ್‌ ಗೆದ್ದ ಇಂಗ್ಲೆಂಡ್‌ ತಂಡ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಆದರೆ ಅಫಘಾನಿಸ್ತಾನ ತಂಡದ ಶಿಸ್ತಿನ ಬೌಲಿಂಗ್‌ ಎದುರು ಇಂಗ್ಲಿಷ್‌ ಬ್ಯಾಟ್ಸ್‌ಮನ್‌ಗಳು ಎಚ್ಚರಿಕೆಯ ಬ್ಯಾಟಿಂಗ್‌ ನಡೆಸುತ್ತಿದ್ದಾಗ ಇಡೀ ಕ್ರೀಡಾಂಗಣದಲ್ಲಿ ಹೆಚ್ಚೇನು ಸದ್ದಿರಲಿಲ್ಲ.

ಆದರೆ, ಈ ನಿಶಬ್ದ ಸಿಡಿಲಬ್ಬರದ ಬ್ಯಾಟಿಂಗ್‌ನ ಮುನ್ಸೂಚನೆ ಎಂದು ಯಾರೂ ಕೂಡ ಅಂದಾಜಿಸಿರಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ ಜಾನಿ ಬೈರ್‌ಸ್ಟೋವ್‌ 99 ಎಸೆತಗಳಲ್ಲಿ 90 ರನ್‌ಗಳನ್ನು ಗಳಿಸಿ ಶತಕದ ಹೊಸ್ತಿಲಲ್ಲಿ ನಿರಾಸೆ ಅನುಭವಿ ಹೊರನಡೆದಿದ್ದರು. ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ನಾಯಕ ಐಯಾನ್‌ ಮಾರ್ಗನ್‌ ಎಲ್ಲರ ಹುಬ್ಬೇರುವಂತಹ ವಿಸ್ಫೋಟಕ ಬ್ಯಾಟಿಂಗ್‌ ಮಾಡುತ್ತಾರೆಂದು ಸ್ವತಃ ಇಂಗ್ಲೆಂಡ್‌ ತಂಡದ ಆಟಗಾರರು ಕೂಡ ಅಂದಾಜಿಸಿರಲಿಲ್ಲ. ಏಕೆಂದರೆ, ಈ ಪಂದ್ಯಕ್ಕೂ ಮುನ್ನ ಮಾರ್ಗನ್‌ ಗಂಭೀರ ಸ್ವರೂಪದ ಬೆನ್ನು ನೋವಿನ ಸಮಸ್ಯೆ ಎದುರಿಸಿದ್ದರು.

ವೆಸ್ಟ್‌ ಇಂಡೀಸ್‌ ವಿರುದ್ಧದ ಭರ್ಜರಿ ಗೆಲುವಿನ ಬಳಿಕ ಶಾಕಿಬ್‌ ಹೇಳಿದ್ದಿದು!ವೆಸ್ಟ್‌ ಇಂಡೀಸ್‌ ವಿರುದ್ಧದ ಭರ್ಜರಿ ಗೆಲುವಿನ ಬಳಿಕ ಶಾಕಿಬ್‌ ಹೇಳಿದ್ದಿದು!

ಆದರೆ, ಅಫಘಾನಿಸ್ತಾನ ತಂಡದ ಗುಣಮಟ್ಟದ ಬೌಲಿಂಗ್‌ ದಾಳಿಯನ್ನು ಧೂಳೀಪಟ ಮಾಡಿದ ಮಾರ್ಗನ್‌, ಕೇವಲ 71 ಎಸೆತಗಳಲ್ಲಿ 148 ರನ್‌ಗಳ ಅದ್ಭುತ ಶತಕ ದಾಘಲಿಸಿದರು. ಇದು ವಿಶ್ವಕಪ್‌ ಇತಿಹಾಸದಲ್ಲಿ ಇಂಗ್ಲೆಂಡ್‌ ತಂಡದ ಪರ ದಾಖಲಾದ ಅತ್ಯಂತ ವೇಗದ ಶತಕ ಕೂಡ. ಟೂರ್ನಿಯಲ್ಲಿ ಈ ಮೊದಲು ಪಾಕಿಸ್ತಾನ ವಿರುದ್ಧ ಜೋಸ್‌ ಬಟ್ಲರ್‌ 85 ಎಸೆತಗಳಲ್ಲಿ ಶತಕ ಸಿಡಿಸಿ ಈ ದಾಖಲೆ ಮುರಿದಿದ್ದರು. ಆದರೆ, ಮಾರ್ಗನ್‌ ಶತಕ ಸಿಡಿಸಲು ತೆಗೆದುಕೊಂಡದ್ದು ಕೇವಲ 57 ಎಸೆತಗಳನ್ನು ಮಾತ್ರ. ಅಂದಹಾಗೆ 148 ರನ್‌ ಒಡಿಐ ವೃತ್ತಿ ಬದುಕಿನಲ್ಲಿ ಮಾರ್ಗನ್‌ ದಾಖಲಿಸಿದ ಗರಿಷ್ಠ ಮೊತ್ತವಾಗಿದೆ.

ಇದರೊಂದಿಗೆ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 397 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು.

 ರೋಹಿತ್‌ ದಾಖಲೆ ಮುರಿದ ಮಾರ್ಗನ್‌

ರೋಹಿತ್‌ ದಾಖಲೆ ಮುರಿದ ಮಾರ್ಗನ್‌

ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಚೆಂಡಿಗೆ ದಶ ದಿಕ್ಕುಗಳ ದರ್ಶನ ಮಾಡಿಸಿದ ಮಾರ್ಗನ್‌ ತಮ್ಮ ಸ್ಫೋಟಕ ಶತಕದಲ್ಲಿ ಸಿಡಿಸಿದ್ದು ಬರೋಬ್ಬರಿ 17 ಸಿಕ್ಸರ್‌ಗಳನ್ನು. ಈ ಮೂಲಕ ಒಡಿಐ ಕ್ರಿಕೆಟ್‌ ಪಂದ್ಯವೊಂದರ ಇನಿಂಗ್ಸ್‌ನಲ್ಲಿ ಬ್ಯಾಟ್ಸ್‌ಮನ್‌ ಒಬ್ಬ ದಾಖಲಿಸಿದ್ದ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಮಾರ್ಗನ್‌ ಪುಡಿಗಟ್ಟಿದರು. ಟೀಮ್‌ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ, 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದ್ವಿಶತಕ ಸಿಡಿಸಿದ್ದ ವೇಳೆ 16 ಸಿಕ್ಸರ್‌ಗಳನ್ನು ಸಿಡಿಸಿದ್ದು ಈ ಹಿಂದಿನ ವಿಶ್ವ ದಾಖಲೆಯಾಗಿತ್ತು. ಅಂದಹಾಗೆ ಮಾರ್ಗನ್‌ಗೆ ಈ ದಾಖಲೆಯನ್ನು ಮತ್ತಷ್ಟು ಬಲ ಪಡಿಸುವ ಉತ್ತಮ ಅವಕಾಶವಿತ್ತಾದರೂ, 17ನೇ ಸಿಕ್ಸರ್‌ ಸಿಡಿಸಿದ ಮರು ಎಸೆತದಲ್ಲೇ ಗುಲ್ಬದೀನ್‌ ನೈಬ್‌ಗೆ ವಿಕೆಟ್‌ ಒಪ್ಪಿಸಿದರು. ಲಾಂಗ್‌ ಕಡೆಗೆ ಸಿಕ್ಸರ್‌ ಬಾರಿಸುವ ಪ್ರಯತ್ನದಲ್ಲಿ ರೆಹಮತ್‌ ಶಾಗೆ ಕ್ಯಾಚಿತ್ತರು. ಇದೇ ವೇಳೆ ವಿಶ್ವಕಪ್‌ ಇತಿಹಾಸದಲ್ಲಿ ಕ್ರಿಸ್‌ ಗೇಲ್‌ 2015ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ದ್ವಿಶತಕ ಸಿಡಿಸಿದಾಗ 16 ಸಿಕ್ಸರ್‌ಗಳನ್ನು ಬಾರಿಸಿ ದಾಖಲೆ ಬರೆದಿದ್ದರು. ಮಾರ್ಗನ್‌ ಈ ದಾಖಲೆಯನ್ನೂ ಅಳಿಸಿ ಹಾಕಿದ್ದಾರೆ.

ವಿಶ್ವಕಪ್‌ನಲ್ಲಿ ನಾಲ್ಕನೇ ಅತಿ ವೇಗದ ಶತಕ

ವಿಶ್ವಕಪ್‌ನಲ್ಲಿ ನಾಲ್ಕನೇ ಅತಿ ವೇಗದ ಶತಕ

ಆಫ್ಘನ್‌ ದಾಳಿಯನ್ನು ಧೂಳೀ ಪಟ ಮಾಡಿದ ಇಂಗ್ಲೆಂಡ್‌ ತಂಡದ ನಾಯಕ ಐಯಾನ್‌ ಮಾರ್ಗನ್‌ ವಿಶ್ವಕಪ್‌ ಇತಿಹಾಸದ ನಾಲ್ಕನೇ ಅತಿ ವೇಗದ ಶತಕದ ದಾಖಲೆ ಬರೆದರು. ಪಂದ್ಯದಲ್ಲಿ ಕೇವಲ 57 ಎಸೆತಗಳಲ್ಲಿ ಶತಕ ಸಿಡಿಸಿದ ಮಾರ್ಗನ್‌, ಈ ಸಾಧನೆ ಮೆರೆದರು. ಅಂದಹಾಗೆ 2011ರ ವಿಶ್ವಕಪ್‌ನಲ್ಲಿ ಐರ್ಲೆಂಡ್‌ ತಂಡದ ಆಲ್‌ರೌಂಡರ್‌ ಕೆವಿನ್‌ ಓಬ್ರಿಯಾನ್‌ 50 ಎಸೆತಗಳಲ್ಲಿ ಶತಕ ಸಿಡಿಸಿರುವುದು ಒಡಿಐ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ದಾಖಲಾದ ಅತಿ ವೇಗದ ಶತಕವಾಗಿದೆ. ಇನ್ನು 2015ರ ವಿಶ್ವಕಪ್‌ನಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ 51 ಎಸೆತಗಳಲ್ಲಿ ಶತಕ ಬಾರಿಸಿದರೆ, ಎಬಿ ಡಿ'ವಿಲಿಯರ್ಸ್‌ 52 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು.

ಒಡಿಐ ಇನಿಂಗ್ಸ್‌ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟ್ಸ್‌ಮನ್ಸ್‌

ಒಡಿಐ ಇನಿಂಗ್ಸ್‌ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟ್ಸ್‌ಮನ್ಸ್‌

ಆಟಗಾರ ತಂಡ ಎದುರಾಳಿ ವರ್ಷ ರನ್‌ ಸಿಕ್ಸರ್‌
ಮಾರ್ಗನ್‌ ಇಂಗ್ಲೆಂಡ್‌ ಅಫಘಾನಿಸ್ತಾನ 2019 148 17
ರೋಹಿತ್‌ ಭಾರತ ಆಸ್ಟ್ರೇಲಿಯಾ 2013 209 16
ಎಬಿಡಿ ದ.ಆಫ್ರಿಕಾ ವೆಸ್ಟ್‌ ಇಂಡೀಸ್‌ 2015 149 16
ಕ್ರಿಸ್‌ ಗೇಲ್‌ ವಿಂಡೀಸ್‌ ಜಿಂಬಾಬ್ವೆ 2015 215 16
ವ್ಯಾಟ್ಸನ್‌ ಆಸೀಸ್‌ ಬಾಂಗ್ಲಾದೇಶ 2011 185* 15

ಐಯಾನ್‌ ಮಾರ್ಗನ್‌ ಒಡಿಐ ಸಾಧನೆ

ಐಯಾನ್‌ ಮಾರ್ಗನ್‌ ಒಡಿಐ ಸಾಧನೆ

227 ಪಂದ್ಯ
7226 ರನ್‌
148 ಗರಿಷ್ಠ
13 ಶತಕಗಳು
46 ಅರ್ಧಶತಕ
592 ಫೋರ್‌
194 ಸಿಕ್ಸರ್ಸ್‌

Story first published: Tuesday, June 18, 2019, 19:25 [IST]
Other articles published on Jun 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X