ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾಕ್ಕೆ ಭಾರತ 'ಸಿ' ತಂಡ ಕಳುಹಿಸಿದರೂ ಗೆಲ್ಲುತ್ತೆ: ಪಾಕ್ ಮಾಜಿ ಕ್ರಿಕೆಟರ್

Even if India sends a C team to Sri Lanka they will win, says Kamran Akmal

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇನ್ಝಮಾಮ್ ಉಲ್ ಹಕ್ ಟೀಮ್ ಇಂಡಿಯಾವನ್ನು ಮನಸಾರೆ ಶ್ಲಾಘಿಸಿದ್ದರು. ಈಗ ಪಾಕ್ ಮಾಜಿ ಬ್ಯಾಟ್ಸ್‌ಮನ್‌-ವಿಕೆಟ್ ಕೀಪರ್ ಕಮ್ರನ್ ಅಕ್ಮಲ್ ಕೂಡ ವಿರಾಟ್ ಕೊಹ್ಲಿ ಪಡೆಯನ್ನು ಶ್ಲಾಘಿಸಿದ್ದಾರೆ. ಪ್ರಸ್ತುತ ದಿನಗಳಲ್ಲಿ ಭಾರತ ವಿಶ್ವದ ಅತೀ ಬಲಿಷ್ಠ ತಂಡವಾಗಿದೆ ಎಂದು ಅಕ್ಮಲ್ ಹೊಗಳಿದ್ದಾರೆ.

ತೆಂಡೂಲ್ಕರ್ ಪುತ್ರಿ ಸಾರಾ ಜೊತೆಗಿನ 'ಗುಸುಗುಸು' ಬಗ್ಗೆ ಬಾಯ್ತೆರೆದ ಗಿಲ್ತೆಂಡೂಲ್ಕರ್ ಪುತ್ರಿ ಸಾರಾ ಜೊತೆಗಿನ 'ಗುಸುಗುಸು' ಬಗ್ಗೆ ಬಾಯ್ತೆರೆದ ಗಿಲ್

ಕಮ್ರನ್ ಅಕ್ಮಲ್ ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ಮಾತನಾಡಲು ಕಾರಣವಿದೆ. ಏಕಕಾಲದಲ್ಲಿ ಭಾರತ ತಂಡ ಎರಡು ವಿಭಾಗಗಳಾಗಿ ವಿಂಗಡಿಸಲ್ಪಟ್ಟು ಪ್ರವಾಸ ಸರಣಿಗಳನ್ನು ಕೈಗೊಳ್ಳಲಿದೆ. ಮುಂದಿನ ಮೂರು ತಿಂಗಳು ಭಾರತೀಯ ಟೆಸ್ಟ್‌ ತಂಡ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡರೆ ಮತ್ತೊಂದು ತಂಡ (ಸೀಮಿತ ಓವರ್‌) ಶ್ರೀಲಂಕಾಕ್ಕೆ ಪ್ರವಾಸ ಹೋಗಲಿದೆ.

ಇಂಗ್ಲೆಂಡ್‌ಗೆ ಹೋಗುವ ಭಾರತೀಯ ತಂಡ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಆಡಿದರೆ ಆ ಬಳಿಕ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಡಲಿದೆ. ಶ್ರೀಲಂಕಾಕ್ಕೆ ಹೋಗುವ ಮತ್ತೊಂದು ತಂಡ ಅಲ್ಲಿ 3 ಏಕದಿನ ಮತ್ತು 3 ಟಿ20ಐ ಪಂದ್ಯಗಳನ್ನಾಡಲಿದೆ.

CWC Super League ಟೇಬಲ್‌ನಲ್ಲಿ ಭಾರತ ಯಾವ ಸ್ಥಾನದಲ್ಲಿದೆ ಗೊತ್ತಾ?!CWC Super League ಟೇಬಲ್‌ನಲ್ಲಿ ಭಾರತ ಯಾವ ಸ್ಥಾನದಲ್ಲಿದೆ ಗೊತ್ತಾ?!

ಭಾರತ ತಂಡದಲ್ಲಿರುವ ಬೆಂಚ್ ಪ್ಲೇಯರ್ಸ್ ಒಟ್ಟು ಸೇರಿಸಿ ತಂಡ ರಚಿಸಿದರೂ ಬಲಿಷ್ಠ ತಂಡ ರಚನೆಯಾಗಲಿದೆ ಎಂದು ಅರಿತಿರುವ ಕಮ್ರನ್ ಅಕ್ಮಲ್ ಮಾತನಾಡಿ, 'ಭಾರತ ತಂಡದ ಮನಸ್ಥಿತಿಗೆ ಇದರ ಎಲ್ಲಾ ಕ್ರೆಡಿಟ್ ಸಲ್ಲುತ್ತದೆ. ಎರಡು ತಂಡಗಳು ಶೀಘ್ರವೇ ಸರಣಿ ಆಡಲಿವೆ. ಒಂದು ಇಂಗ್ಲೆಂಡ್‌ನಲ್ಲಿ ಮತ್ತೊಂದು ಶ್ರೀಲಂಕಾದಲ್ಲಿ. ಒಂದು ವೇಳೆ ಭಾರತ ತನ್ನ 'ಸಿ' ತಂಡವನ್ನು ಶ್ರೀಲಂಕಾಕ್ಕೆ ಕಳುಹಿಸಿದರೂ ಭಾರತ ಗೆಲ್ಲುತ್ತದೆ,' ಎಂದಿದ್ದಾರೆ.

Story first published: Saturday, May 29, 2021, 20:19 [IST]
Other articles published on May 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X