ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಮ್ಮನ್ನು ಬೆರಗುಗೊಳಿಸುವ ಕ್ರಿಕೆಟ್ ಜಗತ್ತಿನ 5 ಸತ್ಯ ಸಂಗತಿಗಳು!

Five Facts of Cricket World That Can Surprise You

ಬೆಂಗಳೂರು: ಹಲವಾರು ರಾಷ್ಟ್ರಗಳು ಸಂಭ್ರಮಿಸುವ, ಪ್ರೀತಿಸುವ, ಪೂಜಿಸುವ ನೆಚ್ಚಿನ ಕ್ರೀಡೆ ಕ್ರಿಕೆಟ್. ಕ್ರಿಕೆಟ್‌ಗಿರುವ ಕ್ರೇಸ್ ಅಂತದ್ದು. ಅದು ದಿನವಿಡೀ ನಡೆಯುವ ಟೆಸ್ಟ್, ಒಂದಿಷ್ಟು ಕಾಲ ಕುತೂಹಲಕೆರಳಿಸುವ ಏಕದಿನ ಪಂದ್ಯ, ಅಥವಾ ಸರಕ್ಕನೆ ಮುಗಿದೇಬಿಡುವ ಟಿ20 ಪಂದ್ಯ ಏನೇ ಇರಲಿ; ನಮ್ಮಲ್ಲಿ ಕ್ರಿಕೆಟ್‌ಗೆ ಹುಚ್ಚು ಅಭಿಮಾನಿಗಳಂತೂ ಇದ್ದಾರೆ. ಇದೇ ಕಾರಣಕ್ಕೆ ಕ್ರಿಕೆಟ್‌ ದೇಶವೊಂದರ ಆದಾಯದ ಮೇಲೆ ಗಣನೀಯ ಪರಿಣಾಮ ಬೀರುವ ಪ್ರಮುಖ ಉದ್ಯಮವಾಗಿ ಬೆಳೆಯುತ್ತಿದೆ. ಅಷ್ಟೇ ಅಲ್ಲ, ಕ್ರಿಕೆಟ್‌ ಆಟ ದೇಶವೊಂದರ ಜನಪ್ರಿಯತೆಗೂ ಕಾರಣವಾಗುತ್ತಿದೆ, ಪ್ರತಿಷ್ಠೆಯ ವಿಚಾರವಾಗಿಯೂ ಬೆಳೆಯುತ್ತಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ನಾಯಕರ ವಾರ್ಷಿಕ ಸಂಬಳ ಎಷ್ಟಿರುತ್ತದೆ ಗೊತ್ತಾ?!ಅಂತಾರಾಷ್ಟ್ರೀಯ ಕ್ರಿಕೆಟ್‌ ನಾಯಕರ ವಾರ್ಷಿಕ ಸಂಬಳ ಎಷ್ಟಿರುತ್ತದೆ ಗೊತ್ತಾ?!

ಸುದೀರ್ಘ ಇತಿಹಾಸವಿರುವ ಕ್ರಿಕೆಟ್‌ ಆಟದಲ್ಲಿ ಅಪರೂಪದ ದಾಖಲೆಗಳಾಗಿವೆ. ಕೇಳುವಾಗ ನಾವು ಅಚ್ಚರಿಗೊಳ್ಳುವ ಘಟನೆಗಳೂ ಕ್ರಿಕೆಟ್‌ ಅಂಗಳದಲ್ಲಿ ಬಹಳಷ್ಟು ನಡೆದಿವೆ.

'ಭಾರತ-ಪಾಕ್ ಕ್ರಿಕೆಟಿಗರು ಜೊತೆಯಲ್ಲಿ ಊಟ ಮಾಡಿದ್ದನ್ನು ನೋಡಿದ್ದೇನೆ''ಭಾರತ-ಪಾಕ್ ಕ್ರಿಕೆಟಿಗರು ಜೊತೆಯಲ್ಲಿ ಊಟ ಮಾಡಿದ್ದನ್ನು ನೋಡಿದ್ದೇನೆ'

ಕ್ರಿಕೆಟ್‌ ಜಗತ್ತು ಕಂಡಿರುವ, ನೀವು ಓದುವಾಗ ಅಚ್ಚರಿ ಅನಿಸಬಲ್ಲ ಐದು ಸತ್ಯ ಸಂಗತಿಗಳು ಇಲ್ಲಿವೆ. ಇವೊಂಥರ ಅಪರೂಪದ ದಾಖಲೆಗಳೂ ಹೌದು.

1. ಏಕಮಾತ್ರ ತಂಡ ಭಾರತ

1. ಏಕಮಾತ್ರ ತಂಡ ಭಾರತ

60 ಓವರ್‌, 50, ಓವರ್‌ ಮತ್ತು 20 ಓವರ್‌ಗಳ ವಿಶ್ವಕಪ್‌ ಗೆದ್ದ ವಿಶ್ವದ ಏಕಮಾತ್ರ ತಂಡ ಎಂಬ ಹೆಗ್ಗಳಿಗೆ ಭಾರತ ಪಾತ್ರವಾಗಿದೆ.
* 1983ರಲ್ಲಿ ಕಪಿಲ್ ದೇವ್ ನಾಯಕತ್ವದ ಟೀಮ್ ಇಂಡಿಯಾ 60 ಓವರ್‌ಗಳ ಪಂದ್ಯದಲ್ಲಿ ವಿಶ್ವಕಪ್ ಜಯಿಸಿತ್ತು.
* ಎಂಎಸ್ ಧೋನಿ ನಾಯಕತ್ವದ ಭಾರತ ತಂಡ 2011ರಲ್ಲಿ 50 ಓವರ್‌ಗಳ ವಿಶ್ವಕಪ್ ಗೆದ್ದಿತ್ತು.
* 2007ರಲ್ಲಿ ಕೂಲ್ ಕ್ಯಾಪ್ಟನ್ ಧೋನಿ ಮುಂದಾಳತ್ವದಲ್ಲಿ ಭಾರತ 20 ಓವರ್‌ಗಳ ವಿಶ್ವಕಪ್ ತನ್ನದಾಗಿಸಿಕೊಂಡಿತ್ತು.
ವಿಶೇಷವೆಂದರೆ ಹೆಚ್ಚು ಸಾರಿ ವಿಶ್ವಕಪ್‌ಗಳನ್ನು ಗೆದ್ದಿರುವ ಆಸ್ಟ್ರೇಲಿಯಾಕ್ಕೂ ಈ ದಾಖಲೆ ಮುರಿಯಲಾಗಿಲ್ಲ!

2. ಎರಡೆರಡು ತಂಡಕ್ಕೆ ಆಡಿದ್ದ ಭಾರತೀಯ

2. ಎರಡೆರಡು ತಂಡಕ್ಕೆ ಆಡಿದ್ದ ಭಾರತೀಯ

ಇಂಗ್ಲೆಂಡ್ ಮತ್ತು ಭಾರತ ಎರಡೂ ತಂಡಗಳ ಪರ ಟೆಸ್ಟ್ ಆಡಿದ ದಾಖಲೆ ಬಾಲಿವುಡ್ ನಟ ಸೈಫ್ ಆಲಿ ಖಾನ್ ಅವರ ಅಜ್ಜ ಇಫ್ತಿಕರ್ ಅಲಿ ಖಾನ್ ಪಟೌಡಿ ಅವರ ಹೆಸರಿನಲ್ಲಿದೆ. ಭಾರತ ತಂಡದ ನಾಯಕರಾಗಿದ್ದ ಪಟೌಡಿ ಭಾರತ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದಾಗ 1946ರಲ್ಲಿ ಭಾರತ ಪರ ಆಡಿದ್ದರು. ಅದಕ್ಕೂ ಹಿಂದೆ ಅಂದರೆ 1932 ಮತ್ತು 1934ರಲ್ಲಿ ಇದೇ ಪಟೌಡಿ ಇಂಗ್ಲೆಂಡ್ ತಂಡದ ಪರ ಆಡಿದ್ದರು.

3. ರವಿಶಾಸ್ತ್ರಿ ಹೆಸರಿನಲ್ಲಿ ವಿಶಿಷ್ಠ ದಾಖಲೆ

3. ರವಿಶಾಸ್ತ್ರಿ ಹೆಸರಿನಲ್ಲಿ ವಿಶಿಷ್ಠ ದಾಖಲೆ

ಒಂದು ಓವರ್‌ನಲ್ಲಿ 6 ಸಿಕ್ಸ್‌ಗಳನ್ನು ಬಾರಿಸಿದ ಮೊದಲ ಭಾರತೀಯನೆಂಬ ದಾಖಲೆ ಟೀಮ್ ಇಂಡಿಯಾದ ಮಾಜಿ ಆಟಗಾರ, ಈಗ ಭಾರತ ತಂಡದ ಮುಖ್ಯ ಕೋಚ್ ಆಗಿರುವ ರವಿ ಶಾಸ್ತ್ರಿ ಹೆಸರಿನಲ್ಲಿದೆ. ದೇಸಿ ಕ್ರಿಕೆಟ್‌ನಲ್ಲಿ ಬಾಂಬೆ ಪರ ಆಡುತ್ತಿದ್ದ ಶಾಸ್ತ್ರಿ, ಬರೋಡಾ ವಿರುದ್ಧ 6 ಎಸೆತಗಳಲ್ಲಿ 36 ರನ್ ಗಳಿಸಿದ್ದರು. ಆದರೆ ಇದೇ ದಾಖಲೆಗಾಗಿ ಯುವರಾಜ್ ಸಿಂಗ್ 2007ರ ಟಿ20 ವಿಶ್ವಕಪ್‌ನಲ್ಲಿ ವಿಶ್ವದ ಗಮನ ಸೆಳೆದಿದ್ದರು.

4. ಸಚಿನ್‌ಗಿಂತ ಕಾಂಬ್ಳಿ ಮೇಲು

4. ಸಚಿನ್‌ಗಿಂತ ಕಾಂಬ್ಳಿ ಮೇಲು

ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರು ವಿನೋದ್ ಕಾಂಬ್ಳಿಗಿಂತ ಕಡಿಮೆ ಸರಾಸರಿ ಹೊಂದಿದ್ದಾರೆ. ಕಾಂಬ್ಳಿಯ ಟೆಸ್ಟ್ ಸರಾಸರಿ 54.2 ಇದ್ದರೆ, ಮಾಸ್ಟರ್ ಬ್ಲಾಸ್ಟರ್ ಸರಾಸರಿ 53.78 ಇದೆ. ಕಾಂಬ್ಳಿ 17 ಟೆಸ್ಟ್ ಪಂದ್ಯಗಳಲ್ಲಿ 1084 ರನ್ ಗಳಿಸಿದ್ದಾರೆ. ಸಚಿನ್ 200 ಟೆಸ್ಟ್ ಪಂದ್ಯಗಳಲ್ಲಿ 15921 ರನ್ ದಾಖಲೆ ಹೊಂದಿದ್ದಾರೆ.

5. ಒಂದು ಕಿಸ್ಸಿನ ಕತೆ

5. ಒಂದು ಕಿಸ್ಸಿನ ಕತೆ

ಟೆಸ್ಟ್ ಕ್ರಿಕೆಟ್ ಪಂದ್ಯದ ವೇಳೆ ಕಿಸ್ ಮಾಡಲ್ಪಟ್ಟ ಮೊದಲ ಭಾರತೀಯ ಎಂಬ ವಿಶಿಷ್ಠ ದಾಖಲೆ ಅಬ್ಬಾಸ್ ಅಲಿ ಬೇಗ್‌ ಹೆಸರಿನಲ್ಲಿದೆ. 1960ರಲ್ಲಿ ಆಸ್ಟ್ರೇಲಿಯಾ vs ಭಾರತ ಟೆಸ್ಟ್ ಪಂದ್ಯದ ವೇಳೆ ಒಬ್ಬಳು ಹುಡುಗಿ ಮೈದಾನಕ್ಕೆ ಓಡಿ ಬಂದು ಬ್ಯಾಟ್ಸ್‌ಮನ್ ಅಬ್ಬಾಸ್‌ಗೆ ಮುತ್ತು ಕೊಟ್ಟಿದ್ದರು. ಟೆಸ್ಟ್ ಪಂದ್ಯದ ವೇಳೆ ಮುತ್ತಿಕ್ಕಿದ ಮೊದಲ ಭಾರತೀಯನಾಗಿ ಬೇಗ್ ಆವತ್ತು ದಾಖಲೆ ನಿರ್ಮಿಸಿದ್ದರು.

Story first published: Wednesday, June 24, 2020, 21:41 [IST]
Other articles published on Jun 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X